ಜೈಲಿನಿಂದಲೇ ತಯಾರಿ: IIT ಪರೀಕ್ಷೆಯಲ್ಲಿ 54ನೇ Rank ಗಳಿಸಿದ ಕೊಲೆ ಆರೋಪಿ
- IIT ಪರೀಕ್ಷೆಯಲ್ಲಿ 54ನೇ Rank ಗಳಿಸಿದ ಕೊಲೆ ಆರೋಪಿ
- ವಿಚಾರಣಾಧೀನ ಕೈದಿ ಕೌಶಲೇಂದ್ರ ಕುಮಾರ್ ಸಾಧನೆ
- ಜೈಲಿನಿಂದಲೇ ಪರೀಕ್ಷೆಗೆ ತಯಾರಿ ನಡೆಸಿದ ಆರೋಪಿ
ನವಾಡ(ಬಿಹಾರ ಮಾ.25): ಅತ್ಯಂತ ಕೆಟ್ಟ ಸ್ಥಳಗಳಲ್ಲಿಯೂ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ, ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಯುವಕನೊಬ್ಬ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿ (Roorkee) ನಡೆಸಿದ ಸ್ನಾತಕೋತ್ತರ ಜಂಟಿ ಪ್ರವೇಶ ಪರೀಕ್ಷೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾನೆ.
ನವಾಡ ಜೈಲಿನಲ್ಲಿರುವ 22 ವರ್ಷದ ವಿಚಾರಣಾಧೀನ ಕೈದಿ ಕೌಶಲೇಂದ್ರ ಕುಮಾರ್ ಅಲಿಯಾಸ್ ಸೂರಜ್ ಅವರೇ ಈ ಸಾಧನೆ ಮಾಡಿದವರು. ಈ ವರ್ಷ ಫೆಬ್ರವರಿ 13 ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿ, ದೇಶದ ವಿವಿಧ ಕೇಂದ್ರಗಳಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕೌಶಲೇಂದ್ರ ಕುಮಾರ್ 54 ನೇ Rank ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರದ ವಾರ್ಸಾಲಿಗಂಜ್ ಪಟ್ಟಣದ (Warsaliganj town) ಮೋಸ್ಮಾ ನಿವಾಸಿಯಾಗಿರುವ ಕಂಬಿ ಹಿಂದೆಯೇ ಕುಳಿತು ಕೌಶಲೇಂದ್ರ ಕುಮಾರ್ (Kaushlendra Kumar) ಪರೀಕ್ಷೆಗೆ ತಯಾರಿ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಬೆಂಗಳೂರು; ಜೈಲಿನಿಂದಲೇ ಸ್ಕೆಚ್, ಬ್ಯಾಂಕ್‌ನಲ್ಲಿಯೇ ರೌಡಿಶೀಟರ್ ಕೊಚ್ಚಿದರು
ಕಳೆದ ಹನ್ನೊಂದು ತಿಂಗಳಿನಿಂದ ಕೌಶಲೇಂದ್ರ ಕುಮಾರ್ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾನೆ. ಏಪ್ರಿಲ್ 2021 ರಲ್ಲಿ, ಮೋಸ್ಮಾ ಗ್ರಾಮದಲ್ಲಿ (Mosma village) ನಡೆದ ಎರಡು ಗುಂಪುಗಳ ನಡುವೆ ಚರಂಡಿಗೆ ಸಂಬಂಧಿಸಿದ ವಿವಾದದ ವಿಕೋಪಕ್ಕೆ ತಿರುಗಿ ಪರಸ್ಪರ ಗಲಾಟೆಯಾಗಿತ್ತು. ಈ ಗಲಾಟೆಯಲ್ಲಿ ಗಾಯಗೊಂಡ ಸಂಜಯ್ ಯಾದವ್ (Sanjay Yadav) ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಸೂರಜ್ ಮತ್ತು ಇತರ ಹಲವರನ್ನು ಬಂಧಿಸಿ ನಾವಡಾ ಜೈಲಿನಲ್ಲಿ (Nawada jail) ಇರಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗುವುದು ಯಾರಿಗಾದರೂ ಜೀವನವನ್ನು ಬದಲಾಯಿಸುವ ಪರಿಸ್ಥಿತಿ, ಆದರೆ ಸೂರಜ್ ಅವರ ಮನಸ್ಸಿನಲ್ಲಿ ಬೇರೆ ವಿಷಯಗಳಿದ್ದವು.
ಜೈಲಿನ ಕಿರಿಕಿರಿ ಪರಿಸರದ ಮಧ್ಯೆಯೂ ಅವರು ಕಷ್ಟಪಟ್ಟು ಅಧ್ಯಯನ ಮಾಡಲು ಶುರು ಮಾಡಿದರು. IIT-JAM ಅನ್ನು ಭೇದಿಸಲು ತಮಗೆ ತಾವೇ ಸ್ವತಃ ಸವಾಲು ಹಾಕಿಕೊಂಡರು. ಈ ಸವಾಲು ಸುಲಭದ ಮಾತಾಗಿರಲಿಲ್ಲ. ಕೌಶಲೇಂದ್ರ ಕುಮಾರ್ ಇದ್ದ ಜೈಲಿನಲ್ಲಿ 614 ಕೈದಿಗಳು ಇರಬಹುದಾದ ಸಾಮರ್ಥ್ಯವಿದೆ ಆದರೆ ಪ್ರಸ್ತುತ 1000 ಕ್ಕೂ ಹೆಚ್ಚು ಕೈದಿಗಳನ್ನು ಅದರಲ್ಲಿ ಇರಿಸಲಾಗಿತ್ತು. ಇದರಿಂದ ಕೌಶಲೇಂದ್ರ ಕುಮಾರ್ ಸ್ಥಳದ ಕೊರತೆ, ಗಲಾಟೆ, ಜೊತೆಗೆ ಕೊಲೆ ಆರೋಪಿಯಾಗಿ ಜೈಲಿನಲ್ಲಿರುವ ಮಾನಸಿಕ ಒತ್ತಡದಿಂದ ಹೆಣಗಾಡಬೇಕಾಯಿತು. ಆದರೂ ಪ್ರತಿಷ್ಠಿತ ಪರೀಕ್ಷೆಯಲ್ಲಿ ತೇರ್ಗಡೆಯಾಗುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಮಗಳ ಎದುರಲ್ಲೇ ತಂದೆಯ ಮಾರಣಹೋಮ: ಜೈಲಿನಿಂದಲೇ ಸ್ಕೆಚ್!
ಮಾಜಿ ಜೈಲು ಅಧೀಕ್ಷಕ ಅಭಿಷೇಕ್ ಪಾಂಡೆ ಅವರು ನನ್ನನ್ನು ಪರೀಕ್ಷೆ ಪಾಸು ಮಾಡುವಂತೆ ಪ್ರೋತ್ಸಾಹಿಸಿದರು. ಅಲ್ಲದೇ ಪರೀಕ್ಷೆಗೆ ಬೇಕಾಗುವ ಅಗತ್ಯ ಪುಸ್ತಕಗಳನ್ನು ನೀಡಿ ಸಹಕರಿಸಿದರು ಎಂದು ಕೌಶಲೇಂದ್ರ ಕುಮಾರ್ ಹೇಳಿದ್ದಾರೆ. ಅಲ್ಲದೇ ಆತನಿಗೆ ವಿಶೇಷ ಆಹಾರವನ್ನು ವ್ಯವಸ್ಥೆ ಮಾಡಿರುವುದರ ಜೊತೆ ವೈಯಕ್ತಿಕವಾಗಿ ಮಾರ್ಗದರ್ಶನ ಮಾಡಿದರು ಎಂದು ತಿಳಿದು ಬಂದಿದೆ.
ಸೂರಜ್ ಈ ಯಶಸ್ಸನ್ನು ಮಾಜಿ ಜೈಲು ಅಧೀಕ್ಷಕ ಅಭಿಷೇಕ್ ಕುಮಾರ್ ಪಾಂಡೆ (Abhishek Kumar Pandey) ಮತ್ತು ತನ್ನನ್ನು ಅಧ್ಯಯನ ಮಾಡಲು ಪ್ರೇರೇಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಸಹೋದರ ವೀರೇಂದ್ರ ಕುಮಾರ್ (Virendra Kumar) ಅವರಿಗೆ ಅರ್ಪಿಸಿದ್ದಾರೆ. "ನನಗೆ ವಿಜ್ಞಾನಿಯಾಗುವ ಕನಸಿದೆ, ಅದಕ್ಕಾಗಿಯೇ ನಾನು ಈ ಪರೀಕ್ಷೆಯನ್ನು ಆರಿಸಿಕೊಂಡೆ ಮತ್ತು ಜೈಲಿನಲ್ಲಿದ್ದಾಗ ಅದಕ್ಕಾಗಿ ಅಧ್ಯಯನ ಮಾಡಿದ್ದೇನೆ. ನಾನು ಸ್ವಯಂ ಅಧ್ಯಯನದತ್ತ ಗಮನ ಹರಿಸಿದ್ದೇನೆ ಮತ್ತು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದನ್ನು ಖಾತ್ರಿಪಡಿಸಿಕೊಂಡಿದ್ದೇನೆ ಎಂದು ಸೂರಜ್ ಪ್ರತಿಪಾದಿಸಿದರು. IIT-JAM ಉತ್ತೀರ್ಣರಾದ ಅಭ್ಯರ್ಥಿಗಳು ಎಂಎಸ್‌ಸಿಗಾಗಿ ಪ್ರವೇಶ ಪಡೆಯುತ್ತಾರೆ.