Asianet Suvarna News Asianet Suvarna News

ಒಂದೇ ಕೊಠಡಿಯಲ್ಲಿ ಏಕಕಾಲಕ್ಕೆ ಹಿಂದಿ ಉರ್ದು ತರಗತಿ: ವಿಡಿಯೋ ವೈರಲ್

  • ಶಾಲೆಯಲ್ಲಿ ತರಗತಿಯ ಕೊರತೆ
  • ಒಂದೇ ಕೊಠಡಿಯಲ್ಲಿ ಎರಡು ಭಾಷೆಗಳ ಕಲಿಕೆ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
Students Learn Hindi And Urdu On One Blackboard At The Same Time in Katihar Bihar akb
Author
Bangalore, First Published May 19, 2022, 6:02 PM IST

ಕಾತಿಹಾರ್‌: ಪ್ರಾಥಮಿಕ ಶಿಕ್ಷಣ ಸರ್ವರಿಗೂ ದೊರೆಯುವಂತಾಗಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ತರುತ್ತಿದೆ. ಆದರೆ ಹಲವು ಸರ್ಕಾರಿ ಶಾಲೆಗಳ ಸ್ಥಿತಿ ಇಂದಿಗೂ ನರಕಸದೃಶವಾಗಿದೆ. ಮಕ್ಕಳಿಗೆ ಸರಿಯಾಗಿ ಕುಳಿತುಕೊಳ್ಳಲು ಜಾಗವಿಲ್ಲದೇ, ಮೇಜು ಬೆಂಚ್‌ಗಳಿಲ್ಲದೇ ವಿದ್ಯಾರ್ಥಿಗಳು ಶಿಕ್ಷಕರು ಸಂಕಷ್ಟಪಡುತ್ತಿರುವ ಹಲವು ದೃಶ್ಯಗಳನ್ನು ನೀವು ಈಗಾಗಲೇ ನೋಡಿರಬಹುದು. ಅದೇ ರೀತಿ ಈಗ ಬಿಹಾರದ ಶಾಲೆಯೊಂದರಲ್ಲಿ ಕೊಠಡಿಯ ಕೊರತೆಯಿಂದಾಗಿ ಒಂದೇ ತರಗತಿಯಲ್ಲಿ ಶಿಕ್ಷಕರು ಹಿಂದಿ (Hindi) ಹಾಗೂ ಉರ್ದು (Urdu) ಭಾಷೆಯ ಪಾಠವನ್ನು ಮಾಡುತ್ತಿದ್ದಾರೆ. 

ಇಬ್ಬರು ಶಿಕ್ಷಕರು ಒಂದೇ ತರಗತಿ ಕೊಠಡಿಯಲ್ಲಿ ಏಕಕಾಲಕ್ಕೆ ಮಕ್ಕಳಿಗೆ ಎರಡು ಭಾಷೆಗಳ ಪಾಠ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ದುಸ್ಥಿತಿಯನ್ನು ತೋರಿಸುತ್ತಿದೆ. ತರಗತಿಯಲ್ಲಿ ಒಬ್ಬ ಶಿಕ್ಷಕಿ ಹಿಂದಿ ಕಲಿಸುತ್ತಿದ್ದರೆ ಮತ್ತೊಬ್ಬರು ಉರ್ದು ಕಲಿಸುತ್ತಿದ್ದಾರೆ. ಇಬ್ಬರು ಶಿಕ್ಷಕರು ಕಪ್ಪು ಹಲಗೆಯಲ್ಲಿ ಬರೆಯುತ್ತಿದ್ದಾರೆ. 

Uttara Kannada: ಇಂಗ್ಲಿಷ್‌ ವ್ಯಾಮೋಹದ ಜತೆ ಶಿಕ್ಷಕರ ಕೊರತೆ: 12 ವರ್ಷದಲ್ಲಿ 37 ಸರ್ಕಾರಿ ಶಾಲೆ ಬಂದ್‌..!

ಮಕ್ಕಳು ಕೇವಲ ಕೇಳುತ್ತಿರುವಂತೆ ತೋರುತ್ತಿರುವುದರಿಂದ ತರಗತಿಯ ಕೊಠಡಿಯು ಸಂಪೂರ್ಣ ಗೊಂದಲಮಯವಾಗಿರುವಂತೆ ಕಾಣಿಸುತ್ತಿದೆ.  ಹಿರಿಯರಂತೆ ಕಾಣುವ ಶಿಕ್ಷಕಿಯೊಬ್ಬರು ತಮ್ಮ ಮೇಜಿನ ಮೇಲೆ ಕೋಲು ಬಡಿದು ಮಕ್ಕಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ. 

 

ಸುದ್ದಿ ಸಂಸ್ಥೆ ಎಎನ್‌ಐ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ. ಇಲ್ಲಿ ಪಾಠ ಮಾಡುತ್ತಿರುವ ಹಿಂದಿ ಶಿಕ್ಷಕಿಯನ್ನು ಕುಮಾರಿ ಪ್ರಿಯಾಂಕಾ (priyanka) ಎಂದು ಗುರುತಿಸಲಾಗಿದೆ. ಉರ್ದು ಪ್ರಾಥಮಿಕ ಶಾಲೆಯನ್ನು ಶಿಕ್ಷಣ ಇಲಾಖೆಯು 2017 ರಲ್ಲಿ ನಮ್ಮ ಶಾಲೆಗೆ ಸ್ಥಳಾಂತರಿಸಿದೆ. ಹೀಗಾಗಿ ಸ್ಥಳಾವಕಾಶವಿಲ್ಲದೇ ಶಿಕ್ಷಕರು ಹಿಂದಿ ಮತ್ತು ಉರ್ದು ಎರಡನ್ನೂ ಒಂದೇ ತರಗತಿಯಲ್ಲಿ ಕಲಿಸುತ್ತಾರೆ ಎಂದು ಅವರು ತಿಳಿಸಿದ್ದಾಗಿ ಎಎನ್‌ಐಯು ವರದಿ ಮಾಡಿದೆ.

ತಾಯಿ ಓದಿದ ಸರ್ಕಾರಿ ಶಾಲೆಗೆ 2 ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಿಸಿದ ಉದ್ಯಮಿ

ಕಪ್ಪು ಹಲಗೆಯ ಅರ್ಧಭಾಗದಲ್ಲಿ ಹಿಂದಿ ಕಲಿಸಲಾಗುತ್ತದೆ. ಇನ್ನೊಂದು ಕಡೆಯಲ್ಲಿ ಉರ್ದುವನ್ನು ಏಕಕಾಲಕ್ಕೆ ಮತ್ತೊಬ್ಬ ಶಿಕ್ಷಕಿ ಕಲಿಸುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಸಾಕಷ್ಟು ತರಗತಿ ಕೊಠಡಿಗಳಿಲ್ಲ ಹೀಗಾಗಿ ನಾವು ಒಂದೇ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲು ಇದು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಇದು ಬಿಹಾರದ ಬಿಹಾರದ ಕತಿಹಾರ್‌ನಲ್ಲಿರುವ (Katihar) ಆದರ್ಶ್ ಮಿಡ್ಲ್‌ ಸ್ಕೂಲ್ (Adarsh Middle School) ಆಗಿದೆ ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ (Kameshwar Gupta) ಅವರನ್ನು ಮಾಧ್ಯಮಗಳು ಸಂಪರ್ಕಿಸಿದಾಗ, ಆದರ್ಶ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾದರೆ ಉರ್ದು ಪ್ರಾಥಮಿಕ ಶಾಲೆಗೆ ಅಲ್ಲಿ ಒಂದು ಕೊಠಡಿ ನೀಡಲಾಗುವುದು. ವಿವಿಧ ತರಗತಿಯ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಒಂದೇ ಕಪ್ಪು ಹಲಗೆಯಲ್ಲಿ ಏಕಕಾಲಕ್ಕೆ ಪಾಠ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 
 

Follow Us:
Download App:
  • android
  • ios