ತಾಯಿ ಓದಿದ ಸರ್ಕಾರಿ ಶಾಲೆಗೆ 2 ಕೋಟಿ ವೆಚ್ಚದಲ್ಲಿ ಕಟ್ಟಡ ಕಟ್ಟಿಸಿದ ಉದ್ಯಮಿ

 *  ಉದ್ಯಮಿ ಕಟ್ಟಿಸಿದ ಸರ್ಕಾರಿ ಶಾಲೆ ನೂತನ ಕಟ್ಟಡ ಇಂದು ಉದ್ಘಾಟನೆ
*  ಬೆಂಗಳೂರು ಉದ್ಯಮಿಯಿಂದ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ
*  ತಾಯಿ ಓದಿದ ಶಾಲೆಗೆ ಹೊಸ ಕಟ್ಟಡ ದಾನ
 

Businessman Who Built Building to Government School at Cost of Rs 2 Crore in Tumakuru grg

ಬೆಂಗಳೂರು(ಏ.20):  ಉದ್ಯಮಿ ಹರ್ಷ ಮತ್ತು ಮಮತಾ ದಂಪತಿ(Harsha-Mamta Couple) ತುಮಕೂರು(Tumakuru) ಜಿಲ್ಲೆ ಕೋರಾ ಗ್ರಾಮದಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ‘ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ’ಯ(Government School) 14 ಕೊಠಡಿಗಳ ಸುಸಜ್ಜಿತವಾದ ನೂತನ ಕಟ್ಟಡದ ಲೋಕಾರ್ಪಣೆ ಸಮಾರಂಭ ಬುಧವಾರ ನಡೆಯಲಿದೆ. ಇಂದು(ಬುಧವಾರ) ಬೆಳಗ್ಗೆ 9ಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌(BC Nagesh) ಅವರು ಸ್ಥಳೀಯ ಶಾಸಕರಾದ ಡಾ. ಜಿ.ಪರಮೇಶ್ವರ್‌ ಅವರೊಂದಿಗೆ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಬಳಿಕ ಶಾಲಾ ಕಟ್ಟಡ ನಿರ್ಮಾಣದ ಮಹಾದಾನಿಗಳಾದ ಹರ್ಷ ಮತ್ತು ಮಮತಾ ದಂಪತಿಯನ್ನು ಕೋರಾ ಗ್ರಾಮದ ರಾಜ ಬೀದಿಗಳಲ್ಲಿ ಪೂರ್ಣ ಕುಂಭ ಮತ್ತು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಏರ್ಪಡಿಸಲಾಗಿದೆ. ಕೋರಾ ಹೋಬಳಿ ಕೇಂದ್ರದಲ್ಲಿ ನಿರ್ಮಿಸಿಕೊಟ್ಟಿರುವ ಈ ಸುಸಜ್ಜಿತ ಶಾಲಾ ಕಟ್ಟಡ(School Building) ಸುತ್ತಮುತ್ತಲ ಹತ್ತಾರು ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ನೆಲೆಯಾಗಲಿದೆ. ಈ ದಂಪತಿ ತಮ್ಮ ಗ್ರಾಮಕ್ಕೆ ನೀಡಿರುವ ದೊಡ್ಡ ಕೊಡುಗೆ ಹಾಗೂ ಗ್ರಾಮದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಿರುವ ಶಾಶ್ವತ ಕಾರ್ಯದ ಬಗ್ಗೆ ವಿಚಾರದಲ್ಲಿ ಗ್ರಾಮಸ್ಥರಲ್ಲಿ ಅಭಿಮಾನದ ಹೊಳೆಯೇ ಹರಿದಿದೆ. ಶಾಲೆಯ ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳ ಸಂಘ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಮೆರವಣಿಗೆ ಕಾರ್ಯಕ್ರಮ ಏರ್ಪಡಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಕೋರ್ಟ್‌ ಪರಿಣತರಂತೆ ವರ್ತಿಸಬಾರದು: ಸುಪ್ರೀಂ ಕೋರ್ಟ್

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಂಸದ ಜಿ.ಎಸ್‌.ಬಸವರಾಜು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ತಾಯಿ ಓದಿದ ಶಾಲೆಗೆ ಹೊಸ ಕಟ್ಟಡ ದಾನ

ಉದ್ಯಮಿ(Businessman) ಹರ್ಷ ಅವರ ತಾಯಿ ಸರ್ವಮಂಗಳಾ ನಾಗಯ್ಯ ಅವರು ಕೋರಾ ಸರ್ಕಾರಿ ಶಾಲೆಯಲ್ಲಿ ಓದಿದವರು. ಇದೇ ಕಾರಣಕ್ಕೆ ತಮ್ಮ ತಾಯಿ ಓದಿದ ಶಾಲೆಗೆ ದೊಡ್ಡ ಕೊಡುಗೆ ನೀಡಬೇಕೆಂದು ಹರ್ಷ ಅವರು ನಿರ್ಧರಿಸಿ 14 ಕೊಠಡಿಗಳ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಟ್ಟಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ, ಹಿಜಾಬ್ ಅವಕಾಶವಿಲ್ಲ, ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪ್ರಯಾಣ ಫ್ರೀ

ಬೆಂಗಳೂರಿನಲ್ಲಿ ಖಾಸಗಿ ಉದ್ಯಮ ನಡೆಸುತ್ತಿರುವ ಹರ್ಷ ಅವರು ಒಮ್ಮೆ ಕೋರಾ ಮಾರ್ಗವಾಗಿ ಶಿರಾಗೆ ತೆರಳುವಾಗ ತಾಯಿಯ ಊರು ಎಂಬ ಅಭಿಮಾನದಿಂದ ಕಾರು ಇಳಿದಿದ್ದೇ ಇಂದಿನ ಮಹತ್ಕಾರ್ಯಕ್ಕೆ ಕಾರಣವಾಯಿತು. ಊರ ಮೊಮ್ಮಗ ಹರ್ಷ ಇಲ್ಲಿಗೆ ಕಾಲಿಟ್ಟಾಗ ಶಾಲೆಯ ಭಾಗಶಃ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಕೆಡವಲಾಗಿತ್ತು. ಇದನ್ನು ಗಮನಿಸಿದ ಹರ್ಷ ಅವರು ತಮ್ಮ ತಾಯಿ ಓದಿದ ನೆನಪಿಗಾಗಿ ಶಾಲೆಗೆ ಹೊಸ ಕಟ್ಟಡ ಕಟ್ಟಿಕೊಡಲು ಊರ ಸಭಿಕರು, ಅಧಿಕಾರಿಗಳನ್ನು ಸಂಪರ್ಕಿಸಿ ನಿರ್ಧರಿಸಿದರು.

ಇದಕ್ಕಾಗಿ ಶಾಲೆಯ ನಿರ್ಮಾಣಕ್ಕೆ ಸರ್ಕಾರ ಗ್ರಾಮ ಪಂಚಾಯಿತಿ ಮೂಲಕ ಊರಿಗೆ ಹೊಂದಿಕೊಂಡ ಸರ್ಕಾರಿ ಜಾಗದಲ್ಲೇ ಜಾಗ ಮಂಜೂರು ಕೂಡುತ್ತದೆ. ಆ ಜಾಗದಲ್ಲಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿಕೊಡಲಾಗಿದೆ. ಕೇವಲ ಕಟ್ಟಡ ಮಾತ್ರವಲ್ಲ ಶಾಲೆಯಲ್ಲಿ ಈಗ ಗಣಕಯಂತ್ರ ಕೊಠಡಿ, ಅಕ್ಷರ ದಾಸೋಹ ಕೊಠಡಿ, ಸ್ಮಾರ್ಚ್‌ ಕ್ಲಾಸ್‌ ಕೊಠಡಿ ಹೀಗೆ ಸಂಪೂರ್ಣ ಹೈಟೆಕ್‌ ಮಾದರಿಯಲ್ಲಿ ಸರ್ಕಾರಿ ಶಾಲೆಯನ್ನು ನಿರ್ಮಿಸಿಕೊಡಲಾಗಿದೆ.
 

Latest Videos
Follow Us:
Download App:
  • android
  • ios