Asianet Suvarna News Asianet Suvarna News

Religious Conversion: ಶಾಲೆಯೊಳಗೆ ಪರೀಕ್ಷೆ ಬರೆಯುತ್ತಿದ್ದ ಮಕ್ಕಳು, ಕಲ್ಲು ತೂರಾಟ ನಡೆಸಿದ ಹಿಂದೂ ಸಂಘಟನೆ!

* ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಮತಾಂತರದ ವಿಚಾರ

* ಮತಾಂತರದ ವಿಚಾರವಾಗಿ ಶಾಲೆ ಮೇಲೆ ದಾಳಿ ನಡೆಸಿದ ಹಿಂದೂ ಸಂಘಟನೆ

* ಶಾಲೆಯೊಳಗೆ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಪಾರು

Students Barely Escape As Right Wing Mob Attacks Madhya Pradesh School pod
Author
Bangalore, First Published Dec 7, 2021, 8:14 AM IST

ಭೋಪಾಲ್(ಡಿ.07): ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಮತಾಂತರದ (Religious Conversion) ವಿಚಾರವಾಗಿ ಹಿಂದೂ ಸಂಘಟನೆಯ (Hindu Organisation)ಕೆಲ ಸದಸ್ಯರು ಸೇಂಟ್ ಜೋಸೆಫ್ ಶಾಲೆ ಆವರಣದಲ್ಲಿ ಗಲಾಟೆ ಮಾಡಿ ಶಾಲೆಯನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ಕುಪಿತಗೊಂಡ ಜನರು ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಪತ್ರವನ್ನೂ ನೀಡಿದ್ದಾರೆ. ಈ ಹಿಂದೆಯೂ ಸೇಂಟ್ ಜೋಸೆಫ್ ಶಾಲೆಯ 8 ಮಕ್ಕಳ ಮತಾಂತರ ಪ್ರಕರಣ ಬೆಳಕಿಗೆ ಬಂದಿರುವುದು ಗಮನಾರ್ಹ. ಜಿಲ್ಲೆಯಲ್ಲಿ ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ (Police) ಆಡಳಿತವು ಸ್ಥಳೀಯ ಚರ್ಚ್, ಭಾರತ್ ಮಾತಾ ಕಾನ್ವೆಂಟ್ ಶಾಲೆ ಮತ್ತು ಗಂಜ್ಬಸೋಡಾ ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ಪೊಲೀಸರನ್ನು ನಿಯೋಜಿಸಿದೆ. ಯಾವುದೇ ಕ್ರಮ ಕೈಗೊಂಡರೂ ಕಾನೂನು ಕ್ರಮ ಕೈಗೊಳ್ಳಲಾಗುವುದು, ಪ್ರಸ್ತುತ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮೋನಿಕಾ ಶುಕ್ಲಾ ತಿಳಿಸಿದ್ದಾರೆ.

ಘಟನೆಯ ನಂತರ, ಗಂಜ್ಬಸೋಡಾದ ಇತರ ಮಿಷನರಿ ಶಾಲೆಗಳು ಮತ್ತು ಚರ್ಚ್‌ಗಳ (Missionary School And Church) ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಯ ನಂತರ, ಶಾಲೆಗೆ ಮುತ್ತಿಗೆ ಹಾಕಲಿದ್ದಾರೆಂಬ ಬಗ್ಗೆ ಪೂರ್ವ ಮಾಹಿತಿ ನೀಡಲಾಗಿತ್ತು. ಆದರೆ ಪೊಲೀಸರು ಮತ್ತು ಆಡಳಿತದಿಂದ (Police And Administration) ಭದ್ರತೆಗಾಗಿ ಸರಿಯಾದ ವ್ಯವಸ್ಥೆ ಮಾಡಲಾಗಿಲ್ಲ ಎಂದು ಶಾಲಾ ವ್ಯವಸ್ಥಾಪಕರು ಪೊಲೀಸರು ಮತ್ತು ಆಡಳಿತವನ್ನು ಆರೋಪಿಸಿದ್ದಾರೆ. ಕಲ್ಲು ತೂರಾಟದ ಸಮಯದಲ್ಲಿ, ಸೇಂಟ್ ಜೋಸೆಫ್ ಶಾಲೆಯೊಳಗೆ 12 ನೇ ತರಗತಿಯ ಮಕ್ಕಳ ಪರೀಕ್ಷೆಗಳು ನಡೆಯುತ್ತಿದ್ದವು ಎಂಬುವುದು ಉಲ್ಲೇಖನೀಯ. ಸುಮಾರು 14 ಮಕ್ಕಳು ಪರೀಕ್ಷೆ ಬರೆಯುತ್ತಿದ್ದು, ದಾಳಿಯಿಂದ ಭಯಗೊಂಡಿದ್ದಾರೆ.

Religious Conversion: ಬಿಜೆಪಿ ಸರ್ಕಾರದಲ್ಲಿಯೇ ಗೋ ಕಳ್ಳತನ, ಮತಾಂತರ ಹೆಚ್ಚು: ಮುತಾಲಿಕ್‌

ಶಾಲೆಯಲ್ಲಿ ಯಾವುದೇ ರೀತಿಯಲ್ಲಿ ಮಕ್ಕಳ ಮತಾಂತರ ನಡೆಯುತ್ತಿದೆ ಎಂಬ ವಿಚಾರವನ್ನು ಶಾಲಾ ಆಡಳಿತ ಮಂಡಳಿ ಸಂಪೂರ್ಣವಾಗಿ ನಿರಾಕರಿಸಿದೆ. ಮತಾಂತರ ಪ್ರಕರಣದ ತನಿಖೆ ನಡೆಸುತ್ತಿರುವ ಭಜರಂಗದಳ (Bajrang Dal), ಮತಾಂತರಗೊಂಡವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದೆ, ಜೊತೆಗೆ ಸೇಂಟ್ ಜೋಸೆಫ್ ಶಾಲೆಯ ಜಮೀನಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಇದೇ ವೇಳೆ ಭದ್ರತಾ ವ್ಯವಸ್ಥೆ ಕುರಿತ ಪ್ರಶ್ನೆಗೆ ಆಡಳಿತ ಮಂಡಳಿ ತಿರುಗೇಟು ನೀಡಿದೆ.

ಹಾಸನದಲ್ಲೂ ಮತಾಂತರದ ಸದ್ದು, ಪ್ರಾರ್ಥನಾ ಸ್ಥಳದ ಮುಂದೆ ಪ್ರತಿಭಟನೆ

ಜ್ಯದಲ್ಲಿ ತಣ್ಣಗಾಗಿದ್ದ  ಒತ್ತಾಯದ ಮತಾಂತರ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಚಿತ್ರದುರ್ಗದಿಂದ (Chitradurga) ಆಗುತ್ತಿದ್ದ ಸುದ್ದಿ ಈ ಬಾರಿ ಹಾಸನದಿಂದ (Hassan) ಆಗಿದೆ. ಹಿಂದೂ (Hindu) ಧರ್ಮದ ಜನರನ್ನು ಪುಸಲಾಯಿಸಿ ಮತಾಂತರ ಮಾಡುತ್ತಿದ್ದ ಆರೋಪದ ಕಾರಣಕ್ಕೆ ಕ್ರಿಶ್ಚಿಯನ್ ಪ್ರಾರ್ಥನಾ ಕೇಂದ್ರದ ಎದುರು ಹಿಂದು ಪರ (Bajrang Dal )ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.'

ಈ ವೇಳೆ ಪ್ರಾರ್ಥನಾ ನಿರತರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ನಾವು ಪ್ರಾರ್ಥನೆಗೆ ಬಂದಿದ್ದೇವೆ ಅದನ್ನು ಕೇಳೋಕೆ ನೀವ್ಯಾರು ಎಂದು ಮಹಿಳೆಯರು ವಾದ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪೊಲೀಸರು (Karnataka Police) ಹತೋಟಿಗೆ ತಂದಿದ್ದಾರೆ.

ಹಾಸನ ಜಿಲ್ಲೆ ಬೇಲೂರು ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿ ಪ್ರಕರಣ ನಡೆದಿದೆ. ತಾಲೂಕಿನಲ್ಲಿ ಅಕ್ರಮವಾಗಿ ಪ್ರಾರ್ಥನಾ ಕೇಂದ್ರ ತೆರೆದು ಮತಾಂತರ ಮಾಡುತ್ತಿರೋ ಬಗ್ಗೆ ಆರೋಪ ಕೇಳಿ ಬಂದಿತ್ತು. ಸೂಕ್ತ ಕ್ರಮಕ್ಕೆ ಹಿಂದುಪರ ಸಂಘಟನೆಗಳ ಮುಖಂಡರ ಆಗ್ರಹ ಮಾಡಿದ್ದಾರೆ.

Free Hindu temples :ಸರ್ಕಾರದಿಂದ ಹಿಂದೂ ದೇವಾಲಯ ಮುಕ್ತ, ಮತಾಂತರ ವಿರೋಧಿ ಕಾನೂನಿಗೆ ಒತ್ತಾಯಿಸಿ VHP ಆಂದೋಲನ!

ಕರ್ನಾಟಕದ ಉಡುಪಿ, ಕೊಡಗು, ಬೆಳಗಾವಿ, ಚಿಕ್ಕಬಳ್ಳಾಪುರ, ಕನಕಪುರ ಮತ್ತು ಅರಸೀಕೆರೆಯಿಂದ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗಿದ್ದವು. ಬೆಳಗಆವಿ ಪೊಲೀಸರು  ಈ ಬಗೆಯ ಮತಾಂತರ ಮಾಡಲು ಮುಂದಾದರೆ ಕಠಿಣ ಕ್ರಮ ಎಂದು  ಎಚ್ಚರಿಸಿದ್ದರು. ಮತಾಂತರ ನಿಷೇಧ  ಕಾನೂನು ಸಹ ಚರ್ಚೆಯಾಗುತ್ತಲೇ ಇದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಮಂಡನೆಯಾಗುವ ಸಾಧ್ಯತೆ ಇದೆ.

ಚಿತ್ರದುರ್ಗ ಕರ್ನಾಟಕದ ಉಡುಪಿ, ಕೊಡಗು, ಬೆಳಗಾವಿ, ಚಿಕ್ಕಬಳ್ಳಾಪುರ, ಕನಕಪುರ ಮತ್ತು ಅರಸೀಕೆರೆಯಿಂದ ಈ ರೀತಿಯ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗಿದ್ದವು. ಬೆಳಗಆವಿ ಪೊಲೀಸರು  ಈ ಬಗೆಯ ಮತಾಂತರ ಮಾಡಲು ಮುಂದಾದರೆ ಕಠಿಣ ಕ್ರಮ ಎಂದು  ಎಚ್ಚರಿಸಿದ್ದರು. ಮತಾಂತರ ನಿಷೇಧ  ಕಾನೂನು ಸಹ ಚರ್ಚೆಯಾಗುತ್ತಲೇ ಇದೆ. ಚಳಿಗಾಲದ ಅಧಿವೇಶನದಲ್ಲಿ ಬಿಲ್ ಮಂಡನೆಯಾಗುವ ಸಾಧ್ಯತೆ ಇದೆ.

Follow Us:
Download App:
  • android
  • ios