ಪುದುಚೆರಿ(ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವದಿಂದ ಹೊರಕಳುಹಿಸಿದ ಘಟನೆ ಪುದುಚೇರಿ ವಿವಿಯಲ್ಲಿ ನಡೆದಿದೆ.

ಚಿನ್ನದ ಪದಕ ಗೆದ್ದ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್, ಪೌರತ್ವ ತಿದ್ದುಪಡಿ ಜಕಾಯ್ದೆ ವಿರೋಧಿಸಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದರು. ಕೂಡಲೇ ಪೊಲೀಸರು ರಬೀಹಾ ಅವರನ್ನು ಘಟಿಕೋತ್ಸವ ನಡೆಯುತ್ತಿದ್ದ ಸ್ಥಳದಿಂಂದ ಹೊರಕಳುಹಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ನೇತಾಜಿ ಸಂಬಂಧಿ!

ಘಟಿಕೋತ್ಸವದಿಂದ ರಾಷ್ಟ್ರಪತಿ ರಾಮನಥ್ ಕೋವಿಂದ್ ನಿರ್ಗಮಿಸುವವರೆಗೂ ರಬೀಹಾ ಅವರನ್ನು ಪೊಲೀಸರು ಒಳಗೆ ಬಿಟ್ಟಿಲ್ಲ ಎನ್ನಲಾಗಿದೆ. 

ಬಿಜೆಪಿಗೆ ಮತ್ತೊಂದು ಮುಖಭಂಗ; NRCಗೆ ಪಕ್ಷದ ಸಿಎಂರಿಂದಲೇ ಅಪಸ್ವರ!

ರಬೀಹಾ ಅವರಿಗೆ ವೇದಿಕೆ ಮೇಲೆ ಪ್ರೊಫೆಸರ್ ರಾಜೀವ್ ಜೈನ್ ಪ್ರಶಸ್ತಿ ಹಾಗೂ ಪದಕ ನೀಡಲು ಮುಂದಾದಾಗ ವಿ.ವಿ ಉಪ ಕುಲಪತಿ ಮತ್ತು ರಿಜಿಸ್ಟ್ರಾರ್ ಮುಂದೆ ಪ್ರತಿಭಟನೆ ಭಾಗವಾಗಿ ರಬೀಹಾ ತಿರಸ್ಕರಿಸಿದ್ದಾರೆ.

ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ರಬೀಹಾ, ಚಿನ್ನದ ಪದಕಕ್ಕಿಂತ ದೇಶ ದೊಡ್ಡದು ಎಂದು ಹೇಳಿದ್ದಾರೆ. ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇನ್ನೂ ಹಲವು ವಿದ್ಯಾರ್ಥಿಗಳೂ ಕೂಡ ತಮ್ಮ ಚಿನ್ನದ ಪದಕವನ್ನು ತಿರಸ್ಕರಿಸಿದ್ದಾರೆ.

'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'

ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಪ್ರತಿಭಟನೆ ರೂಪದಲ್ಲಿ ತಮ್ಮ ಪ್ರಶಸ್ತಿ ಹಿಂದಿರುಗಿಸುತ್ತಿರುವುದಾಗಿ ರಬೀಹಾ ಸ್ಪಷ್ಟಪಡಿಸಿದ್ದಾರೆ.