ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿದ ನೇತಾಜಿ ಸಂಬಂಧಿ!
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟ| CAA ವಿರೋಧಿಸಿ ಟ್ವಿಟ್ ಮಾಡಿದ ನೇತಾಜಿ ಸಂಬಂಧಿ| ಕಾಯ್ದೆಯಿಂದ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿದ್ದಕ್ಕೆ ಚಂದ್ರಕುಮಾರ್ ಬೋಸ್ ಅಸಮಾಧಾನ| ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವುದು ಸರಿಯಲ್ಲ ಎಂದ ಚಂದ್ರಕುಮಾರ್| ಚಂದ್ರಕುಮಾರ್ ಬೋಸ್ ವಿರೋಧದಿಂದಾಗಿ ಮುಜುಗರಕ್ಕೀಡಾದ ಬಿಜೆಪಿ|
ಕೋಲ್ಕತ್ತಾ(ಡಿ.24): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಸಾಲಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಬಂಧಿ, ಬಿಜೆಪಿ ನಾಯಕ ಚಂದ್ರಕುಮಾರ್ ಬೋಸ್ ಸೇರ್ಪಡೆಗೊಂಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿದ್ದಕ್ಕೆ ಚಂದ್ರಕುಮಾರ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಚಂದ್ರಕುಮಾರ್ ಬೋಸ್, ನೆರೆಯ ರಾಷ್ಟ್ರಗಳಿಂದ ಹಿಂದೂ, ಸಿಖ್, ಕ್ರಿಶ್ಚಿಯನ್ ಸಮುದಾಯದವರು ಬರಬಹುದಾದರೆ ಮುಸ್ಲಿಂ ಸಮುದಾಯದವರು ಏಕಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಮತ್ತೊಂದು ಮುಖಭಂಗ; NRCಗೆ ಪಕ್ಷದ ಸಿಎಂರಿಂದಲೇ ಅಪಸ್ವರ!
ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವುದು ಸರಿಯಲ್ಲ ಎಂದು ಚಂದ್ರಕುಮಾರ್ ಬೋಸ್ ಅಭಿಪ್ರಾಯಪಟ್ಟಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸಲಿದೆ ಎಂದು ಚಂದ್ರಕುಮಾರ್ ಬೋಸ್ ಕಿಡಿಕಾರಿದ್ದಾರೆ.
'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಚಂದ್ರಕುಮಾರ್ ಬೋಸ್ ವಿರೋಧದಿಂದಾಗಿ ಬಿಜೆಪಿ ಮುಜುಗರಕ್ಕೀಡಾಗಿದೆ.