ನವದೆಹಲಿ[ಜ.28]: ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರೇ ಗುಂಪೊಂದು 21 ವರ್ಷದ ವಿದ್ಯಾರ್ಥಿಗೆ ಥಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿ ಚುನಾವಣೆ ಹಿನ್ನೆಲೆ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಈ ವಿದ್ಯಾರ್ಥಿ ಪೌರತ್ವ ವಿರೋಧಿ ಘೋಷಣೆ ಕೂಗಿದ್ದು, ಆಕ್ರೋಶಗೊಂಡ ಕಾರ್ಯಕರ್ತರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. 

ದೆಹಲಿಯ ಬಬಲ್ಪುರ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಅತ್ತ ಗೃಹ ಸಚಿವ ಅಮಿತ್ ಶಾ ಪೌರತ್ವ ಕಾಯ್ದೆ ಪರ ಮಾತನಾಡುತ್ತಿದ್ದರೆ, ಇತ್ತ ವಿದ್ಯಾರ್ಥಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಘೋಷಣೆ ಕೂಗಲಾರಂಭಿಸಿದ್ದಾನೆ. ಕೂಡಲೇ ಕಾರ್ಯಕರ್ತರ ಗುಂಪೊಂದು ಆತನನ್ನು ಥಳಿಸಲಾರಂಭಿಸಿದ್ದಾರೆ. ಹೀಗಿರುವಾಗ ವೇದಿಕೆ ಮೇಲಿದ್ದ ಅಮಿತ್ ಶಾ  'ಅವನನ್ನು ಬಿಡಿ' ಎಂದು ಹೇಳಿದ್ದಾರೆ. ಅಲ್ಲದೇ ಪೊಲೀಸರನ್ನುದ್ದೇಶಿಸಿ, 'ಬೇಗನೇ ಅವನನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ' ಎಂದು ಸೂಚಿಸಿದ್ದಾರೆ. 

ಕಪಿಲ್ ಮಿಶ್ರಾಗೆ 48 ಗಂಟೆ ಪ್ರಚಾರ ನಡೆಸದಂತೆ ಆಯೋಗದ ನಿರ್ಬಂಧ!

ಗೃಹ ಸಚಿವರ ಸೂಚನೆಯಂತೆ ಕಾರ್ಯ ಪ್ರವೃತ್ತರಾದ ಪೊಲೀಸರು ಕೂಡಲೇ ಆ ವಿದ್ಯಾರ್ಥಿಯನ್ನು ಅಲ್ಲಿಂದ ಕರೆದೊಯ್ದಿದ್ದಾರೆ. ಹೀಗಿರುವಾಗ ಅಮಿತ್ ಶಾ ಸಮಾವೇಶಕ್ಕೆ ಹಾಜರಾಗಿದ್ದ ಜನರ ಗಮನ ಸೆಳೆಯಲು 'ಭಾರತ್ ಮಾತಾ ಕೀ ಜೈ' ಎಂಬ ಘೋಷಣೆ ಕೂಗಿ, ಮತ್ತೆ ಭಾಷಣ ಮುಂದುವರೆಸಿದ್ದಾರೆ. 

ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ 'ಅಲ್ಲಿ ಬಹಳಷ್ಟು ಜನ ಸೇರಿದ್ದರು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ, ಅಮಿತ್ ಶಾರವರು ಹುಡುಗನನ್ನು ರಕ್ಷಿಸಿ ಎಂದು ಪೊಲೀಸರಿಗೆ ಸೂಚಿಸುತ್ತಿರುವುದು ಕೇಳಿಸಿಕೊಂಡೆ' ಎಂದಿದ್ದಾರೆ. 

ಘಟನೆ ಕುರಿರತು ವಿವರಿಸಿದ ಪೊಲೀಸ್ ಅಧಿಕಾರಿ 'ಸಮಾವೇಶದಲ್ಲಿ ವಿದ್ಯಾರ್ಥಿಯೊಬ್ಬ ಪೌರತ್ವ ವಿರೋಧಿ ಘೋಷಣೆ ಕೂಗಲಾರಂಭಿಸಿದ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಪೊಲೀಸರಿಗೊಪ್ಪಿಸಿದರು. ಆತನನ್ನು ಠಾಣೆಗೆ ಕರೆತಂದು ಪರಿಶೀಲನೆ ನಡೆಸಿದಾಗ ಯಾವುದೇ ಗುರುತು ಪತ್ರ ಸಿಗಲಿಲ್ಲ. ಇನ್ನು ಆತನಿಗೆ ಯಾವುದೇ ದೊಡ್ಡ ಮಟ್ಟದ ಗಾಯಗಳಾಗಿಲ್ಲ' ಎಂದಿದ್ದಾರೆ

ಕೇಜ್ರಿ​ವಾಲ್‌ ವಿರುದ್ಧ ಸಲ್ಲಿ​ಸಿದ ಸ್ವಾಮೀಜಿ ನಾಮಪತ್ರ ತಿರಸ್ಕೃತ