ಕೇಜ್ರಿವಾಲ್ ವಿರುದ್ಧ ಸಲ್ಲಿಸಿದ ಕರುನಾಡ ಸ್ವಾಮೀಜಿ ನಾಮಪತ್ರ ತಿರಸ್ಕೃತ
ದಿಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ಸ್ಪರ್ಧೆ ಮಾಡಿದ್ದ ವೆಂಕಟೇಶ್ವರ ಸ್ವಾಮೀಜಿ ನಾಮಪತ್ರ ತಿರಸ್ಕೃತವಾಗಿದೆ.
ಚಡಚಣ [ಜ.25]: ವಿಧಾನಸಭಾ ಚುನಾವಣೆಯ ನವದೆಹಲಿ ಮತಕ್ಷೇತ್ರದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದ ಕರ್ನಾಟಕದ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಬರಡೋಲ ಗ್ರಾಮದ ವೆಂಕಟೇಶ್ವರ ಸ್ವಾಮೀಜಿ ಉಫ್‌ರ್ ದೀಪಕ ಅವರ ನಾಮಪತ್ರ ಶುಕ್ರವಾರ ತಿರಸ್ಕೃತವಾಗಿದೆ.
ಈ ಬಗ್ಗೆ ಖುದ್ದು ಅವರೇ ಈ ಮಾಹಿತಿ ತಿಳಿಸಿದ್ದು, ಅರವಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧೆಗಿಳಿದು ನಾಮಪತ್ರ ಸಲ್ಲಿಸಿದ್ದೆ. ಆದರೆ ನಾಮಪತ್ರ ತಿರಸ್ಕೃತವಾಗಿದ್ದು ನನಗೆ ಬೇಸರ ತಂದಿದೆ ಎಂದಿದ್ದಾರೆ.
ಕೇಜ್ರಿವಾಲ್ ಎದುರು ಕನ್ನಡಿಗ ಸ್ವಾಮೀಜಿ ಸ್ಪರ್ಧೆ..
ನಾಗಠಾಣ ಮತಕ್ಷೇತ್ರ ಹಾಗೂ ಸೋಲಾಪುರ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಪರಾಭವಗೊಂಡಿದ್ದ ಅವರು, ನರೇಂದ್ರ ಮೋದಿ ವಿರುದ್ಧವೂ ನಾಮಪತ್ರ ಸಲ್ಲಿಸಿದ್ದರು. ಆದರೆ ಅಲ್ಲಿಯೂ ನಾಮಪತ್ರ ತಿರಸ್ಕೃತವಾಗಿತ್ತು ಎನ್ನುತ್ತಾರೆ.