Asianet Suvarna News Asianet Suvarna News

ಪಂಜಾಬ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಪೈರಿನ ಕಳೆಗೆ ಬೆಂಕಿ; ಆತಂಕದಲ್ಲಿ ದೆಹಲಿ!

ಸಾಂಪ್ರದಾಯಿಕ ಕೃಷಿ ಮಾಡತ್ತಿರುವ ರೈತರು, ತಮ್ಮ ಪೈರು ಕಟಾವಿನ ಬಳಿಕ ಉಳಿದ ಕಳೆಗಳಿಗೆ ಬೆಂಕಿ ಹಚ್ಚುತ್ತಾರೆ. ಪಂಜಾಬ್, ಹರ್ಯಾಣ, ರಾಜಸ್ಥಾನ ಭಾಗದಲ್ಲಿ ಸಾವಿರಾರು ಏಕರೆ ಪ್ರದೇಶಕ್ಕೆ ಈ ರೀತಿ ರೈತರು ಬೆಂಕಿ ಹಂಚಿ ಮುಂದಿನ ಬೆಳೆಗೆ ಹೊಲ ಸಜ್ಜುಗೊಳಿಸುತ್ತಾರೆ. ಆದರೆ ಈ ರೀತಿ ಬೆಂಕಿ ಹಚ್ಚುವುದರಿಂದ ದೆಹಲಿಯ ಮಾಲಿನ್ಯ ಹೆಚ್ಚಾಗುತ್ತಿದೆ. ಇದೀಗ ಬಹಿರಂಗವಾಗಿರುವ ಅಂಕಿ ಅಂಶ, ದೆಹಲಿ ಸರ್ಕಾರ ಹಾಗೂ ಜನತೆಯನ್ನು ಮತ್ತಷ್ಟು ಆತಂಕದಲ್ಲಿ ದೂಡಿದೆ.

Stubble burning incidents in Punjab have nearly quadrupled as compared to last year says report ckm
Author
Bengaluru, First Published Oct 13, 2020, 3:33 PM IST

ನವದೆಹಲಿ(ಅ.13): ಪಂಜಾಬ್‌ನ ರೈತರು ತಮ್ಮ ಬೆಳೆ ಕಟಾವು ಮಾಡಿದ ಬಳಿಕ ಕಳೆ ಹಾಗೂ ಪೈರಿನ ಹುಲ್ಲು ಕಡ್ಡಿಗೆ ಬೆಂಕಿ ಹಚ್ಚಲಾಗುತ್ತದೆ. ಹರಿಯಾಣ, ಲುಧಿಯಾನ ಸೇರಿದಂತೆ ಪಂಜಾಬ್‌ನ ಬಹುತೇಕ ಭಾಗದಲ್ಲಿ ರೈತರು ಪ್ರತಿ ವರ್ಷ ಕಳೆಗಳಿಗೆ ಬೆಂಕಿ ಹಚ್ಚುತ್ತಾರೆ. ದೆಹಲಿಯಲ್ಲಿ ವಾಯು ಮಾಲಿನ್ಯದಲ್ಲಿ ಇದರ ಹೊಗೆ ಪ್ರಮುಖ ಕೊಡುಯಾಗಿದೆ ಎಂದು ಅಧ್ಯಯನ ವರದಿ ಹೇಳಿದೆ. ಇದೀಗ ಕಳೆದೆರಡು ವರ್ಷದಲ್ಲಿ 500 ರಿಂದ 700 ಕಳೆಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿತ್ತು. ಆದರೆ ಪ್ರಸಕ್ತ ವರ್ಷ ಇದು 2,000 ದಾಟಿದೆ. 

ರಾಜ್ಯ ಸರ್ಕಾರದಿಂದ ಅನ್ನದಾತರಿಗೆ ಮತ್ತೊಂದು ಆಘಾತ

ಕಳೆಗೆ ಬೆಂಕಿ ಹಚ್ಚುವ ವಿಧಾನಕ್ಕೆ ಬ್ರೇಕ್ ಹಾಕಲಾಗಿದೆ. ಕಳೆದ ವರ್ಷ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ಕುರಿತು ದೆಹಲಿ ಸುತ್ತ ಮುತ್ತಲಿನ ರಾಜ್ಯದ ರೈತರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದ್ದರು. ಈ ಬೆಳವಣಿಗೆ ಬಳಿಕ ಇದೀಗ ಪಂಜಾಬ್ ACM ಡಿವಿಶನ್ ಮುಖ್ಯಸ್ಥ ಅನಿಲ್ ಸೂದ್ ಆತಂಕಕಾರಿ ಅಂಕಿ ಅಂಶ ತೆರೆದಿಟ್ಟಿದ್ದಾರೆ.

ಶುಂಠಿ ಕೊಳೆ ರೋಗಕ್ಕೆ ಇಲ್ಲಿದೆ ಶಾಶ್ವಾತ ಪರಿಹಾರ

2019ರ ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 12ರ ವರೆಗಿನ ಸುಮಾರು ಒಂದು ತಿಂಗಳ ಅವಧಿಯಲ್ಲಿ ಪಂಜಾಬ್‌ನಲ್ಲಿ 755 ಕಳೆಗೆ ಬೆಂಕಿ ಹಚ್ಚಿದ ಪ್ರಕರಣ ವರದಿಯಾಗಿತ್ತು. ಇನ್ನು 2018ರಲ್ಲಿ ಇದೇ ಅವದಿಯಲ್ಲಿ ಈ ಸಂಖ್ಯೆ 510 ಆಗಿತ್ತು. ಆದರೆ 2020ರಲ್ಲಿ ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 12ರ ವರೆಗಿನ ಅವಧಿಯಲ್ಲಿ 2,873 ಪ್ರಕರಣ ವರದಿಯಾಗಿದೆ ಎಂದು ಅನಿಲ್ ಸೂದ್ ಹೇಳಿದ್ದಾರೆ.

 

ದೆಹಲಿಯಲ್ಲಿನ ಮಾಲಿನ್ಯ ತಗ್ಗಿಸಲು ಕೇಂದ್ರ ಸರ್ಕಾರ 1,700 ಕೋಟಿ ರೂಪಾಯಿ ಅನುದಾನ ನೀಡಿದೆ. ಅಕ್ಟೋಬರ್ 1 ರಂದು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವೇಡ್ಕರ್ ಜೊತೆ ಮಾತುಕತೆ ನಡೆಸಿದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕಳೆಗೆ ಬೆಂಕಿ ಹಚ್ಚುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಇದನ್ನು ನಿಲ್ಲಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

Follow Us:
Download App:
  • android
  • ios