ನಿವೃತ್ತ ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆಯವರ ಆತ್ಮಕಥೆ ತೀವ್ರ ರಾಜಕೀಯ ಕೋಲಾಹಲ ಸೃಷ್ಟಿಸಿರುವ ನಡುವೆಯೇ, ಸೇನಾಧಿಕಾರಿಗಳ ಪುಸ್ತಕ ರಚನೆ ಮತ್ತು ಪ್ರಕಟಣೆ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ.

ನವದೆಹಲಿ : ನಿವೃತ್ತ ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆಯವರ ಆತ್ಮಕಥೆ ತೀವ್ರ ರಾಜಕೀಯ ಕೋಲಾಹಲ ಸೃಷ್ಟಿಸಿರುವ ನಡುವೆಯೇ, ಸೇನಾಧಿಕಾರಿಗಳ ಪುಸ್ತಕ ರಚನೆ ಮತ್ತು ಪ್ರಕಟಣೆ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯ

ಅದರಂತೆ, ಸೇನಾಧಿಕಾರಿಗಳು ಪುಸ್ತಕವನ್ನು ಬರೆಯುವ ಪೂರ್ವದಲ್ಲೇ ಸಚಿವಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯವಾಗುವ ಸಾಧ್ಯತೆ ಇದೆ.

ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿರುವ ಸಾಧ್ಯತೆ

ಸೇನಾಧಿಕಾರಿಗಳ ಕೃತಿಯಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳಿರುವ ಸಾಧ್ಯತೆಯಿರುತ್ತದೆ. ಹಾಗಾಗಿ ಸದ್ಯದ ನಿಯಮದಂತೆ, ಪುಸ್ತಕ ರಚನೆಯಾದ ಬಳಿಕ ಲೇಖಕರು ಅದನ್ನು ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಬೇಕು. ಸಚಿವಾಲಯ ಅದರ ಕೂಲಂಕಷ ಪರಿಶೀಲನೆ ನಡೆಸಿ, ನಂತರ ಬಿಡುಗಡೆಗೆ ಅನುಮತಿ ನೀಡುತ್ತದೆ. ಆದರೆ ಇನ್ನು ಮುಂದೆ ಈ ನಿಯಮ ಬದಲಾಗುವ ಸಾಧ್ಯತೆಯಿದೆ. ಸೇನಾಧಿಕಾರಿಗಳು ಪುಸ್ತಕವನ್ನು ಬರೆಯುವುದಕ್ಕೆ ಮುನ್ನವೇ ಸಚಿವಾಲಯಕ್ಕೆ ಅದರ ಮಾಹಿತಿ ನೀಡಬೇಕು. ಸಚಿವಾಲಯ ಅನುಮತಿಸಿದರೆ ಮಾತ್ರವೇ ಬರೆಯಲು ಮತ್ತು ಪ್ರಕಟಿಸಲು ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.