Asianet Suvarna News Asianet Suvarna News

ಆಕಾಶದಿಂದ ಬಿದ್ದ ಲೋಹದ ಚೆಂಡು: ಗ್ರಾಮಸ್ಥರ ನಿದ್ದೆಕೆಡಿಸಿದ ವಿಚಿತ್ರ ಪ್ರಕರಣ

  • ಆಕಾಶದಿಂದ ಬಿದ್ದ ಲೋಹದ ಚೆಂಡು
  • ಗ್ರಾಮಸ್ಥರ ನಿದ್ದೆಕೆಡಿಸಿದ ವಿಚಿತ್ರ ಪ್ರಕರಣ
  • ವಿಧಿ ವಿಜ್ಞಾನ ಪ್ರಯೋಗಾಲಯ ತಂಡದಿಂದ ಸ್ಥಳಕ್ಕೆ ಭೇಟಿ
Strange metal balls fall from sky in Gujarat districts watch photos akb
Author
Gujarat, First Published May 15, 2022, 12:25 PM IST

ಅಹ್ಮದಾಬಾದ್‌: ಗುಜರಾತ್‌ ರಾಜ್ಯದಲ್ಲಿ ವಿಚಿತ್ರವೊಂದು ನಡೆದಿದ್ದು, ಜನರನ್ನು ದಿಗ್ಭ್ರಮೆಗೊಳಿಸಿದೆ. ಆಕಾಶದಿಂದ ಬಿದ್ದಿದೆ ಎನ್ನಲಾದ ವಿಚಿತ್ರ ಲೋಹದ ಚೆಂಡುಗಳು ಸ್ಥಳೀಯ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ಗುಜರಾತ್‌ನ ಆನಂದ್ ಜಿಲ್ಲೆಯ ಭಲೇಜ್, ಖಂಭೋಲಾಜ್ ಮತ್ತು ರಾಂಪುರ ಎಂಬ ಮೂರು ವಿಭಿನ್ನ ಸ್ಥಳಗಳಲ್ಲಿ ವಿಚಿತ್ರವಾದ ಲೋಹದ ಚೆಂಡುಗಳನ್ನು ಜನರು ಪತ್ತೆ ಮಾಡಿದ್ದಾರೆ. ಈ ನಿಗೂಢ ಲೋಹದ ಚೆಂಡುಗಳ ಇರುವಿಕೆ ಗ್ರಾಮಸ್ಥರನ್ನು ಕಂಗೆಡಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಸ್ಥಳಗಳಲ್ಲಿ ಭಾರಿ ಸ್ಫೋಟದಂತಹ ಶಬ್ಧ ಕೇಳಿ ಬಂದ ನಂತರ ಜನರಿಗೆ ಭೂ ಕಂಪನದ ಅನುಭವವಾಗಿದ್ದು, ಜನರು ಭಯದಿಂದ ತಮ್ಮ ಮನೆಗಳಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ಈ ಲೋಹದ ಚೆಂಡ ಕಾಣಿಸಿಕೊಂಡಿದ್ದು, ನಂತರ ಸ್ಥಳೀಯ ಪೊಲೀಸರನ್ನು ಜನ ಸಂಪರ್ಕಿಸಿದ್ದಾರೆ. ಅವರು ತನಿಖೆಯನ್ನು ಪ್ರಾರಂಭಿಸಲು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಜ್ಞರನ್ನು ಸ್ಥಳಕ್ಕೆ ಕರೆಸಿದ್ದಾರೆ.  ಭಲೇಜ್‌ನಲ್ಲಿ (Bhalej) ಸುಮಾರು 5 ಕೆಜಿ ತೂಕದ ಗಂಟೆಯಂತೆ ಕಾಣುವ ಮೊದಲ ಕಪ್ಪು ಲೋಹದ ಚೆಂಡು ಸಂಜೆ 4:45 ರ ಸುಮಾರಿಗೆ ಬಂದು ಬಿದ್ದಿದೆ. ಇದಾದ ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿಯೂ (ampura) ಇದೇ ರೀತಿಯ ಘಟನೆಗಳು ನಡೆದವು.

ಇದು ಸೃಷ್ಟಿಯ ವೈಚಿತ್ರ್ಯ: ಇಲ್ಲಿದೆ ಸೂರ್ಯನಷ್ಟೇ ದೊಡ್ಡ ಗ್ರಹದ ಚಿತ್ರ!

ಲೋಹದ ಈ ಮೊದಲ ಚೆಂಡು ಸಂಜೆ 4.45 ರ ಸುಮಾರಿಗೆ ಬಿದ್ದಿದೆ ಮತ್ತು ಸ್ವಲ್ಪ ಸಮಯದ ನಂತರ ಇತರ ಎರಡು ಸ್ಥಳಗಳಿಂದ ಇದೇ ರೀತಿಯ ವರದಿಗಳು ಬಂದವು. ಅದೃಷ್ಟವಶಾತ್, ಈ ವಿಚಿತ್ರ ಅವಶೇಷಗಳು ಖಂಭೋಲಾಜ್‌ನಲ್ಲಿ (Khambholaj) ಮನೆಗಳಿರುವ ಪ್ರದೇಶದಿಂದ ದೂರ ಬಿದ್ದಿದ್ದರಿಂದ ಯಾವುದೇ ಗಾಯ ಅಥವಾ ಸಾವು ಸಂಭವಿಸಿಲ್ಲ. ಅಲ್ಲದೇ ಇತರ ಎರಡು ಸ್ಥಳಗಳಲ್ಲಿ ಅದು ತೆರೆದ ಪ್ರದೇಶದಲ್ಲಿ ಬಿದ್ದಿತು. ಇದು ಏನಾಗಿರಬಹುದು. ಬಾಹ್ಯಾಕಾಶ ಅವಶೇಷ ಆಗಿರಬಹುದೇ ಎಂದು ನಮಗೆ ಖಚಿತವಾಗಿಲ್ಲ ಆದರೆ ಗ್ರಾಮಸ್ಥರ ಹೇಳಿಕೆಗಳ ಪ್ರಕಾರ ಇದು ಆಕಾಶದಿಂದ ಬಿದ್ದಿದೆ ಎಂದು ಆನಂದ್ ನಗರದ ಪೊಲೀಸ್ ಅಧೀಕ್ಷಕ ಅಜಿತ್ ರಾಜಿಯಾನ್ (Ajit Rajiaan) ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. 

ಪ್ರವಾಹ ಪೀಡಿತ ಕೇರಳದಲ್ಲಿ ವಿಚಿತ್ರ ವಿದ್ಯಮಾನ : ಇದೆಂತಹ ಸಂಕಷ್ಟ..?

ವಿಧಿ ವಿಜ್ಞಾನ ಪ್ರಯೋಗಾಲಯ (FSL)ದ ತಂಡ ಬಂದು ಈ ಬಗ್ಗೆ ತನಿಖೆ ನಡೆಸಲಿದೆ. ನಾವು ಘಟನೆಯಲ್ಲಿ 'ನೋಟ್ ಕೇಸ್' ದಾಖಲಿಸಿದ್ದೇವೆ ಮತ್ತು ಈ ವಿಷಯದಲ್ಲಿ ಎಫ್‌ಎಸ್‌ಎಲ್‌ನ ವರದಿಗಾಗಿ ಕಾಯುತ್ತಿದ್ದೇವೆ. ಏತನ್ಮಧ್ಯೆ, ಜಿಲ್ಲಾ ಪೊಲೀಸ್ ಅಧಿಕಾರಿಗಳೂ ಸಹ ಈ ವಸ್ತುಗಳು ಏನಿರಬಹುದು ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಜಿತ್ ರಾಜಿಯಾನ್ ಹೇಳಿದ್ದಾರೆ. ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ (Maharashtra) ಆಕಾಶದಿಂದ ಬಾಹ್ಯಾಕಾಶ ಅವಶೇಷಗಳು ಬಿದ್ದ ಘಟನೆಯೊಂದು ನಡೆದಿತ್ತು. 

ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ (Maharashtra) ಆಕಾಶದಿಂದ ಬಾಹ್ಯಾಕಾಶ ಅವಶೇಷಗಳು ಬಿದ್ದ ಘಟನೆಯೊಂದು ನಡೆದಿತ್ತು. ವಿಶ್ವದ ಅತ್ಯಂತ ಕುಗ್ರಾಮಗಳಿಗೂ ಶರವೇಗದ ಅಂತರ್ಜಾಲ ಸೇವೆ ಒದಗಿಸಲು ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಒಡೆತನದ ಸ್ಪೇಸ್‌ ಎಕ್ಸ್‌ ಕಂಪನಿ ಹಾರಿಬಿಟ್ಟಿದ್ದ 40 ಉಪಗ್ರಹಗಳು ಆಗಸದಿಂದ ಧರೆಯತ್ತ ಉದುರಿದ ಕಳೆದ ಫೆಬ್ರವರಿಯಲ್ಲಿ ನಡೆದಿತ್ತು. ಇವು ನಿಗದಿತ ಕಕ್ಷೆಯಿಂದ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಲೇ ಸುಟ್ಟು ಭಸ್ಮವಾಗಿರುವ ಕಾರಣ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಆದರೆ ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಅತ್ಯಂತ ಕೆಳ ಕಕ್ಷೆಯಲ್ಲಿರುವ ಇಂಥ ಉಪಗ್ರಹಗಳಿಂದ ಅಪಾಯದ ಸಾಧ್ಯತೆಯ ಕುರಿತು ಆತಂಕ ಹುಟ್ಟುಹಾಕಿದೆ. ಇತ್ತೀಚೆಗೆ ಕರ್ನಾಟಕದ ಕರಾವಳಿ ಸೇರಿ ದೇಶದ ಹಲವು ರಾಜ್ಯಗಳಲ್ಲಿ ರಾತ್ರಿ ವೇಳೆ ಸರಪಳಿಯ ಆಕಾರದಲ್ಲಿ ಕಾಣಿಸಿಕೊಂಡಿದ್ದ ಬೆಳಕು ಇದೇ ರೀತಿಯ ಉಪಗ್ರಹಗಳ ಚಲನೆಯದ್ದಾಗಿತ್ತು ಎಂದು ತಿಳಿದು ಬಂದಿದೆ.

Follow Us:
Download App:
  • android
  • ios