ಜಗತ್ತಿನ ಅತಿ ಚಿಕ್ಕ ಹಸು ಎಂದು ಹೆಸರು ಪಡೆದು ಸಾವನ್ನಪ್ಪಿದ ರಾಣಿಯ ಬಗ್ಗೆ ಇಲ್ಲಿದೆ ವಿವರ. ಕೋವಿಡ್ ಟೈಮ್ನಲ್ಲಿಯೇ ಫೇಮಸ್ ಆಗಿದ್ದ ರಾಣಿಯ ಸ್ಟೋರಿ ಇದು...
ದೇವತೆ ಎಂದೇ ಹಿಂದೂಗಳ ಪೂಜಿಸುವ ಹಸುಗಳಲ್ಲಿ ಹಲವು ತಳಿಗಳಿವೆ. ಇದೀಗ ಇಲ್ಲೊಂದು ಪುಟ್ಟ ಹಸು ಗಿನ್ನೆಸ್ ದಾಖಲೆಯ ಪುಸ್ತಕ ಸೇರಿದೆ. ಕೆಲ ವರ್ಷಗಳ ಹಿಂದೆ ಈ ಪುಟಾಣಿ ಮೃತಪಟ್ಟಿದ್ದು, ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಚಿಕ್ಕ ಗಾತ್ರದ ಅಥವಾ ಅತ್ಯಂತ ಕುಳ್ಳ ಹಸು ಎನ್ನುವ ಪಟ್ಟ ಪಡೆದುಕೊಂಡಿದೆ. ರಾಣಿ ಎಂದು ಹೆಸರು ಇದಕ್ಕಿದ್ದು, 51 ಸೆಂಟಿಮೀಟರ್ ಅಂದರೆ 20 ಇಂಚು ಉದ್ದವಿದೆ. ಬಾಂಗ್ಲಾದೇಶದಲ್ಲಿ ಹುಟ್ಟಿರುವ ಈ ಹಸು ಈಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದೆ.
ಇನ್ನು ಇದು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದ ಅತ್ಯಂತ ಚಿಕ್ಕ ಹಸುಗಿಂತ 10 ಸೆಂ.ಮೀ ಗಿಡ್ಡವಿತ್ತು. ಹಸು ರಾಣಿ 26ಕೆಜಿ ತೂಕವನ್ನಷ್ಟೇ ಹೊಂದಿತ್ತು. ಕೋವಿಡ್ ಸಮಯದಲ್ಲಿ ಈ ಹಸುವಿನ ಬಗ್ಗೆ ತಿಳಿಯುತ್ತಲೇ ಜನರು ಮೂಲೆಮೂಲೆಗಳಿಂದ ಇದನ್ನು ನೋಡಲು ಆಗಮಿಸುತ್ತಿದ್ದರು. ಇದೀಗ ಮತ್ತೆ ಸೋಷಿಯಲ್ ಮೀಡಿಯಾದ ಟ್ರೆಂಡ್ ಆಗಿದೆ ಈ ಪುಟಾಣಿ. ಈಗಲೂ ಜನರು ಇದನ್ನು ನೋಡಲು ಆಗಮಿಸುತ್ತಿದ್ದು, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದರು. ಆದರೆ ಈ ಹಸು 2021ರಂದು ಮೃತಪಟ್ಟಿದೆ. ಇದು ಸಾವನ್ನಪ್ಪಿ ನಾಲ್ಕು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಮತ್ತೆ ಇದರ ಬಗ್ಗೆ ಈಗ ಸುದ್ದಿಯಾಗುತ್ತಿದೆ.

ಅಷ್ಟಕ್ಕೂ ಈ ಹಸು ವಿಶೇಷ ತಳಿಯಲ್ಲ. ಬದಲಿಗೆ ವರದಿಗಳ ಪ್ರಕಾರ, ಅತಿಯಾಗಿ ತಿನ್ನುವುದು ಮತ್ತು ಹೊಟ್ಟೆಯಲ್ಲಿ ಅನಿಲ ಸಂಗ್ರಹವಾಗುವುದರಿಂದ ಇಂಥ ಜನನವಾಗಿದೆ ಎನ್ನಲಾಗುತ್ತಿದೆ. ರಾಣಿ ಅನುವಂಶಿಕ ಸಂತಾನೋತ್ಪತ್ತಿಯಿಂದಾಗಿ ಬೆಳವಣಿಗೆ ಹೊಂದಿರುವುದಿಲ್ಲ ಎಂದ ಮುಖ್ಯ ಪಶುವೈದ್ಯ ಸಜೇದುಲ್ ಇಸ್ಲಾಂ ಹೇಳಿದ್ದರು. ಹೆಚ್ಚು ಜನರನ್ನು ಜಮೀನಿಗೆ ಕರೆದೊಯ್ಯಬೇಡಿ.. ಇದು ರಾಣಿಯ ಆರೋಗ್ಯಕ್ಕೆ ಧಕ್ಕೆ ತರಬಹುದು ಎಂದೂ ಸೂಚನೆ ನೀಡಿದ್ದರು. ಇದರ ಹೊರತಾಗಿಯೂ ವಿಷಯ ತಿಳಿಯುತ್ತಲೇ ಜನಜಂಗುಳಿಯೇ ಸೇರಿತ್ತು.
ರಾಣಿಯ ಆರೋಗ್ಯ ತೀವ್ರ ಹದಗೆಟ್ಟ ನಂತರ ಚಿಕಿತ್ಸೆ ನೀಡಲು ತುರ್ತಾಗಿ ಕರೆದೊಯ್ಯಲಾಯಿತು, ಆದರೆ ಪಶುವೈದ್ಯರು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾಣಿ ಎಷ್ಟೇ ಸುಂದರವಾಗಿದ್ದರೂ, ಅವಳನ್ನು ಯಾವಾಗಲೂ ಅತ್ಯಂತ ಕುಳ್ಳ ಮತ್ತು ಬಹುಶಃ ಅತ್ಯಂತ ಮುದ್ದಾದ ಹಸು ಎಂದು ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ.

