ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾಳೆಂಬ ಕಾರಣಕ್ಕೆ ಹೆಂಡತಿಯ ಮೇಲೆ ಅನುಮಾನಪಟ್ಟ ಗಂಡನೊಬ್ಬ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ 'ಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಮಹಿಳೆಯರನ್ನು ಕೀಳಾಗಿ ಕಾಣುವ ಮನಸ್ಥಿತಿ ಬದಲಿಸಿಕೊಳ್ಳಿ ಎಂದು ಪಾಠ ಮಾಡಿದೆ. 

ಅಹಮದಾಬಾದ್(ಜು.15): ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವವರು ಮತ್ತು ರಾಜಕೀಯ ಪಕ್ಷಗಳ ರಾಜಕಾರಣಿಗಳೊಂದಿಗೆ ಬೆರೆಯುವವರು, ಸಮಾಜಸೇವೆಯಲ್ಲಿ ಸಕ್ರಿಯವಾಗಿರುವ ಮಹಿಳೆಯರನ್ನು ಕೀಳಾಗಿ ಕಾಣುವವರು ಇಂದಿನ ಕಾಲಘಟ್ಟದಲ್ಲಿ ಅವರ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಅಹಮದಾಬಾದ್‌ನ ನ್ಯಾಯಾಲಯ ಹೇಳಿದೆ.

ಟೈಮ್ಸ್ ಆಫ್ ಇಂಡಿಯಾ ಸುದ್ದಿಯ ಪ್ರಕಾರ, ರಾಜಕೀಯ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಮಹಿಳೆಯರನ್ನು ಒಳ್ಳೆಯವರು ಎಂದು ಪರಿಗಣಿಸದ ಮತ್ತು ಅವರ ದುರ್ಬಲ ಸ್ವಭಾವವನ್ನು ಅನುಮಾನಿಸುವ ಇಂತಹ ಮನಸ್ಥಿತಿಯ ಜನರಿಗೆ ನ್ಯಾಯಾಲಯ ಛೀಮಾರಿ ಹಾಕಿದೆ. ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯವು ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿ ದುಬೈನಲ್ಲಿ ನೆಲೆಸಿರುವ ತನ್ನ ಪರಿತ್ಯಕ್ತ ಪತ್ನಿಗೆ ಜೀವನಾಂಶವನ್ನು ಪಾವತಿಸುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯುವಾಗ ಈ ಅವಲೋಕನಗಳನ್ನು ಮಾಡಿದೆ. ತನ್ನ ಪತ್ನಿ ರಾಜಕಾರಣಿಗಳ ಜೊತೆ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾಳೆ ಎಂದು ಪತಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದರು. ಸೆಷನ್ಸ್ ನ್ಯಾಯಾಲಯವು ಪತಿಯ ವಾದವನ್ನು ತಿರಸ್ಕರಿಸಿತು ಮತ್ತು ಇದು ಅವನ ಹೆಂಡತಿಯ ಚಾರಿತ್ರ್ಯವನ್ನು ಅನುಮಾನಿಸಲು ಕಾರಣವಾಗುವುದಿಲ್ಲ ಎಂದು ಹೇಳಿದೆ.

ಗಂಡನ ಅನುಮಾನಿಸುವುದು, ಸಹೋದ್ಯೋಗಿಗಳೊಂದಿಗೆ ಸಂಬಂಧ ಕಲ್ಪಿಸುವುದು ಕ್ರೌರ್ಯ

ಈ ಜೋಡಿಯು 2008 ರಲ್ಲಿ ವಿವಾಹವಾಗಿತ್ತು. 2010 ರಲ್ಲಿ ಹೆಣ್ಣು ಮಗುವಿನ ಜನನದ ನಂತರ, ಮಹಿಳೆ ತನ್ನ ತಾಯಿಯ ಮನೆಗೆ ಮರಳಿದಳು ಮತ್ತು ಪತಿ ದುಬೈನ ಕಂಪನಿಯೊಂದರಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಹೋದನು. ನಂತರ, ಮಹಿಳೆ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ತನ್ನ ಪತಿಯಿಂದ ಜೀವನಾಂಶವನ್ನು ಕೇಳಿದ್ದಳು. ಆದರೆ ಪತ್ನಿ ತನ್ನ ಸ್ವಂತ ಇಚ್ಛೆಯ ಮೇರೆಗೆ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. ಜೀವನಾಂಶದ ವಿಷಯ ಬಂದಾಗ, ಪತಿ ತನ್ನ ಹೆಂಡತಿಯನ್ನು ಆಡಳಿತ ಪಕ್ಷದ ನಾಯಕರ ಜೊತೆ ನೋಡುತ್ತಾರೆ ಮತ್ತು ಆಕೆಗೆ ಉತ್ತಮ ಆದಾಯವಿದೆ ಎಂದು ಹೇಳಿದರು.

ದುಡಿಯುವ ಶಕ್ತಿ ಇರುವಾತನಿಗೆ ಪತ್ನಿ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್‌

ಪತ್ನಿಯ ತನ್ನ ಹುಟ್ಟುಹಬ್ಬದಂದು ಸ್ಥಳೀಯ ಶಾಸಕರ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾಳೆ. ಹೀಗಿರುವಾಗ ಮಹಿಳೆ ಅನೈತಿಕ ಜೀವನ ನಡೆಸುತ್ತಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ. ಆದರೆ ಹೆಣ್ಣು ಮಗು ಜನಿಸಿದ ನಂತರ, ತನ್ನ ಅತ್ತೆಯ ಮನೆಯಿಂದ ಬಲವಂತವಾಗಿ ಹೊರಹಾಕಲಾಯಿತು ಎಂದು ಮಹಿಳೆ ಹೇಳಿದ್ದಾರೆ. ಏಕೆಂದರೆ ಆಕೆಯ ಅತ್ತೆಗೆ ಗಂಡು ಮಗು ಬೇಕು. ಫೆಬ್ರವರಿಯಲ್ಲಿ ಮೆಟ್ರೋಪಾಲಿಟನ್ ನ್ಯಾಯಾಲಯವು ಮಹಿಳೆ ಮತ್ತು ಮಗುವಿಗೆ 10,000 ರೂ.ಗಳನ್ನು ಜೀವನಾಂಶವಾಗಿ ನೀಡುವಂತೆ ಪತಿಗೆ ಆದೇಶಿಸಿದೆ. ಸೆಷನ್ಸ್ ಕೋರ್ಟ್ ಕೂಡ ಆ ತೀರ್ಪನ್ನು ಎತ್ತಿ ಹಿಡಿದಿದೆ.