ಗಂಡನ ಅನುಮಾನಿಸುವುದು, ಸಹೋದ್ಯೋಗಿಗಳೊಂದಿಗೆ ಸಂಬಂಧ ಕಲ್ಪಿಸುವುದು ಕ್ರೌರ್ಯ
ಗಂಡನ ಗುಣವನ್ನು ಅನುಮಾನಿಸುವುದು, ಅವನು ಕೆಲಸ ಮಾಡುತ್ತಿರುವ ಕಚೇರಿಗೆ ಆಗಾಗ ಭೇಟಿ ನೀಡಿ ಹೊಸ ಸೀನ್ ಸೃಷ್ಟಿಸುವುದು. ಆತನಿಗೆ ಆತನ ಸಹೋದ್ಯೋಗಿಗಳೊಂದಿಗೆ ಸಂಬಂಧ ಕಲ್ಪಿಸುವುದು ಕ್ರೌರ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಗಂಡನ ಗುಣವನ್ನು ಅನುಮಾನಿಸುವುದು, ಅವನು ಕೆಲಸ ಮಾಡುತ್ತಿರುವ ಕಚೇರಿಗೆ ಆಗಾಗ ಭೇಟಿ ನೀಡಿ ಹೊಸ ಸೀನ್ ಸೃಷ್ಟಿಸುವುದು. ಆತನಿಗೆ ಆತನ ಸಹೋದ್ಯೋಗಿಗಳೊಂದಿಗೆ ಸಂಬಂಧ ಕಲ್ಪಿಸುವುದು ಕ್ರೌರ್ಯ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅಲ್ಲದೇ ಹೆಂಡತಿ ಕರಿಮಣಿ ಅಥವಾ ಮಂಗಳಸೂತ್ರ ಧರಿಸದೇ ಇರುವುದು ಅದರ ಮಹತ್ವವನ್ನು ಅರಿಯದೇ ಇರುವುದು ಕೂಡ ದಾಂಪತ್ಯದಲ್ಲಿ ಮುಂದುವರಿಯುವ ಉದ್ದೇಶ ಆಕೆಗೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಗಂಡನ ಗುಣವನ್ನು ಅನುಮಾನಿಸುವುದು, ಅವನು ಕೆಲಸ ಮಾಡುತ್ತಿರುವ ಕಚೇರಿಗೆ ಆಗಾಗ ಭೇಟಿ ನೀಡಿ ಸೀನ್ ಸೃಷ್ಟಿಸುವುದು ಹಾಗೂ ಯಾವುದೇ ಸಾಕ್ಷ್ಯಗಳಿಲ್ಲದೇ ಆತನ ವಿರುದ್ಧ ದೂರು ದಾಖಲಿಸುವುದು ಮಾನಸಿಕ ಕಿರುಕುಳ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ವಿ.ಎಂ. ವೇಲುಮಣಿ ಹಾಗೂ ಎಸ್. ಸೌಂತರ್ ಅವರಿದ್ದ ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಈ ಹೇಳಿಕೆ ನೀಡಿ ವ್ಯಕ್ತಿಗೆ ವಿಚ್ಛೇದನ ನೀಡಿದೆ. ಆತನ ಪತ್ನಿ ಆತನ ಬಗ್ಗೆ ಅನುಮಾನ ಪಡುತ್ತಿದ್ದಾಳೆ. ಆತನ ಗುಣವನ್ನು ಅನುಮಾನಿಸಿ ಆತ ಕೆಲಸ ಮಾಡುವ ಸ್ಥಳಕ್ಕೆ ತೆರಳಿ ಅವಮಾನ ಮಾಡುತ್ತಿದ್ದಾಳೆ ಎಂದು ಹೇಳಿ ವ್ಯಕ್ತಿಯೋರ್ವನಿಗೆ ಪತ್ನಿಯಿಂದ ವಿಚ್ಛೇದನ ಕೊಡಿಸಿದೆ.
Reason for Divorce: ಜೊತೆಯಾಗಿ ಹಿತವಾಗಿ ನಡೆವ ಆಸೆಯಿದ್ರೂ ದಂಪತಿ ದೂರವಾಗೋದ್ಯಾಕೆ?
ಆಕೆ ಕೆಟ್ಟ ಭಾಷೆಯನ್ನು ಬಳಸುವ ಮೂಲಕ ಇತರ ಮಹಿಳಾ ಶಿಕ್ಷಕ ಸಹೋದ್ಯೋಗಿಗಳ ಜೊತೆ ಗಂಡನಿಗೆ ಸಂಬಂಧ ಕಲ್ಪಿಸುತ್ತಿದ್ದಾಳೆ. ಮಕ್ಕಳು ಹಾಗೂ ಇತರ ಸಹೋದ್ಯೋಗಿಗಳ ಮುಂದೆ ಕೆಟ್ಟ ಭಾಷೆಯಲ್ಲಿ ಆಕೆಗೆ ಬೈದಿದ್ದಾಳೆ ಎಂಬುದನ್ನು ವಿಚ್ಛೇದನ ನೀಡುವ ವೇಳೆ ಕೋರ್ಟ್ ಉಲ್ಲೇಖಿಸಿದೆ.
ಕೆಲಸದ ಸ್ಥಳಕ್ಕೆ ತೆರಳಿ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡಿರುವುದು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13(1) ಪ್ರಕಾರ ಮಾನಸಿಕ ಕಿರುಕುಳ. ಈ ರೀತಿಯ ವರ್ತನೆ ಗಂಭೀರ ಪರಿಣಾಮ ಬೀರಬಲ್ಲದು. ಇದು ಗಂಡನ ವ್ಯಕ್ತಿತ್ವದ ಮೇಲೆ ಸರಿಪಡಿಸಲಾಗದ ಹಾನಿ ಮಾಡಬಲ್ಲದು. ಅಲ್ಲದೇ ಆತನ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಮುಂದೆ ಆತನ ವ್ಯಕ್ತಿತ್ವಕ್ಕೆ ಅಳಿಸಲಾಗದ ಕಪ್ಪು ಚುಕ್ಕೆ ಮೂಡುವುದು ಎಂದು ಕೋರ್ಟ್ ಹೇಳಿದೆ.
ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನದ ಆದೇಶವನ್ನು ನಿರಾಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಪತಿ, ವೈದ್ಯಕೀಯ ಕಾಲೇಜಿನ ಉಪನ್ಯಾಸಕನಾಗಿದ್ದು, ಪತ್ನಿ, ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದರು. ನವೆಂಬರ್ 10, 2008 ರಂದು ಇವರು ವಿವಾಹವಾಗಿದ್ದರು ಹಾಗೂ ಎರಡೂವರೆ ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು.
3 ಮಕ್ಕಳಿದ್ದರೂ ವಿಚ್ಛೇದನ ಪಡೆದು 15 ವರ್ಷದ ಗೆಳೆಯನ ಜೊತೆ ಹಸೆಮಣೆ ಏರಿದ ಗಾಯಕಿ!
ತನ್ನ ಪತಿ ಇತರ ಮಹಿಳಾ ಉಪನ್ಯಾಸಕರ ಜತೆ ಅಕ್ರಮ ಸಂಬಂಧ ಹೊಂದಿದ್ದು, ಮಧ್ಯರಾತ್ರಿಯವರೆಗೂ ಸೆಲ್‌ಫೋನ್‌ನಲ್ಲಿ ಮಾತನಾಡುತ್ತಿರುತ್ತಾನೆ. ತನ್ನ ಮಗಳ ಉತ್ತಮ ಭವಿಷ್ಯಕ್ಕಾಗಿಯಾದರೂ ತನ್ನ ಪತಿಯೊಂದಿಗೆ ಮತ್ತೆ ಒಂದಾಗಲು ಮತ್ತು ಅವನೊಂದಿಗೆ ಸಂತೋಷದಿಂದ ಬದುಕಲು ಬಯಸುವುದಾಗಿ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮಹಿಳೆ ತಿಳಿಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ, 2011ರಲ್ಲಿ ತನ್ನನ್ನು ತೊರೆಯುವಾಗ ಹೆಂಡತಿ ತನ್ನ ತಾಳಿ ಸರವನ್ನು (ಮಂಗಲಸೂತ್ರ) ತೆಗೆದಿದ್ದಳು, ಇದು ಮದುವೆಯಾದ ಸಂಕೇತವಾಗಿ ಮಹಿಳೆ ಧರಿಸಿರುವ ಪವಿತ್ರ ಸರಪಳಿಯಾಗಿದೆ ಎಂದು ಪತಿ ದೂರಿದ್ದ. ಆದರೆ, ಆ ಚೈನ್ ಮಾತ್ರ ತೆಗೆದು ತಾಳಿ ಉಳಿಸಿಕೊಂಡಿದ್ದೆ ಎಂದು ಪತ್ನಿ ವಿವರಿಸಿದ್ದಾರೆ. ತಾಳಿ ಸರವನ್ನು ಕಟ್ಟುವುದು ಅನಿವಾರ್ಯವಲ್ಲ ಮತ್ತು ಅದನ್ನು ತೆಗೆದು ಹಾಕುವುದರಿಂದ ದಂಪತಿಗಳ ವೈವಾಹಿಕ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಕೆ ಹೇಳಿದರು.
ಆದಾಗ್ಯೂ, ತಾಳಿ ಸರವು ತನ್ನದೇ ಆದ ಮಹತ್ವವನ್ನು ಹೊಂದಿದೆ ಮತ್ತು ವೈವಾಹಿಕ ಸಂಬಂಧವನ್ನು ಮುಂದುವರಿಸುವ ಯಾವುದೇ ಉದ್ದೇಶವನ್ನು ಕಕ್ಷಿದಾರರು ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಈ ಭಾಗದಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ತಾಳಿ ಕಟ್ಟುವುದು ಅತ್ಯವಶ್ಯಕವಾದ ಆಚರಣೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ತಾಳಿ ಸರ ತೆಗೆಯುವುದನ್ನು ಸಾಮಾನ್ಯವಾಗಿ ವಿವೇಚನಾರಹಿತ ಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ವೈವಾಹಿಕ ಜೀವನ ಮುಂದುವರಿಸುವ ಉದ್ದೇಶ ಹೊಂದಿಲ್ಲ ಎಂಬುದನ್ನು ತಿಳಿಸುತ್ತದೆ ಎಂದು ಹೈಕೋರ್ಟ್ ಹೇಳಿದ್ದು ಪತಿಯ ಮೇಲ್ಮನವಿಯನ್ನು ಪುರಸ್ಕರಿಸಿ ಪತಿಗೆ ವಿಚ್ಛೇದನ ನೀಡಿದೆ. ಪತಿ ಪರ ಹಿರಿಯ ವಕೀಲ ಎಸ್.ಸುಬ್ಬಯ್ಯ ವಾದ ಮಂಡಿಸಿದರೆ, ಪತ್ನಿ ಪರ ವಕೀಲ ಎಸ್.ವಿಜಯರಾಘವನ್ ವಾದ ಮಂಡಿಸಿದ್ದರು.