ಇಂಡಿಯಾ ಗೇಟ್‌ನಲ್ಲಿ ಸುಭಾಷ್ ಚಂದ್ರ ಬೋಸರ 30 ಅಡಿ ಪ್ರತಿಮೆ: ಮೈಸೂರಿನ ಅರುಣ್ ಯೋಗಿರಾಜ್ ಕೆತ್ತನೆ
ಪ್ರತಿಮೆಗಾಗಿ ತೆಲಂಗಾಣದಿಂದ ದೊಡ್ಡ ಕಪ್ಪು ಜೇಡ್ ಗ್ರಾನೈಟ್ ಕಲ್ಲನ್ನು ಆಯ್ಕೆ ಮಾಡಿ ದೆಹಲಿಗೆ ತರಲಾಗಿದ್ದು ಅಲ್ಲಿ ಕಾಮಗಾರಿ ನಡೆಯಲಿದೆ
ನವದೆಹಲಿ( ಮೇ 31): ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಸುಭಾಷ್ ಚಂದ್ರ ಬೋಸ್ (Subhas Chandra Bose) ಅವರ 30 ಅಡಿ ಪ್ರತಿಮೆಯನ್ನು ಕೆತ್ತಲಿದ್ದಾರೆ, ಇದನ್ನು ಇಂಡಿಯಾ ಗೇಟಿನ ಹಿಂದಿನ ಅಮರ್ ಜವಾನ್ ಜ್ಯೋತಿಯ ಹಿಂಭಾಗದ ಭವ್ಯ ಮೇಲಾವರಣದ ಅಡಿಯಲ್ಲಿ ಸ್ಥಾಪಿಸಲಾಗುವುದು ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ಕೇದಾರನಾಥದಲ್ಲಿ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನೂ ಯೋಗಿರಾಜ್ ಕೆತ್ತಿದ್ದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಮೊದಲು, ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆಯನ್ನು ಗೌರವಿಸಲು ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
1930 ರ ದಶಕದಲ್ಲಿ ಸರ್ ಎಡ್ವಿನ್ ಲುಟ್ಯೆನ್ಸ್ ಅವರು ಉಳಿದ ಭವ್ಯ ಸ್ಮಾರಕದೊಂದಿಗೆ ನಿರ್ಮಿಸಲಾದ ಮೇಲಾವರಣವು ಒಮ್ಮೆ ಇಂಗ್ಲೆಂಡ್‌ನ ಮಾಜಿ ರಾಜ ನೇ 5 ಜಾರ್ಜ್ ಪ್ರತಿಮೆಯನ್ನು ಹೊಂದಿತ್ತು. ಈ ಪ್ರತಿಮೆಯನ್ನು ನಂತರ 1960 ರ ದಶದಲ್ಲಿ ಮಧ್ಯ ದೆಹಲಿಯ ಕೊರೋನೆಷನ್ ಪಾರ್ಕ್‌ಗೆ (Coronation Park) ಸ್ಥಳಾಂತರಿಸಲಾಯಿತು. ಪ್ರತಿಮೆಗಾಗಿ ತೆಲಂಗಾಣದಿಂದ ದೊಡ್ಡ ಕಪ್ಪು ಜೇಡ್ ಗ್ರಾನೈಟ್ ಕಲ್ಲನ್ನು ಆಯ್ಕೆ ಮಾಡಿ ದೆಹಲಿಗೆ ತರಲಾಗಿದ್ದು ಅಲ್ಲಿ ಕಾಮಗಾರಿ ನಡೆಯಲಿದೆ.
ಇದನ್ನೂ ಓದಿ: Shankaracharya Statue:ಕೇದಾರನಾಥದಲ್ಲಿನ ಶಂಕರಾಚಾರ್ಯ ಪ್ರತಿಮೆ ಕೆತ್ತಿದ್ದು ಮೈಸೂರು ಶಿಲ್ಪಿ!
ಪ್ರತಿಮೆಯ ವಿನ್ಯಾಸವನ್ನು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್‌ಜಿಎಂಎ) ತಂಡವು ಅದರ ನಿರ್ದೇಶಕ ಜನರಲ್ ಅದ್ವೈತ ಗಡನಾಯಕ್ ಅವರ ನೇತೃತ್ವದಲ್ಲಿ ಮಾಡಿದೆ.
ಅನೇಕ ಕೆತ್ತನಗಳಿಗೆ ಹೆಸರುವಾಸಿಯಾಗಿರುವ ಯೋಗಿರಾಜ್ ಅವರು ಜೂನ್ 1 ರಂದು ದೆಹಲಿಗೆ ಆಗಮಿಸಿದಾಗ ಪ್ರತಿಮೆಯ ಮುಖದ ವೈಶಿಷ್ಟ್ಯಗಳನ್ನು ನಿರ್ದಿಷ್ಟವಾಗಿ ಕೆತ್ತಲಿದ್ದಾರೆ ಮತ್ತು ಆಗಸ್ಟ್ 15 ರೊಳಗೆ ಕೆಲಸವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ತಿಂಗಳು ಯೋಗಿರಾಜ್ ಎರಡು ಅಡಿ ಪ್ರತಿಕೃತಿಯನ್ನು ನೀಡಿದಾಗ ಅವರ ಪ್ರತಿಮೆಗೆ ಪ್ರಧಾನಿ ಅನುಮೋದನೆ ನೀಡಿದ್ದರು. ಯೋಗಿರಾಜ್ ಅವರೊಂದಿಗಿನ ಭೇಟಿಯ ಬಗ್ಗೆ ಮೋದಿ ನಂತರ ಮಾದರಿಯ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: 6 ತಿಂಗಳ ಬಳಿಕ ತೆರೆಯಿತು ಬಾಬಾ ಕೇದಾರನಾಥನ ದ್ವಾರ, 10 ಕ್ವಿಂಟಾಲ್ ಹೂವಿನಿಂದ ಮಂದಿರ ಅಲಂಕಾರ!
ಕೇದಾರನಾಥದಲ್ಲಿ ಸ್ಥಾಪಿಸಲಾದ ಆದಿ ಶಂಕರಾಚಾರ್ಯರ ವಿಗ್ರಹವನ್ನು ನಿರ್ಮಿಸುವುದರ ಹೊರತಾಗಿ, ಯೋಗಿರಾಜ್ ಅವರ ಇತರ ಕೃತಿಗಳಲ್ಲಿ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 14.5 ಅಡಿ ಬಿಳಿ ಅಮೃತಶಿಲೆಯ ಕಲ್ಲಿನ ಶಿಲ್ಪ ಮತ್ತು ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲೆಯ ಶಿಲ್ಪ ಸೇರಿವೆ.