Asianet Suvarna News Asianet Suvarna News

6 ತಿಂಗಳ ಬಳಿಕ ತೆರೆಯಿತು ಬಾಬಾ ಕೇದಾರನಾಥನ ದ್ವಾರ, 10 ಕ್ವಿಂಟಾಲ್ ಹೂವಿನಿಂದ ಮಂದಿರ ಅಲಂಕಾರ!

* 6 ತಿಂಗಳ ಬಳಿಕ ತೆರೆಯಿತು ಬಾಬಾ ಕೇದಾರನಾಥನ ದ್ವಾರ

* ನಾಲ್ಕು ಧಾಮಗಳಲ್ಲಿ ಒಂದಾದ ಬಾಬಾ ಕೇದಾರನಾಥ

* ಭಕ್ತರಿಗಾಗಿ ಬೆಳಗ್ಗೆ 6.25ಕ್ಕೆ ತೆರೆದ ದೇವಸ್ಥಾನದ ಬಾಗಿಲು

Kedarnath Temple Opens For Devotees Check Daily Limit For Pilgrims Other COVID Rules pod
Author
Bangalore, First Published May 6, 2022, 9:20 AM IST

ಕೇದಾರನಾಥ(ಮೇ.06): ಆರು ತಿಂಗಳ ನಂತರ, ನಾಲ್ಕು ಧಾಮಗಳಲ್ಲಿ ಒಂದಾದ ಬಾಬಾ ಕೇದಾರನಾಥನ ಬಾಗಿಲು ತೆರೆಯಲಾಗಿದೆ. ಶುಭ ಮುಹೂರ್ತದಲ್ಲಿ ವೇದಘೋಷದೊಂದಿಗೆ ಬೆಳಗ್ಗೆ 6.25ಕ್ಕೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಇದರೊಂದಿಗೆ ಸಾವಿರಾರು ಭಕ್ತರು ದರ್ಶನಕ್ಕಾಗಿ ಆಗಮಿಸಿದ್ದರು. ಬಾಗಿಲು ತೆರೆಯುವ ವೇಳೆ ಸುಮಾರು 10 ಸಾವಿರ ಜನ ಸೇರಿದ್ದರು ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ಉಪಸ್ಥಿತರಿದ್ದರು. ಮೇ 3 ರಂದು ಅಕ್ಷಯ ತೃತೀಯದಿಂದ ಚಾರ್ ಧಾಮ್ ಯಾತ್ರೆ ಪ್ರಾರಂಭವಾಗಿದೆ. ಕೇದಾರನಾಥ ತೆರೆದ 2 ದಿನಗಳ ನಂತರ ಮೇ 8 ರಂದು ಬದರಿನಾಥ ದೇವಾಲಯವನ್ನು ತೆರೆಯಲಾಗುತ್ತದೆ.

ಭಕ್ತರು ಗುರುವಾರ ಕೇದಾರನಾಥ ತಲುಪಿದ್ದರು

ಗುರುವಾರ ಬೆಳಗ್ಗೆ ಗೌರಿಕುಂಡ್‌ನಿಂದ ಕೇದಾರನಾಥ ಧಾಮದ ಕಡೆಗೆ ಸಾವಿರಾರು ಭಕ್ತರು ತೆರಳಿದ್ದರು. ಸುಮಾರು 21 ಕಿ.ಮೀ ದೂರವನ್ನು ಕಾಲ್ನಡಿಗೆ, ಕುದುರೆ ಅಥವಾ ಪಿತ್ತೂ ಮೂಲಕ ತೆರಳಿದ್ದರು. ಗುರುವಾರ ಬೆಳಗ್ಗೆ 6 ಗಂಟೆಗೆ ಆರಂಭವಾದ ಈ ಪ್ರಯಾಣ ಸಂಜೆ 4 ಗಂಟೆಗೆ ಕೇದಾರನಾಥ ಧಾಮ ತಲುಪುವ ಮೂಲಕ ಮುಕ್ತಾಯವಾಯಿತು. ಪ್ರಪಂಚದ ಒಳಿತಿಗಾಗಿ ಬಾಬಾ ಕೇದಾರನಾಥರು 6 ತಿಂಗಳ ಕಾಲ ಸಮಾಧಿಯಲ್ಲಿರುತ್ತಾರೆ ಎಂದು ನಂಬಲಾಗಿದೆ. ದೇವಸ್ಥಾನದ ಬಾಗಿಲು ಮುಚ್ಚಿದಾಗ ಕಾಲು ಕ್ವಿಂಟಾಲ್ ವಿಭೂತಿ ಅರ್ಪಿಸಲಾಗುತ್ತದೆ. ಬಾಗಿಲು ತೆರೆದ ತಕ್ಷಣ ಬಾಬಾ ಕೇದಾರ ಸಮಾಧಿಯಿಂದ ಮೇಲೇರುತ್ತಾನೆ ಎಂದು ಹೇಳಲಾಗುತ್ತದೆ. ಬಾಬಾ ಕೇದಾರನಾಥದಲ್ಲಿ ಪೂಜೆಯನ್ನು ದಕ್ಷಿಣದ ವೀರಶೈವ ಲಿಂಗಾಯತ ವಿಧಾನದಿಂದ ಮಾಡಲಾಗುತ್ತದೆ. ರಾವಲ್ ದೇವಾಲಯದ ಸಿಂಹಾಸನದ ಮೇಲೆ ಕುಳಿತಿದ್ದಾರೆ, ಅವರು ಇಲ್ಲಿ ಮುಖ್ಯಸ್ಥರಾಗಿದ್ದಾರೆ. ರಾವಲ್ ಎಂದರೆ ಅರ್ಚಕ. ಅವರು ಕರ್ನಾಟಕಕ್ಕೆ ಸೇರಿದವರು. ರಾವಲ್ ನ ಶಿಷ್ಯರಿಂದ ಪೂಜೆ ನಡೆಯುತ್ತದೆ. ಉತ್ತರಾಖಂಡದ ನಾಲ್ಕು ಧಾಮಗಳಲ್ಲಿ ಕೇದಾರನಾಥ ಮೂರನೇ ಸ್ಥಾನದಲ್ಲಿದೆ. ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಈ ದೇವಾಲಯವನ್ನು ಆದಿಗುರು ಶಂಕರಾಚಾರ್ಯರು 8-9 ನೇ ಶತಮಾನದಲ್ಲಿ ನಿರ್ಮಿಸಿದರು. ದೇವಾಲಯವು ಸುಮಾರು 3,581 ಚದರ ಮೀಟರ್ ಎತ್ತರದಲ್ಲಿದೆ.

ಕೊರೋನಾದಿಂದಾಗಿ 2 ವರ್ಷಗಳ ಕಾಲ ನಿರ್ಬಂಧ ವಿಧಿಸಲಾಗಿತ್ತು, ಆದರೆ ಈ ಬಾರಿ ವಿನಾಯಿತಿ 

ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಮಾಧ್ಯಮ ಉಸ್ತುವಾರಿ ಡಾ.ಹರೀಶ್ ಗೌರ್ ಪ್ರಕಾರ, ಈ ಬಾರಿ ಭಕ್ತರಿಗೆ ಕೊರೋನಾ ಪರೀಕ್ಷೆ (ಕೋವಿಡ್ 19 ಪರೀಕ್ಷೆ) ಪಡೆಯುವುದು ಕಡ್ಡಾಯವಲ್ಲ. ಅವರು ತಮ್ಮ ಸ್ವಂತ ಇಚ್ಛೆಯಿಂದ ಇದನ್ನು ಮಾಡಬಹುದಿತ್ತು. ಹೌದು, ಪ್ರಯಾಣದ ಸಮಯದಲ್ಲಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುವುದು ಕಡ್ಡಾಯವಾಗಿದೆ. ಪ್ರತಿದಿನ 15,000 (ಹದಿನೈದು ಸಾವಿರ) ಭಕ್ತರು ಶ್ರೀ ಬದರಿನಾಥ ಧಾಮಕ್ಕೆ, 12,000 ಶ್ರೀ ಕೇದಾರನಾಥ ಧಾಮಕ್ಕೆ, 7,000 ಶ್ರೀ ಗಂಗೋತ್ರಿ ಧಾಮಕ್ಕೆ ಮತ್ತು 4,000 ಶ್ರೀ ಯಮುನೋತ್ರಿ ಧಾಮಕ್ಕೆ ಪ್ರತಿದಿನ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂದು ಗೌರ್ ಮಾಹಿತಿ ನೀಡಿದರು.

Follow Us:
Download App:
  • android
  • ios