Asianet Suvarna News Asianet Suvarna News

ಅಯೋಧ್ಯೇಲಿ ಭೂಮಿಗಾಗಿ ರಾಜ್ಯಗಳ ದೌಡು: ವಿದೇಶಗಳಿಂದಲೂ ಆಸಕ್ತಿ

ಅಯೋಧ್ಯೆಗೆ ತೆರಳುವ ತಮ್ಮ ರಾಜ್ಯಗಳ ಭಕ್ತರಿಗೆ ವಸತಿ ಸೌಕರ್ಯಕ್ಕಾಗಿ ಕಟ್ಟಡ ನಿರ್ಮಿಸಲು ವಿವಿಧ ರಾಜ್ಯ ಸರ್ಕಾರಗಳು, ವಿವಿಧ ದೇಶಗಳು ಮತ್ತು ನೂರಾರು ಮಠಗಳು ಮುಂದಾಗಿವೆ.

States scramble for having property in Ayodhya 1405 acres allotted to states more than 100 Maths applied for site property akb
Author
First Published Nov 10, 2023, 7:37 AM IST

ಅಯೋಧ್ಯೆ: ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಗೆ ಸಜ್ಜಾಗಿರುವ ಬೆನ್ನಲ್ಲೇ, ಅಯೋಧ್ಯೆಗೆ ತೆರಳುವ ತಮ್ಮ ರಾಜ್ಯಗಳ ಭಕ್ತರಿಗೆ ವಸತಿ ಸೌಕರ್ಯಕ್ಕಾಗಿ ಕಟ್ಟಡ ನಿರ್ಮಿಸಲು ವಿವಿಧ ರಾಜ್ಯ ಸರ್ಕಾರಗಳು, ವಿವಿಧ ದೇಶಗಳು ಮತ್ತು ನೂರಾರು ಮಠಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಸರ್ಕಾರ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆಸಕ್ತ ರಾಜ್ಯಗಳಿಂದ ನ.10ರಿಂದ ಅರ್ಜಿ ಸ್ವೀಕರಿಸಲು ನಿರ್ಧರಿಸಿದೆ.

ವಸತಿ ಗೃಹಗಳ ನಿರ್ಮಾಣಕ್ಕೆಂದೇ ಅಯೋಧ್ಯೆ ಜಿಲ್ಲಾಡಳಿತವು 1405 ಎಕರೆ ಮೀಸಲಿರಿಸಿದ್ದು, ಅಗತ್ಯ ಬಿದ್ದರೆ ಅದನ್ನು 1800 ಎಕರೆಗೆ ವಿಸ್ತರಿಸುವ ಯೋಜನೆಯನ್ನೂ ಹಾಕಿಕೊಂಡಿದೆ. ರಾಜಧಾನಿ ನವದೆಹಲಿ ಮತ್ತು ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಹೊಂದಿರುವಂತೆ ಅಯೋಧ್ಯೆಯಲ್ಲೂ ತಮ್ಮ ವಸತಿ ಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳು, ಮಠಗಳು ನಿರ್ಧರಿಸಿವೆ.

ಅಯೋಧ್ಯೆ ರಾಮಮಂದಿರದಲ್ಲಿ ಅಕ್ಷತೆ ಪೂಜೆ: ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ

ಈಗಾಗಲೇ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಸಿಕ್ಕಿಂ, ಗುಜರಾತ್‌ ಹಾಗೂ ಅಸ್ಸಾಂ ಸರ್ಕಾರಗಳು ರಾಜ್ಯ ಸರ್ಕಾರಕ್ಕೆ ಆಸಕ್ತಿ ತೋರಿದೆ. ಜೊತೆಗೆ ನೇಪಾಳ, ಶ್ರೀಲಂಕಾ ಹಾಗೂ ದಕ್ಷಿಣ ಕೊರಿಯಾ ದೇಶಗಳು ಸಹ ಅಯೋಧ್ಯೆಯಲ್ಲಿ ಭೂಮಿಗಾಗಿ ಮನವಿ ಮಾಡಿದೆ. ಇದರ ಜೊತೆಗೆ ಅಯೋಧ್ಯೆಯಲ್ಲಿ ಸ್ಥಳಾವಕಾಶ ಕೋರಿ 100ಕ್ಕೂ ಹೆಚ್ಚಿನ ಮಠಗಳು ಈಗಾಗಲೇ ಅರ್ಜಿ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 22ಕ್ಕೆ ರಾಮನ ವಿಗ್ರಹ ಹೊತ್ತು ಮೋದಿ 500 ಮೀಟರ್‌ ನಡಿಗೆ? ತಾತ್ಕಾಲಿಕ ಮಂದಿರದಿಂದ ವಿಗ್ರಹ ಒಯ್ಯುವ ಸಾಧ್ಯತೆ

 

Follow Us:
Download App:
  • android
  • ios