Asianet Suvarna News Asianet Suvarna News

ಭಾರತ ವಿಭಜಿಸುವ ಹೇಳಿಕೆ ಸಹಿಸಲ್ಲ: ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್‌ ಪಕ್ಷದಲ್ಲಿ ದೇಶಕ್ಕಾಗಿ ಹಲವರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಅಂತಹ ಪಕ್ಷದಲ್ಲಿ ದೇಶ ಒಡೆಯುವ ಆಲೋಚನೆ ಬರಲು ಸಾಧ್ಯವೇ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಭಾರತ ಒಂದಾಗಿರಬೇಕೆಂದು ಕಾಂಗ್ರೆಸ್‌ ಬಯಸುತ್ತದೆ. ದೇಶ ವಿಭಜಿಸುವ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ಡಿ.ಕೆ. ಸುರೇಶ್‌ ಅಂತಹ ಹೇಳಿಕೆಯನ್ನು ನೀಡಿದ್ದೇ ಆದಲ್ಲಿ, ಆ ಕುರಿತು ಹಕ್ಕುಬಾಧ್ಯತಾ ಸಮಿತಿಯಿಂದ ವಿಚಾರಣೆ ನಡೆಸಲಿ’ ಎಂದು ಸವಾಲು ಹಾಕಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Statement of Partition of India cannot be Tolerated Says AICC President Mallikarjun Kharge grg
Author
First Published Feb 3, 2024, 4:35 AM IST

ನವದೆಹಲಿ(ಫೆ.03): ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ ಬೇಕೆಂಬ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಭಾರತ ವಿಭಜಿಸುವ ಹೇಳಿಕೆ ಸಹಿಸಲ್ಲ’ ಎಂದು ಹೇಳಿದ್ದಾರೆ. ಆದರೆ ತಮ್ಮ ಹೇಳಿಕೆಯನ್ನು ತಿರುಚಿ ವರದಿ ಮಾಡಲಾಗಿದೆ ಎಂದು ಖುದ್ದು ಡಿಕೆಸು ಅವರೇ ಸ್ಪಷ್ಟಪಡಿಸಿದ್ದಾರೆ ಎಂದೂ ಖರ್ಗೆ ನುಡಿದಿದ್ದಾರೆ.

ಡಿಕೆಸು ಹೇಳಿಕೆ ಬಗ್ಗೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಖರ್ಗೆ, ‘ಕಾಂಗ್ರೆಸ್‌ ಪಕ್ಷದಲ್ಲಿ ದೇಶಕ್ಕಾಗಿ ಹಲವರು ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ. ಅಂತಹ ಪಕ್ಷದಲ್ಲಿ ದೇಶ ಒಡೆಯುವ ಆಲೋಚನೆ ಬರಲು ಸಾಧ್ಯವೇ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಭಾರತ ಒಂದಾಗಿರಬೇಕೆಂದು ಕಾಂಗ್ರೆಸ್‌ ಬಯಸುತ್ತದೆ. ದೇಶ ವಿಭಜಿಸುವ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ಡಿ.ಕೆ. ಸುರೇಶ್‌ ಅಂತಹ ಹೇಳಿಕೆಯನ್ನು ನೀಡಿದ್ದೇ ಆದಲ್ಲಿ, ಆ ಕುರಿತು ಹಕ್ಕುಬಾಧ್ಯತಾ ಸಮಿತಿಯಿಂದ ವಿಚಾರಣೆ ನಡೆಸಲಿ’ ಎಂದು ಸವಾಲು ಹಾಕಿದರು.

ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕು ಡಿಕೆ ಸುರೇಶ್‌ಗೆ ಇಲ್ಲ: ಲೋಕಸಭೆ ಸ್ಪೀಕರ್ ಗೆ ದೂರು

ಅಲ್ಲದೆ, ಡಿಕೆಸು ತಮ್ಮ ಹೇಳಿಕೆ ತಿರುಚಲಾಗಿದೆ ಎಂದಿದ್ದಾರೆ. ನೀಡದ ಹೇಳಿಕೆ ಬಗ್ಗೆ ಇಲ್ಲಿ ಚರ್ಚೆ ಬೇಡ. ಅಲ್ಲದೆ, ಲೋಕಸಭೆ ಸದಸ್ಯರು ಆಡಿದ ಮಾತಿನ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆ ಬೇಡ ಎಂದೂ ಖರ್ಗೆ ನುಡಿದರು.

Follow Us:
Download App:
  • android
  • ios