ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕು ಡಿಕೆ ಸುರೇಶ್‌ಗೆ ಇಲ್ಲ: ಲೋಕಸಭೆ ಸ್ಪೀಕರ್ ಗೆ ದೂರು

ಸಂಸದ ಡಿಕೆ ಸುರೇಶ್ ವಿರುದ್ಧ ಲೋಕಸಭೆ ಸ್ಪೀಕರ್ ಗೆ ದೂರು ನೀಡಲಾಗಿದೆ. ಲೋಕಸಭೆ ಸ್ಪೀಕರ್ ಗೆ ಎರಡು ಪುಟಗಳ‌ ಪತ್ರದ ಮೂಲಕ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ದೂರು ಸಲ್ಲಿಸಿದ್ದಾರೆ.

BJP MLC Chalavadi Narayana Swamy has written to the Lok Sabha Speaker  against Congress MP DK Suresh gow

ಬೆಂಗಳೂರು (ಫೆ.2): ಸಂಸದ ಡಿಕೆ ಸುರೇಶ್ ವಿರುದ್ಧ ಲೋಕಸಭೆ ಸ್ಪೀಕರ್ ಗೆ ದೂರು ನೀಡಲಾಗಿದೆ. ಲೋಕಸಭೆ ಸ್ಪೀಕರ್ ಗೆ ಎರಡು ಪುಟಗಳ‌ ಪತ್ರದ ಮೂಲಕ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ದೂರು ಸಲ್ಲಿಸಿದ್ದಾರೆ. ಸಂವಿಧಾನದ ಪ್ರಮಾಣ ವಚನ ಸ್ವೀಕಾರ ಮಾಡಿರುವ ಡಿ.ಕೆ ಸುರೇಶ್ ತಮ್ಮ ಹೇಳಿಕೆ ಮೂಲಕ ಉಲ್ಲಂಘಿಸಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡಿರುವ ಡಿಕೆ ಸುರೇಶ್  ಸಂಸದ ಸ್ಥಾನದಲ್ಲಿ ಮುಂದುವರೆಯುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು  ಸುರೇಶ್ ಅಮಾನತಿಗೆ ಆಗ್ರಹಿಸಿ ಲೋಕಸಭೆ ಸ್ಪೀಕರ್ ಗೆ   ಛಲವಾದಿ ನಾರಾಯಣ ಸ್ವಾಮಿ ಪತ್ರ ಬರೆದಿದ್ದಾರೆ.

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕು ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್  ಸಹೋದರ ಡಿಕೆ ಸುರೇಶ್ (DK Suresh) ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಡಿಕೆ ಸುರೇಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ದೂರು ದಾಖಲಾಗಿದೆ.

ನಾನೂ ಮುಖ್ಯಮಂತ್ರಿ ಆಗಬೇಕೆಂದಿದ್ದೇನೆ ಆದ್ರೆ ಅವಕಾಶ ಸಿಗಬೇಕಲ್ವೇ: ಕಾಂಗ್ರೆಸ್ ಶಾಸಕ

ಇನ್ನು ಸಂಸದ ಡಿಕೆ ಸುರೇಶ್ ಹೇಳಿಕೆ ವಿರುದ್ಧ ಶಾಸಕ ಎಸ್ ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ದೇಶದ ವಿಭಜನೆ ಜೊತೆಗೆ ಕಾಂಗ್ರೆಸ್ ಬೆಳೆದು ಬಂದಿದೆ. ಪಾಕಿಸ್ತಾನ ಆಗಿದ್ದೂ ಕಾಂಗ್ರೆಸ್ ಕಾಲದಲ್ಲೇ, ಬಾಂಗ್ಲಾ ಆಗಿದ್ದೂ ಕಾಂಗ್ರೆಸ್ ಕಾಲದಲ್ಲೇ ದೇಶ ವಿಭಜನೆ ಬಗ್ಗೆ ಕಾಂಗ್ರೆಸ್ ನ ನಿಲುವು ಡಿಕೆ ಸುರೇಶ್ ಬಾಯಲ್ಲಿ ಬಂದಿದೆ. ಇವತ್ತಲ್ಲ ನಾಳೆ ದೇಶ ವಿಭಜನೆಗೆ ಕಾಂಗ್ರೆಸ್ ಪ್ರಯತ್ನಿಸಲಿದೆ. ಜನ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಇವರ ಹೇಳಿಕೆ ಸಮರ್ಥಿಸಿಕೊಳ್ತರೋದು ಇನ್ನೂ ನಾಚಿಕೆ ಗೇಡು.

ನಿನ್ನೆ ಕೇಂದ್ರ ಸರ್ಕಾರ ಜನಪರ ಯೋಜನೆ ಮಂಡಿಸಿದೆ. ಪೂರ್ಣವಾಗಿ ಅರ್ಥ ಮಾಡಿಕೊಳ್ಳದೇ ಮಾನ್ಯ ಸಂಸದರಾದ ಡಿ.ಕೆ.ಸುರೇಶ್ ಅವರು ನಮಗೆ ಸರಿಯಾದ ರೀತಿಯಲ್ಲಿ ಬಜೆಟ್ ಅನುದಾನ ಕೊಟ್ಟಿಲ್ಲ. ಹೀಗಾಗಿ ಪ್ರತ್ಯೇಕ ರಾಷ್ಟ್ರವನ್ನೇ ಮಾಡಿ ಎಂಬ ಮಾತು ಹೇಳಿದ್ದಾರೆ. ಅದು ಏನು ಹೊಸತೇನಲ್ಲ. ದೇಶದ ವಿಭಜನೆಯಲ್ಲಿ ಕಾಂಗ್ರೆಸ್ ಅವರು ಬೆಳೆದುಕೊಂಡು ಬಂದಿದ್ದಾರೆ. ಪಾಕಿಸ್ತಾನ ಮಾಡಿದ್ದು ಅವರೇ ಬಾಂಗ್ಲಾದೇಶ ಮಾಡಿದ್ದು ಅವರೇ  1962ರಲ್ಲಿ ದಿವಂಗತ ನೆಹರು ಅವರು ಪ್ರಧಾನಿ ಆಗಿದ್ದಾಗ ಚೀನಾಗೆ ಸುಮಾರು ಕಿಲೋ ಮೀಟರ್ ಅಷ್ಟು ಭೂಮಿ ಬಿಟ್ಟುಕೊಟ್ಟದು ಅವರೇ. ಇವತ್ತು ರಾಷ್ಟ್ರ ಭಕ್ತಿಗಿಂತ ವೋಟಿನ ರಾಜಕಾರಣನೇ ಮುಖ್ಯ ಆಗಿದೆ. ಕಾಂಗ್ರೆಸ್ ಮುಖಂಡರ ಮನಸ್ಸಿನಲ್ಲಿ ಏನಿತ್ತು. ಅದು ಸಂಸದ ಡಿ.ಕೆ.ಸುರೇಶ್ ಅವರ ಬಾಯಲ್ಲಿ ಬಂದಿದೆ. ಅವರು ಮತ್ತೆ ದೇಶ ವಿಭಜನೆ ಮಾಡೋದ್ರಲ್ಲಿ ಎರಡು ಮಾತಿಲ್ಲ. ಇದರ ಪ್ರತಿಫಲ ಅವರು ಬೇಗನೇ ಎದುರಿಸುತ್ತಾರೆ. ಜೊತೆಗೆ ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾರಂತೆ. ಇದಕ್ಕಿಂತ ಘೋರವಾದ ಸಂದರ್ಭ ಮತ್ತೊಂದು ಇಲ್ಲ. ದೇಶದ ವಿಚಾರ ಬಂದಾಗ ಇವರು ಇದೇ ಮಾಡೋದು. ಸರ್ಜಿಕಲ್ ಸ್ಟೇಕ್ ಆದಾಗ ವಿರೋಧ ಮಾಡ್ತಾರೆ. ಜಮ್ಮ ಕಾಶ್ಮೀರ 370 ವಿಧಿ ತೆಗೆದಾಗ ವಿರೋಧ ಮಾಡ್ತಾರೆ. ಈ ತರಹ ಉದಾಹರಣೆ ಕೊಡಬಹದು ಎಂದು ವಿಶ್ವನಾಥ್ ಅಭಿಪ್ರಾಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಆಟೋ ಚಾಲಕನನ್ನು ಕತ್ತು ಸೀಳಿ ಭೀಕರ ಹತ್ಯೆ

ಮಾಜಿ ಸಚಿವರು ಶಿವರಾಂ ಅವರು ನಮ್ಮ ಸ್ನೇಹಿತರಾದ ಶಿವಲಿಂಗೇಗೌಡರ ಮೇಲೆ ಅವರದ್ದೇ ಪಕ್ಷದ ಶಾಸಕರು ಪರ್ಸೆಂಟೇಜ್ ತೆಗೆದುಕೊಂಡಿದ್ದಾರೆ. ಬಿಜೆಪಿ ಮೇಲೆ ಬಹಳ ವ್ಯವಸ್ಥಿತವಾಗಿ 40 ಪರ್ಸೆಂಟ್ ಅಪಪ್ರಚಾರ ಮಾಡಿದ್ರು, ನಾವು ಸೋಲಕ್ಕೆ ಅದು ಒಂದು ಕಾರಣ ಆಗಿತ್ತು. ಇವತ್ತು ಅವರ ಪಕ್ಷದವರೇ ಹೇಳ್ತಾ ಇದ್ದಾರೆ. ಇದನ್ಮ ಸಾರ್ವಜನಿಕವಾಗಿ ಚರ್ಚೆ ಮಾಡೊಕೆ ನಾವು ರೆಡಿ ಇದ್ದೇವೆ. ಬೆಂಗಳೂರಿಲ್ಲಿ  ಅಪಾರ್ಟ್‌ಮೆಂಟ್‌ ಮಾಡೋರನ್ನ   ಲೇ ಔಟ್ ಮಾಡೋರನ್ನ ಕೇಳಿದ್ರೆ ಗೊತ್ತಾಗುತ್ತೆ. ಅವರಲ್ಲೇ ಭಿನ್ನ ಮತ ಇದೆ.  ಎಂದು ವಿಶ್ವನಾಥ್ ಹೇಳಿದ್ದಾರೆ.

ಬಹಳ ಜನ ಹೇಳ್ತಾ ಇದ್ದಾರೆ ಸರ್ಕಾರ ಬಿದ್ದು ಹೋಗುತ್ತೆ ಅಂತಾ ಮಲ್ಲಿಕಾರ್ಜುನ ಖರ್ಗೆ ಒಂದು ಹೇಳಿಕೆ ಕೊಟ್ಟಿದ್ದಾರೆ. ನರೇಂದ್ರ ಮೋದಿ ಪ್ರಧಾನಿ ಆದ್ರೆ ನಾನು ಚುನಾವಣೆಗೆ ನಿಲೋದಿಲ್ಲ ಅಂತಾ ಖಂಡಿತ ನೀವು ನಿಲ್ಲೋ ಅವಕಾಶ ಜನ ಕೊಡೊದಿಲ್ಲ. ಲೋಕಸಭಾ ಚುಬಾವಣೆ ಫಲಿತಾಂಶ ದ ಮೇಲೆ ರಾಜ್ಯದ ಪರಿಸ್ಥಿತಿ ಹೇಗಿರುತ್ತೆ. ಬರಗಾಲ ಬಂದಿರೋ ರಾಜ್ಯದಲ್ಲಿ ಜನಗಳ ಪ್ರಾಣ ಹಿಂಡಿತ್ತಾ ಇದೆ. ರಾಜಣ್ಣ ಹೇಳ್ತಾರೆ ನಾವು ಹೈ ಕಮಾಂಡ್ ಗುಲಾಮರಲ್ಲ ಅಂತಾ. ಹುಕ್ಕೇರಿ ಇನ್ನೊಂದು ರೀತಿಯಲ್ಲಿ ಅಸಮಾಧಾನ ಹೊರಹಾಕ್ತಾರೆ. ಇನ್ನೂ ಪುಟ್ಬಾಲ್ ಶುರುವಾಗುತ್ತೆ. ಅಸೆಂಬ್ಲಿ ಒಳಗೆ ಅಥವಾ ಆದ ಮೇಲೆ ಶುರುವಾಗುತ್ತೆ. ಕಾಂಗ್ರೆಸ್ ಪಕ್ಷಕ್ಕೆ ಈ ಬೆಳವಣಿಗೆ ಮಾತ್ರ ಅಲ್ಲ ಎಂದು ಹೇಳಿದ್ದಾರೆ.

 

Latest Videos
Follow Us:
Download App:
  • android
  • ios