Asianet Suvarna News Asianet Suvarna News

ಮಥುರಾ ದೇವಸ್ಥಾನದಲ್ಲಿ ಲಡ್ಡು ಹೋಳಿ ಹಬ್ಬ ಆಚರಣೆ, ಕಾಲ್ತುಳಿತಕ್ಕೆ 6 ಮಂದಿಗೆ ಗಂಭೀರ ಗಾಯ!

ಹೋಳಿ ಹಬ್ಬಕ್ಕೂ ಮುನ್ನ ನಡೆಯುವ ಆಚರಣೆ ಪ್ರಯುಕ್ತ ಭಕ್ತರು ಮಥುರಾದ ಶ್ರೀಜೀ ದೇವಸ್ತಾನದಲ್ಲಿ ಸೇರಿದ್ದರು. ಕಿಕ್ಕಿರಿದು ಸೇರಿದ್ದ ಭಕ್ತರಿಂದ ನೂಕು ನುಗ್ಗಲು ಸಂಭವಿಸಿದೆ. ಕಾಲ್ತುಳಿತದಲ್ಲಿ 6 ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ. 
 

Stampede broke out at Mathura Shreeji Temple 6 devotees falling unconscious in Uttar Pradesh ckm
Author
First Published Mar 17, 2024, 8:07 PM IST

ಮಥುರಾ(ಮೇ.17) ಹೋಳಿ ಹಬ್ಬಕ್ಕೂ ಮುನ್ನ ಆಚರಿಸುವ ಲಡ್ಡು ಹೋಳಿ ಆಚರಣೆ ಉತ್ತರ ಪ್ರದೇಶದ ಮಥುರಾ ದೇವಸ್ಥಾನದಲ್ಲಿ ವಿಶೇಷವಾಗಿದೆ. ಲಡ್ಡು ಹೋಳಿ ಹಬ್ಬ ಆಚರಣೆ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಇಂದು ಭಕ್ತರು ಹೆಚ್ಚಿನ ಸಂಖ್ಯೆಲ್ಲಿ ಶ್ರೀಜಿ ಮಂದಿರಕ್ಕೆ ಆಗಮಿಸಿದ್ದರು. ಭಾರಿ ಪ್ರಮಾಣದಲ್ಲಿ ಭಕ್ತರು ಆಗಮಿಸಿದ ಕಾರಣ ನೂಕು ನುಗ್ಗಲು ಸಂಭವಿಸಿದೆ. ಇದರ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಮೆಟ್ಟಿಲು ಸೇರಿದಂತೆ ಇತರ ಭಾಗದಲ್ಲಿ ಭಕ್ತರು ನೆಲಕ್ಕುರುಳಿದ್ದಾರೆ. ಭಾರಿ ಪ್ರಮಾಣದ ಭಕ್ತರಿಂದ ಕಾಲ್ತುಳಿತಕ ಪ್ರಮಾಣವೂ ಹೆಚ್ಚಾಗಿದೆ. ಘಟನೆಯಿಂದ ಹಲವರು ಗಾಯಗೊಂಡಿದ್ದಾರೆ. ಈ ಪೈಕಿ 6 ಮಂದಿ ಗಂಭೀರವಾಗಿ ಗಾಯಗೊಂಡು ಅಸ್ವಸ್ಥಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ರೀಜಿ ಮಂದಿರದಲ್ಲಿ ಲಡ್ಡು ಹೋಳಿ ಆಚರಣೆ ಆಯೋಜಿಸಲಾಗಿತ್ತು. ವಿಶೇಷ ಪೂಜೆ, ಪ್ರಸಾದ ಹಾಗೂ ಲಡ್ಡು ಹೋಳಿ ಆಚರಣೆಗೆ ಬೇರೆ ಬೇರೆ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿದ್ದರು. ಇಂದು ಭಾನುವಾರವಾಗಿರುವ ಕಾರಣ ಭಕ್ತರ ಪ್ರಮಾಣದಲ್ಲೂ ಗಣನೀಯ ಏರಿಕೆಯಾಗಿತ್ತು. ಮಂದಿರ ಆಡಳಿತ ಮಂಡಳಿ ಹೋಳಿ ಹಬ್ಬ ಆಚರಣೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿದ ಭಕ್ತ ಸಮೂಹದಿಂದ ನೂಕು ನುಗ್ಗಲು ಸಂಭವಿಸಿದೆ.

ರೆಹಮಾನ್‌ ಸಂಗೀತ ಸಭೆಯಲ್ಲಿ ಭಾರೀ ಅವ್ಯವಸ್ಥೆ: 10 ಸಾವಿರ ಜನ ಸೇರುವ ಮೈದಾನಕ್ಕೆ 1 ಲಕ್ಷ ಟಿಕೆಟ್‌ ಸೇಲ್‌ ಮಾಡಿದ್ದೇ ಕಾರಣ

ದೇವಸ್ಥಾನದ ಮೆಟ್ಟಿಲುಗಳ ಮೇಲೆ ಉರಳಿಬಿದ್ದ ಭಕ್ತರನ್ನು ರಕ್ಷಿಸಲು ಹಲವರು ಧಾವಿಸಿದ್ದಾರೆ. ಸ್ಥಳದ ಕೊರತೆ, ಕಿಕ್ಕಿರಿದು ತುಂಬಿದ ಭಕ್ತ ಗಣ, ಆತಂಕದ ಸನ್ನಿವೇಶಳಿಂದ ತಕ್ಷಣವೇ ರಕ್ಷಣೆ ಸಾಧ್ಯವಾಗಿಲ್ಲ. ಆದರೆ ಸತತ ಪರಿಶ್ರಮದ ಮೂಲಕ ಕಾಲ್ತುಳಿತದಲ್ಲಿ ಸಿಲುಕಿದವರನ್ನು ರಕ್ಷಿಸಲಾಗಿದೆ. ಇನ್ನು ಹಬ್ಬದ ಕಾರಣ ವೈದ್ಯರ ತಂಡ, ಆ್ಯಂಬುಲೆನ್, ಅಗ್ನಿಶಾಮಕ ದಳದ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಆಸ್ವಸ್ಥಗೊಂಡ 6 ಮಂದಿಗೆ ಪ್ರಥಮ ಚಿಕಿತ್ಸೆ ನೀಡಿ, ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ.

ಹಲವು ಗಾಯಾಳುಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಕಾಲ್ತುಳಿತ ಸಂಭವಿಸುತ್ತಿದ್ದಂತೆ ಪೊಲೀಸರು ದೇವಸ್ಥಾನದ ಆವರಣ ಪ್ರವೇಶಿಸಿದ್ದಾರೆ. ಭಕ್ತರನ್ನು ನಿಯಂತ್ರಿಸಿ ಹೊರಗೆ ಕಳುಹಿಸಿದ್ದಾರೆ. ಬಳಿಕ ಗಾಯಗೊಂಡವರನ್ನು ರಕ್ಷಿಸಲಾಗಿದೆ. 

ಉಚಿತ ಸೀರೆ, ಧೋತಿ ವಿತರಣೆ ವೇಳೆ ಕಾಲ್ತುಳಿತ, ನಾಲ್ವರು ಮಹಿಳೆಯರ ಸಾವು, ಹಲವರಿಗೆ ಗಾಯ!

ನಿರೀಕ್ಷೆಗೂ ಮೀರಿ ಭಕ್ತರ ಆಗಮನದಿಂದ ಈ ದುರಂತ ಸಂಭವಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೇವಸ್ಥಾನದ ಆವರಣದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಲಿದ್ದಾರೆ. 
 

Follow Us:
Download App:
  • android
  • ios