ಪದೇ ಪದೇ ಸುಳ್ಳು ಹೇಳಿ Sick Leave ಹಾಕೋ ಉದ್ಯೋಗಿಗಳೇ ಇದೋ ನಿಮ್ಮ ಸುದ್ದಿ!
ಖಾಸಗಿ ಕಂಪನಿಗಳಲ್ಲಿ ಪದೇ ಪದೇ ಸಿಕ್ ಲೀವ್ ಹಾಕುವ ಉದ್ಯೋಗಿಗಳಿಗೆ ಶಾಕ್ ಕೊಡಲು ಮಾಲೀಕರು ಮುಂದಾಗಿದ್ದಾರೆ ಏನಿದು ಶಾಕ್ ಇಲ್ಲಿದೆ ನೋಡಿ ಮಾಹಿತಿ
Private Jobs: ಸಾಮಾನ್ಯವಾಗಿ ಖಾಸಗಿ ಕಂಪನಿಗಳಲ್ಲಿ ಸಿಕ್ ಲೀವ್ ಹಾಕೋದು ಸಹಜ. ರಜೆಗಳು ಸಿಗದಿದ್ದಾಗ ಎಮೆರ್ಜೆನ್ಸಿ ಅಥವಾ ಅನಾರೋಗ್ಯದ ಕಾರಣ ನೀಡುತ್ತಿರುತ್ತಾರೆ. ಖಾಸಗಿ ಕಂಪನಿಗಳಲ್ಲಿ ಕೆಲಸದ ಒತ್ತಡ ಅಧಿಕವಾಗಿರುತ್ತದೆ. ಹಾಗಾಗಿ ರಜೆಗಳು ಸಿಗೋದು ಅಷ್ಟು ಸುಲಭದ ಮಾತಲ್ಲ. ಕೇಳಿದ ಸಮಯಕ್ಕೆ ರಜೆಗಳಿಗೆ ಅನುಮತಿ ದೊರೆಯದಿದ್ದಾಗ ಉದ್ಯೋಗಿಗಳು ಬಳಸುವ ಕೊನೆಯ ಅಸ್ತ್ರವೇ ಸಿಕ್ ಲೀವ್. ನೀವು ಸಹ ಈ ರೀತಿಯ ರಜೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಇನ್ಮುಂದೆ ಎಚ್ಚರವಾಗಿರಬೇಕಾಗುತ್ತದೆ. ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳ ಮೇಲೆ ಹದ್ದಿನ ಕಣ್ಣಿಡುತ್ತಿವೆ.
ಜರ್ಮನಿಯ ಕೆಲ ಕಂಪನಿಗಳು ಅನಾರೋಗ್ಯದ ಕಾರಣ ನೀಡಿ ರಜೆ ಕೇಳುವ ಉದ್ಯೋಗಿಗಳ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ. ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಜರ್ಮನಿಯ ಕೆಲ ಕಂಪನಿಗಳು ಪದೇ ಪದೇ ಅನಾರೋಗ್ಯದ ಕಾರಣದಡಿಯಲ್ಲಿ ರಜೆ ತೆಗೆದುಕೊಳ್ಳವ ಉದ್ಯೋಗಿಗಳ ಮೇಲೆ ಕಣ್ಣಿಡುತ್ತಿವೆಯಂತೆ. ಕೆಲ ಕಂಪನಿಗಳ ಉದ್ಯೋಗಿಗಳು ಅನಾರೋಗ್ಯದ ಕಾರಣವನ್ನೀಡಿ 40 ರಿಂದ 100 ದಿನಗಳವರೆಗೆ ರಜೆಗಳನ್ನು ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ನಷ್ಟವನ್ನ ಅನುಭವಿಸುತ್ತಿವೆ ಎಂದು ವರದಿಯಾಗಿದೆ.
ಆರ್ಗನೈಸೇಶನ್ ಫಾರ್ ಎಕನಾಮಿಕ್ ಕೋ-ಆಪರೇಷನ್ ಅಂಡ್ ಡೆವಲಪ್‌ಮೆಂಟ್ (ಒಇಸಿಡಿ) ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಅನಾರೋಗ್ಯದ ಕಾರಣ ನೀಡಿ 2023ರಲ್ಲಿ ಜರ್ಮನ್ನರು ತಮ್ಮ ಕೆಲಸದ ಸಮಯದ 6.8 ಪ್ರತಿಶತವನ್ನು ಕಳೆದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಇತರ ಯುರೋಪಿಯನ್ ಯೂನಿಯನ್ ದೇಶಗಳಾದ ಫ್ರಾನ್ಸ್, ಇಟಲಿ ಮತ್ತು ಸ್ಪೇನ್‌ನಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ಉದ್ಯೋಗಿಗಳ ಕೆಲಸದ ಪ್ರಮಾಣ ವಾರ್ಷಿಕವಾಗಿ ಕುಸಿಯುತ್ತಿದೆ ಎಂದು ವರದಿಯಾಗಿದೆ. ಉದ್ಯೋಗಿಗಳ ಈ ನಡೆಯಿಂದಾಗಿ ಜರ್ಮನಿಯ ಕೆಲ ಖಾಸಗಿ ಕಂಪನಿಗಳು, ಬೇಹುಗಾರಿಕೆಗೆ ಮುಂದಾಗಿವೆ. ಇದಕ್ಕಾಗಿ ಪತ್ತೆದಾರಿ ಏಜೆನ್ಸಿಗಳ ಸಹಾಯವನ್ನು ಪಡೆದುಕೊಳ್ಳುತ್ತಿವೆ. ಈ ಏಜೆನ್ಸಿಗಳಿಗೆ ಹಣವನ್ನು ಪಾವತಿಸುವ ಮೂಲಕ, ಉದ್ಯೋಗಿ ಸುಳ್ಳು ಹೇಳುತ್ತಿದ್ದಾರೋ ಅಥವಾ ಸತ್ಯವನ್ನು ಹೇಳುತ್ತಿದ್ದಾರೋ ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಭಾರತೀಯ ಯುವಕರಿಗೆ ಭಾರೀ ಬೇಡಿಕೆ; ಇಲ್ಲಿದೆ ಪಾಕ್ ಹುಡುಗಿಯರ ಅಧಿಕೃತ ಆಹ್ವಾನ!
ಅನಾರೋಗ್ಯದಿಂದ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುವ ಅನುಮಾನಸ್ಪದ ಉದ್ಯೋಗಿಗಳ ಮೇಲೆ ನಾವು ನಿಗಾ ಇರಿಸುತ್ತೇವೆ. ಅನಾರೋಗ್ಯದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂಬ ಅನುಮಾನ ಮೂಡಿದ ಉದ್ಯೋಗಿಯ ಮಾಹಿತಿಯನ್ನು ಕಂಪನಿಗಳು ನಮಗೆ ಕಳುಹಿಸುತ್ತೇವೆ. ಇದಕ್ಕಾಗಿ ದೊಡ್ಡ ಮೊತ್ತದ ಶುಲ್ಕವನ್ನು ಪಾವತಿಸುತ್ತವೆ. ಭಾರೀ ಶುಲ್ಕ ಪಾವತಿಸಿದ ಬಳಿಕವೇ ನಮ್ಮ ಪತ್ತೆದಾರಿಕೆ ಆರಂಭವಾಗುತ್ತದೆ ಎಂದು ಖಾಸಗಿ ತನಿಖಾಧಿಕಾರಿ ಮಾರ್ಕಸ್ ಲೆಂಟ್ಜ್ ಹೇಳುತ್ತಾರೆ. ಆದ್ರೆ ಎಷ್ಟು ಶುಲ್ಕ ಪಾವತಿ ಮಾಡುತ್ತೇವೆ ಎಂಬುದನ್ನು ಖಾಸಗಿ ತನಿಖಾಧಿಕಾರಿ ಮಾರ್ಕಸ್ ಲೆಂಟ್ಜ್ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಕೆಲಸದ ಸಮಯ ಅತೀ ಕಡಿಮೆ ಇರುವ ದೇಶ ಯಾವುದು?