ನವದೆಹಲಿ(ಮಾ.15); ಭಾರತದಲ್ಲಿ ಕೊರೋನಾ ವೈರಸ್ ಸಂಖ್ಯೆ ಆತಂಕ ತರುತ್ತಿದೆ. ದಿನದಿಂದ ದಿನಕ್ಕೆ  ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು(ಮಾ.15) ಭಾರತದಲ್ಲಿ 26,291 ಪ್ರಕರಣಗಳು ದಾಖಲಾಗಿದೆ. ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಇದೇ ಮಾರ್ಚ್ 17ಕ್ಕೆ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದಿದ್ದಾರೆ.

ಪರಿಸ್ಥಿತಿಗೆ ಹೀಗೆ ಮುಂದುವರಿದರೆ ಲಾಕ್‌ಡೌನ್; ಆರೋಗ್ಯ ಸಚಿವರ ಖಡಕ್ ವಾರ್ನಿಂಗ್!

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮಾರ್ಚ್ 17ರ ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಇದೀಗ ಮೋದಿ ಸಭೆ ಕರೆದ ಬೆನ್ನಲ್ಲೇ, ಲಾಕ್‌ಡೌನ್ ಆತಂಕ ಎದುರಾಗಿದೆ. ಆದರೆ ಈಗಾಗಲೇ ಮೋದಿ ಮತ್ತೆ ಲಾಕ್‌ಡೌನ್ ಮಾತಿಲ್ಲ ಎಂದಿದ್ದರು.

ಕೊರೋನಾ ಅಬ್ಬರ: ನಾಗ್ಪುರ ಒಂದು ವಾರ ಲಾಕ್‌!.

ಮೋದಿ ಜನವರಿ ತಿಂಗಳಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದರು. ಕೊರೋನಾ ಲಸಿಕೆ ಕುರಿತು ಈ ಸಭೆ ನಡೆಸಲಾಗಿತ್ತು.  ಇದೀಗ ಮೋದಿ, ಎಲ್ಲಾ ಮುಖ್ಯಮಂತ್ರಿಗಳಿಂದ ಕೊರೋನಾ ನಿಯಂತ್ರಿಸಲು ಕ್ರಮಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.

ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಳಿಗೆ ಮಹತ್ವದ ಸಲಹೆ ನೀಡುವ ಸಾಧ್ಯತೆ ಇದೆ. ಮೋದಿ ಸಭೆ ಇದೀಗ ಕುತೂಹಲಕ್ಕೂ ಕಾರಣವಾಗಿದೆ.