ನಾಗ್ಪುರ(ಮಾ.15): ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಅಬ್ಬರ ಆರಂಭವಾಗಿದೆ. ಹೀಗಿರುವಾಗ ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಒಂದಾದ ಬಳಿಕ ಮತ್ತೊಂದರಂತೆ ಅನೇಕ ನಗರ ಹಾಗೂ ಜಿಲ್ಲೆಗಗಳಲ್ಲಿ ಲಾಕ್‌ಡೌನ್ ಘೋಷಿಸಲಾರಂಭಿಸಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಲಾಕ್‌ಡೌನ್ ಘೋಷಿಇಸಲಾಗಿದ್ದು, ಸದ್ಯ ಮಹಾರಾ‍ಷ್ಟ್ರದ ನಾಗ್ಪುರವೂ ಈ ಪಟ್ಟಿಗೆ ಸೇರ್ಪಡೆಗೊಂಡಿದೆ. 

ಇಂದಿನಿಂದ ಒಂದು ವಾರ ಮಹಾರಾಷ್ಟ್ರದ ನಾಗಪುರದ ಲಾಕ್‌ಡೌನ್ ಆಗಲಿದೆ. ಇಲ್ಲಿ ಪ್ರತಿದಿನ 1700 ರಿಂದ 1800 ಕೇಸ್ ಗಳು ಪತ್ತೆಯಾಗುತ್ತಿದ್ದು, ಮಾರ್ಚ್ ತಿಂಗಳಲ್ಲಿ ಕೇವಲ 14 ದಿನಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 20 ಸಾವಿರ ಗಡಿ ದಾಟಿದೆ. 

ಇನ್ನು ನಿನ್ನೆ ಇಲ್ಲಿ 2 ಸಾವಿರ ಕೊರೊನಾ ಕೇಸ್ ಪತ್ತೆಯಾಗಿದ್ದು, ಬರೋಬ್ಬರಿ ಆರನೇ ಬಾರಿ ಇಷ್ಟೊಂದು ಪ್ರಮಾಣದ ಕೇಸ್‌ಗಳು ಪತ್ತೆಯಾಗಿವೆ.  ಈ ಎಲ್ಲಾ ಕಾರಣದಿಂದ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಮುಂದಿನ ಏಳು ದಿನಗಳವರೆಗೆ ಜಿಲ್ಲೆಯಾದ್ಯಂತ ಅಗತ್ಯ ಸೇವೆಗಳು ಹೊರತುಪಡಿಸಿ ಬೇರೆಯಾವ ಸೇವೆಗಳು ಲಭ್ಯ ಇರುವುದಿಲ್ಲ.