ರೊಯರೊಯನೇ ಗ್ರಾನೈಟ್‌ ಗೋಡೆ ಏರುವ ಬಾಲಕಿಯರು ಇವರು ಬಿಹಾರದ ಸ್ಪೈಡರ್‌ ಗರ್ಲ್ಸ್‌ ಬಿಹಾರದ ಅಕ್ಷಿತಾ ಮತ್ತು ಕೃಪಿತಾ  ಎಂಬುವರೇ ಈ ಸ್ಪೈಡರ್ ಗಲ್ಸ್‌

ಪಾಟ್ನಾ(ಮಾ.14)l: ಬಿಹಾರದ ಇಬ್ಬರು ಹುಡುಗಿಯರು ಯಾವ ವಸ್ತುವಿನ ಸಹಾಯವನ್ನು ಪಡೆಯದೇ 12 ಅಡಿ ಗೋಡೆಯನ್ನು ಏರಿ ಸಾಹಸ ಮೆರೆದಿದ್ದಾರೆ. ನಯವಾದ ಅಮೃತಶಿಲೆಯ ಗ್ರಾನೈಟ್ ಗೋಡೆಯನ್ನು ಯಾವುದೇ ಬೆಂಬಲವಿಲ್ಲದೆ ಸುಲಭವಾಗಿ ಕಾಲುಗಳ ಮೇಲೆ ಏರಬಹುದು ಎಂಬುದನ್ನು ಬಿಹಾರದ ಅಕ್ಷಿತಾ ಮತ್ತು ಕೃಪಿತಾ ಎಂಬ ಮಕ್ಕಳು ತೋರಿಸಿಕೊಟ್ಟಿದ್ದಾರೆ. ಹೌದು ಎತ್ತರದ ಗೋಡೆಗಳನ್ನು ಯಾವುದೇ ಉಪಕರಣಗಳ ಸಹಾಯವಿಲ್ಲದೇ ಏರುವ ಹುಚ್ಚು ಕೌಶಲ್ಯಕ್ಕಾಗಿ ಬಿಹಾರದ ಇಬ್ಬರು ಹುಡುಗಿಯರನ್ನು ಈಗ ಸೂಪರ್‌ ಹೀರೋ ಸ್ಪೈಡರ್‌ಮ್ಯಾನ್‌ಗೆ ಹೋಲಿಸಲಾಗುತ್ತಿದೆ. ಅಕ್ಷಿತಾ ಮತ್ತು ಕೃಪಿತಾ ಎಂಬ ಈ ಮಕ್ಕಳನ್ನು ಈಗ ಬಿಹಾರದ 'ಸ್ಪೈಡರ್ ಗರ್ಲ್ಸ್' ಎಂದು ಕರೆಯಲಾಗುತ್ತಿದೆ. 

ಪಾಟ್ನಾದ (Patna) 11 ವರ್ಷದ ಅಕ್ಷಿತಾ ಗುಪ್ತಾ, 12 ಅಡಿ ಎತ್ತರದ ಗೋಡೆಗಳನ್ನು ಯಾವುದೇ ಬಾಹ್ಯ ಬೆಂಬಲವನ್ನು ತೆಗೆದುಕೊಳ್ಳದೆ, ಅದೂ ಯಾವುದೇ ತರಬೇತಿಯಿಲ್ಲದೆ ಏರುತ್ತಾಳೆ. ಆಕೆಯ 9 ವರ್ಷದ ಸಹೋದರಿ ಅಕ್ಷಿತಾ ಸಹ ಅವಳೊಂದಿಗೆ ಗೋಡೆಗಳನ್ನು ಹತ್ತುವುದನ್ನು ಅಭ್ಯಾಸ ಮಾಡುತ್ತಿದ್ದಾಳೆ. ನಯವಾದ ಅಮೃತಶಿಲೆಯ ಗ್ರಾನೈಟ್ ಗೋಡೆಯನ್ನು ಯಾವುದೇ ಬೆಂಬಲವಿಲ್ಲದೆ ಸುಲಭವಾಗಿ ಕಾಲುಗಳ ಮೇಲೆ ಏರಬಹುದು ಎಂದು ಅಕ್ಷಿತಾ (Akshita) ಮತ್ತು ಕೃಪಿತಾ (Kripita) ಹೇಳುತ್ತಾರೆ.

ಸ್ಪೈಡರ್‌ಮ್ಯಾನ್‌ ವೇಷ ಧರಿಸಿ ಬ್ಯಾಂಕಿಗೆ ಬಂದ ಉದ್ಯೊಗಿ!

ವರ್ಚುವಲ್ ಪ್ರದರ್ಶನದಲ್ಲಿ, ಇಬ್ಬರೂ ಸಹೋದರಿಯರು ಯಾವುದೇ ಬೆಂಬಲವಿಲ್ಲದೆ 12 ಅಡಿಗಳವರೆಗೆ ಕಂಬವನ್ನು ಏರಿದರು. ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅಕ್ಷಿತಾ, ನನ್ನ ಪೋಷಕರು ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದರು. ಈ ವೇಳೆ ನಾನು, ಗೋಡೆಗಳನ್ನು ಏರುಲು ಬಯಸುತ್ತಿದ್ದೆ. ಹೀಗೆ ಅಭ್ಯಾಸ ಮಾಡುತ್ತಾ ನಾನು ಗೋಡೆಗಳ ಮೇಲೆ ವೇಗವಾಗಿ ನಡೆಯಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. 

ಚೀನಾದಲ್ಲಿ ಕಂಡುಬಂದ ರಿಯಲ್ ‘ಸ್ಪೈಡರ್ ಮ್ಯಾನ್’, ವಿಡಿಯೋ ವೈರಲ್!

ನಾನು ಹೀಗೆ ಗೋಡೆ ಏರುವುದನ್ನು ನನ್ನ ತಾಯಿ ಮತ್ತು ತಂದೆ ನೋಡಿದಾಗ, ಅವರು ಆಶ್ಚರ್ಯಚಕಿತರಾದರು. ಮೊದಲಿಗೆ, ಇದು ತುಂಬಾ ಅಪಾಯಕಾರಿ ಎಂದು ಈ ಚಟುವಟಿಕೆಯನ್ನು ಮಾಡುವುದಕ್ಕೆ ನನ್ನ ತಾಯಿ ನನಗೆ ಬಿಡುತ್ತಿರಲಿಲ್ಲ. ಆದರೆ ನಾನು ಬಿಡದೆ ಮುಂದುವರಿಸಿದೆ. ಇಂದು ನಾನು ಸ್ಪೈಡರ್‌ಮ್ಯಾನ್‌ನಂತೆ ಗೋಡೆಗಳನ್ನು ಏರಲು ಸಂತೋಷಪಡುತ್ತೇನೆ ಮತ್ತು ಶೀಘ್ರದಲ್ಲೇ ಹಿಮಾಲಯದ ಶಿಖರಗಳನ್ನು ಏರಲು ಆಶಿಸುತ್ತೇನೆ, ಎಂದು ಅಕ್ಷಿತಾ ಹೇಳಿದ್ದಾಳೆ. 

YouTube video player

ತನ್ನ ಅಕ್ಕ ಅಕ್ಷಿತಾ ಅವರನ್ನು ನೋಡಿಯೇ ಪಿಲ್ಲರ್ ಹತ್ತಲು ಕಲಿತಿದ್ದೇನೆ ಎಂದು ಅಕ್ಷಿತಾ ಸಹೋದರಿ ಕೃಪಿತಾ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದರು. ಈ ಸಾಹಸ ಮಾಡಿದ ಇಬ್ಬರು ಹೆಣ್ಣು ಮಕ್ಕಳ ತಂದೆ ಅಜಿತ್ ಕುಮಾರ್ ಗುಪ್ತಾ(Ajit Kumar Gupta), ಮಾತನಾಡಿ 'ನನ್ನ ಹೆಣ್ಣುಮಕ್ಕಳ ಪ್ರತಿಭೆಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಮತ್ತು ಅವರು ಒಂದು ದಿನ ಹಿಮಾಲಯದ ಶಿಖರಗಳನ್ನು ಏರುತ್ತಾರೆ ಮತ್ತು ಅವರು ತಮ್ಮನ್ನು ಕೇವಲ 12 ಅಡಿಗಳಿಗೆ ಸೀಮಿತಗೊಳಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು.

ಬಾಲಕಿಯರ ತಾಯಿ ಸಂಗೀತಾ ಗುಪ್ತಾ ಕೂಡ ತಮ್ಮ ಮಕ್ಕಳ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. “ಗ್ರಾನೈಟ್ ಗೋಡೆಯನ್ನು ಹತ್ತುವಾಗ ಅವರು ಬೀಳಬಹುದು ಎಂದು ನಾನು ಕೆಲವೊಮ್ಮೆ ಭಯಪಡುತ್ತಿದ್ದೆ. ಆದರೆ ಇಂದು ನಾನು ನನ್ನ ಹೆಣ್ಣುಮಕ್ಕಳ ಬಗ್ಗೆ ಹೆಮ್ಮೆಪಡುತ್ತೇನೆ. ಅವರು ಶೀಘ್ರದಲ್ಲೇ ಹಿಮಾಲಯದ ಶಿಖರಗಳನ್ನು ಏರುತ್ತಾರೆ ಮತ್ತು ಹೊಸ ವಿಶ್ವ ದಾಖಲೆಗಳನ್ನು ನಿರ್ಮಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ತಾಯಿ ಹೇಳಿದ್ದಾರೆ.