ಬೀಜಿಂಗ್[ಜು. 19] ಚೀನಾದಿಂದ ಬಂದಿರುವ ಈ ಸೋಶಿಯಲ್ ಮೀಡಿಯಾ ಸುದ್ದಿ ನಿಜಕ್ಕೂ ಕುತೂಹಲಕಾರಿಯಾಗಿದೆ. ಮಾನವನ ಮುಖವನ್ನೇ ಹೋಲುವ ಜೇಡ ಕಂಡುಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್  ವೈರಲ್ ಆಗಿದೆ. ಜೇಡದ ಬೆನ್ನ ಮೇಲೆ ಮಾನವನ ಮುಖವಿದೆ.

ಯಜ್ಜಾ ಏಳ್ಬ್ಯಾಡ, ರೈಲಿನಡಿ ಸಿಕ್ಕ ತಾತನ ಸ್ಥಿತಿ ಕೇಳ್ಬೇಡ: ವಿಡಿಯೋ ವೈರಲ್!

ಮಧ್ಯ ಚೀನಾದ ಹುನಾನ್ ಪ್ರದೇಶದಲ್ಲಿ ಈ ಜೇಡ ಪತ್ತೆಯಾಗಿದೆ. ಬೆನ್ನ ಮೇಲೆ ಕಣ್ಣುಗಳ ರೀತಿಯ ರಚನೆಯೂ ಕಂಡುಬಂದಿದೆ. ಚೀನಾದ ಮಾಧ್ಯಮವೊಂದು  ವಿಡಿಯೋ ಶೇರ್ ಮಾಡಿದ್ದು ‘ಸ್ಪೈಡರ್ ಮ್ಯಾನ್ ಕೊನೆಗೂ ಸಿಕ್ಕನೆ’ ಎಂಬ ಶೀರ್ಷಿಕೆ ನೀಡಿದ್ದು ವೈರಲ್ ಆಗುತ್ತಿದೆ.