ಬ್ರೆಜಿಲ್ (ಜ. 30): ಕೆಲಸದ ಕೊನೆಯ ದಿನ ಸದಾ ನೆನಪಿನಲ್ಲಿ ಇರಬೇಕು ಎಂದು ಬಯಸಿದ ಬ್ರೆಜಿಲ್‌ನ ಬ್ಯಾಂಕರ್‌ವೊಬ್ಬ ಸ್ಪೈಡರ್‌ ಮ್ಯಾನ್‌ ರೀತಿ ಉಡುಪು ಧರಿಸಿ ಬ್ಯಾಂಕಿಗೆ ಆಗಮಿಸಿದ್ದಾನೆ. ಸಹೋದ್ಯೋಗಿಗಳ ಜೊತೆ ಕುಳಿತು ಕರೆಗಳನ್ನು ಸ್ವೀಕರಿಸಿದ ಆತ ಬೇಂಚ್‌ ಮೇಲೆ ಮಲಗಿ ಸ್ಪೈಡರ್‌ ಮ್ಯಾನ್‌ ರೀತಿ ಪೋಸ್‌ ನೀಡಿದ್ದಾನೆ.

ಈ ಉದ್ಯೋಗಿಯ ಹೆಸರು ಮತ್ತು ವಿಳಾಸ ಬಹಿರಂಗವಾಗಿಲ್ಲ. ಆತನ ಸ್ಪೈಡರ್‌ ಮ್ಯಾನ್‌ ಅವತಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ. ಯುಟ್ಯೂಬ್‌ನಲ್ಲಿ ವಿಡಿಯೋವನ್ನು 1 ಲಕ್ಷ ಜನರು ವೀಕ್ಷಿಸಿದ್ದಾರೆ.