ಪ್ರಧಾನಿ ನಿವಾಸಕ್ಕಾಗಿ 13000 ಕೋಟಿ ಖರ್ಚು ಮಾಡೋ ಬದಲು ಜನರ ಜೀವ ಉಳಿಸಿ | ಪ್ರಿಯಾಂಕ ಗಾಂಧಿ ಹೇಳಿಕೆ

ದೆಹಲಿ(ಮೇ.04): ಕೇಂದ್ರದ ಸಂಪನ್ಮೂಲವನ್ನೆಲ್ಲಾ ಪ್ರಧಾನಿಗೆ ಹೊಸ ಮನೆ ಕಟ್ಟಲು ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಹೇಳಿದ್ದಾರೆ. ಬೆಡ್, ಆಕ್ಸಿಜನ್, ವ್ಯಾಕ್ಸೀನ್, ಕೊರೋನಾ ಎರಡನೇ ಅಲೆಯ ವಿರುದ್ಧ ದೇಶ ಹೋರಾಡುತ್ತಿರುವಾಗ ತನ್ನೆಲ್ಲ ಸಂಪನ್ಮೂಲವನ್ನು ಕೊರೋನಾ ಪರಿಹಾರಕ್ಕೆ ಬಳಸದಿರುವುದಕ್ಕೆ ಪ್ರಿಯಾಂಕ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ದೇಶದ ಜನರು ಆಕ್ಸಿಜನ್, ವ್ಯಾಕ್ಸೀನ್, ಆಸ್ಪತ್ರೆ ಬೆಡ್‌, ಔಷಧ ಇಲ್ಲದೆ ಕಷ್ಟಪಡುತ್ತಿರುವಾಗ ಕೇಂದ್ರ ಸರ್ಕಾರ ಪ್ರಧಾನಿಗೆ 13 ಸಾವಿರ ಕೋಟಿಯ ಹೊಸ ಮನೆ ಕಟ್ಟೋ ಬದಲು ತನ್ನೆಲ್ಲ ಹಣವನ್ನು ಜನರ ಜೀವ ಉಳಿಸಲು ಬಳಸಿದರೆ ಚೆನ್ನಾಗಿತ್ತು ಎಂದು ಪ್ರಿಯಾಂಕ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇಬ್ಬರು ಪೋಲಿಂಗ್ ಏಜೆಂಟ್‌ ಮೇಲೆ ಗ್ಯಾಂಗ್ ರೇಪ್: ಪ. ಬಂಗಾಳ ಬಿಜೆಪಿ ಆರೋಪ

ಕೇಂದ್ರ ವಿಸ್ಟಾ ಪುನರುಜ್ಜೀವನ ಯೋಜನೆಯ ಭಾಗವಾಗಿರುವ ಪ್ರಧಾನ ಮಂತ್ರಿಯ ಹೊಸ ನಿವಾಸವನ್ನು ಪ್ರಿಯಾಂಕ ಉಲ್ಲೇಖಿಸಿ ಟೀಕಿಸಿದ್ದಾರೆ. ಡಿಸೆಂಬರ್ 2022 ರ ವೇಳೆಗೆ ಇದು ಸಿದ್ಧವಾಗಲಿದೆ. ಇದರ ಒಟ್ಟು ಅಂದಾಜು ಯೋಜನಾ ವೆಚ್ಚ 13,450 ಕೋಟಿ ರೂಪಾಯಿ.

ಈ ನಿರ್ಣಾಯಕ ಸಮಯದಲ್ಲಿ ಕೊರೋನಾ ಎದುರಿಸಲು ಕೇಂದ್ರದ ಅಸಮರ್ಪಕತೆಗಳ ಬಗ್ಗೆ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಟೀಕಿಸುತ್ತಲೇ ಇದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೋವಿಡ್ -19 ಹರಡುವುದನ್ನು ತಡೆಯುವ ಏಕೈಕ ಮಾರ್ಗವೆಂದರೆ ದುರ್ಬಲ ವರ್ಗದವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಎನ್‌ವೈಎವೈ ರಕ್ಷಣೆಯೊಂದಿಗೆ ಪೂರ್ಣ ಲಾಕ್‌ಡೌನ್ ಮಾಡುವುದಾಗಿದೆ ಎಂದಿದ್ದರು.

Scroll to load tweet…