Asianet Suvarna News Asianet Suvarna News

ಇಬ್ಬರು ಪೋಲಿಂಗ್ ಏಜೆಂಟ್‌ ಮೇಲೆ ಗ್ಯಾಂಗ್ ರೇಪ್: ಪ. ಬಂಗಾಳ ಬಿಜೆಪಿ ಆರೋಪ

ಇಬ್ಬರು ಪೋಲಿಂಗ್ ಏಜೆಂಟ್ ಮೇಲೆ ಗ್ಯಾಂಗ್ ರೇಪ್, ಮಹಿಳೆಗೆ ಲೈಂಗಿಕ ದೌರ್ಜನ್ಯ | ಪಶ್ಚಿಮ ಬಂಗಾಳ ಬಿಜೆಪಿ ಆರೋಪ

2 polling agents gang-raped women molested says Bengal BJP police denies dpl
Author
Bangalore, First Published May 4, 2021, 5:17 PM IST

ಕೊಲ್ಕತ್ತಾ(ಮೇ.04): ಪಶ್ಚಿಮ ಬಂಗಾಳದ ಬಿಜೆಪಿ ಘಟಕವು ತನ್ನ ಇಬ್ಬರು ಮತಗಟ್ಟೆ ಅಧಿಕಾರಿಗಳ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಮತ್ತು ಇತರ ಅನೇಕ ಮಹಿಳೆಯರಿಗೆ ಬಿರ್ಭುಮ್ ಜಿಲ್ಲೆಯಲ್ಲಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದೆ.

ಆರೋಪದ ಬಗ್ಗೆ ಪತ್ರಕರ್ತರ ಟ್ವೀಟ್ ಹಂಚಿಕೊಂಡ ಪಶ್ಚಿಮ ಬಂಗಾಳ ಪೊಲೀಸರು ಅವು ನಕಲಿ ಎಂದು ಹೇಳಿದ್ದಾರೆ. ನಂದಿಗ್ರಾಮ್‌ನಲ್ಲಿ ಮಹಿಳಾ ಪಕ್ಷದ ಕಾರ್ಯಕರ್ತರನ್ನು ಥಳಿಸಲಾಗಿದೆ ಎಂದು ಬಿಜೆಪಿ ಮುಖಂಡ ಸುವೆಂಡು ಅಧಿಕಾರಿ ಆರೋಪಿಸಿದ್ದಾರೆ.

ಮೊದಲು ಕೊರೋನಾ ಸೋಲಿಸೋಣ, ಆಮೇಲೆ ಬಿಜೆಪಿ ನೋಡ್ಕೊಳೋಣ ಎಂದ ದೀದಿ

ದೀಪ್ ಹಲ್ದಾರ್ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದು, ಇದರಲ್ಲಿ ಇಬ್ಬರು ಮಹಿಳಾ ಬಿಜೆಪಿ ಮತಗಟ್ಟೆ ಅಧಿಕಾರಿಗಳ ಮೇಲೆ ಸಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಬಿರ್ಹುಂನ ಗ್ರಾಮದಲ್ಲಿ ತುಂಬಾ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ವ್ಯಕ್ತಿ ಟ್ವೀಟ್ ಮಾಡಿದ್ದರು. ಆದರೆ ಇದು ಫೇಕ್ ನ್ಯೂಸ್ ಎಂದು ಪಶ್ಚಿಮ ಬಂಗಾಖ ಪೊಲೀಸರು ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios