ಮಧ್ಯ ಭಾರತದಲ್ಲಿ ಮಿಗ್-21 ಕ್ರಾಷ್ | ಪೈಲಟ್ ಸಾವು | ಘಟನೆ ದೃಢಪಡಿಸಿದ ವಾಯಸೇನೆ

ದೆಹಲಿ(ಮಾ.17): ಮಿಗ್-21 ಕ್ರಾಷ್ ಆಗಿದ್ದು ಭಾರತೀಯ ವಾಯು ಪಡೆಯ ಪೈಲಟ್ ಹುತಾತ್ಮರಾಗಿದ್ದಾರೆ. ಮಧ್ಯಭಾರತದಲ್ಲಿ ಬುಧವಾರ ಘಟನೆ ನಡೆದಿದ್ದು, ಏರ್ಫೋರ್ಸ್ ಟ್ವಿಟರ್ ಮೂಲಕ ಮಾಹಿತಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧ್ಯ ಭಾರತದ ವಾಯುನೆಲೆಯೊಂದರಲ್ಲಿ ಯುದ್ಧ ತರಬೇತಿ ಕಾರ್ಯಾಚರಣೆಗೆ ನಡೆಯುವ ವೇಳೆ ವಿಮಾನ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ.

ವಿಮಾನ ಪ್ರಯಾಣದಲ್ಲಿ ಡೆಲಿವರಿ: ಬಾನೆತ್ತರದಲ್ಲಿ ಜನಿಸಿದ ಹೆಣ್ಣುಮಗು

ದುರಂತ ಅಪಘಾತದಲ್ಲಿ ಗ್ರೂಪ್ ಕ್ಯಾಪ್ಟನ್ ಎ ಗುಪ್ತಾ ಅವರನ್ನು ಐಎಎಫ್ ಕಳೆದುಕೊಂಡಿದೆ. ಈ ಬಗ್ಗೆ ಐಎಎಫ್ ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗೆ ದೃಢವಾಗಿ ನಿಲ್ಲುತ್ತದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ಆದೇಶಿಸಲಾಗಿದೆ "ಎಂದು ವಾಯುಪಡೆ ಟ್ವೀಟ್ ನಲ್ಲಿ ತಿಳಿಸಿದೆ.

Scroll to load tweet…