ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ 6.30ಕ್ಕೆ ಸಚಿವ ಸಂಪುಟ ಸಭೆ, ಮಹತ್ವದ ಘೋಷಣೆ ಸಾಧ್ಯತೆ!
ವಿಶೇಷ ಅಧಿವೇಶನದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಕ್ಯಾಬಿನೆಟ್ ಸಭೆ ಕರೆದಿದ್ದಾರೆ. ಇಂದು ಸಂಜೆ 6.30ಕ್ಕೆ ನಡೆಯಲಿರುವ ಈ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.

ನವದೆಹಲಿ(ಸೆ.18) ಸಂಸತ್ ವಿಶೇಷ ಅಧಿವೇಶನದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಕರೆದಿರುವ ಕ್ಯಾಬಿನೆಟ್ ಮೀಟಿಂಗ್ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ನಾಳೆ ಹೊಸ ಸಂಸತ್ ಭವನದಲ್ಲಿ ಅಧಿವೇಶನ ನಡೆಯಲಿದೆ. ಇದಕ್ಕೂ ಮೊದಲು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. 6.30ಕ್ಕೆ ವಿಶೇಷ ಕ್ಯಾಬಿನೆಟ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ನಾಳಿನ ವಿಶೇಷ ಸಂಸತ್ ಅಧಿವೇಶನದಲ್ಲಿ ಮಂಡಿಸಲಿರುವ ಮಸೂದೆಗಳು ಸೇರಿದಂತೆ ಹಲವು ಮಹತ್ವದ ಘೋಷಣೆಗಳು ಆಗುವ ಸಾಧ್ಯತೆ ಇದೆ.
ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಸಂಸದೀಯ ವ್ಯವಾಹರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರು ಈಗಾಗಲೇ ಕ್ಯಾಬಿನೆಟ್ ಸಭೆ ಕುರಿತು ಚರ್ಚೆ ನಡೆಸಿದ್ದಾರೆ. ಈಗಾಗಲೇ ಪ್ರಹ್ಲಾದ್ ಜೋಶಿ ಪ್ರಮುಖ ಮಸೂದೆಗಳ ಮಂಡನೆ ಕುರಿತು ಬೆಳಕು ಚೆಲ್ಲಿದ್ದಾರೆ. ಅಡ್ವೋಕೆಟ್ ತಿದ್ದುಪಡಿ ಮಸೂದೆ 2023, ಪ್ರೆಸ್ ರಿಜಿಸ್ಟ್ರೇಶನ್ ಮಸೂದೆ 2023, ಪೋಸ್ಟ್ ಆಫೀಸ್ ಬಿಲ್ 2023, ಮುಖ್ಯ ಚುನಾವಣಾ ಕಮಿಷನರ್ ನೇಮಕ ಮಸೂದೆ 2023, ಹಿರಿಯ ನಾಗರೀಕರ ಮಸೂದೆ 2023 ಸೇರಿದಂತೆ ಕೆಲ ಪ್ರಮುಖ ಮಸೂದೆಗಳು ಮಂಡನೆಯಾಗಲಿದೆ ಎಂದಿದ್ದರೆ.
'ಮೋದಿ ಭಾರತದ ಡೆಂಗ್ ಕ್ಸಿಯಾಪಿಂಗ್' ಭಾರತದ ಪ್ರಧಾನಿಯನ್ನು ಚೀನಾದ ಪ್ರಖ್ಯಾತ ನಾಯಕನಿಗೆ ಹೋಲಿಸಿದ ರೇ ಡಾಲಿಯೊ !
ಇತ್ತ ಪ್ರತಿಪಕ್ಷಗಳು ಮಹಿಳಾ ಮೀಸಲಾತಿ ಮಸೂದೆ ಮಂಡಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿವೆ. ಮೂಲಗಳ ಪ್ರಕಾರ, ಈ ಶೇ.33 ಮೀಸಲಲ್ಲೇ ಎಸ್ಸಿಎಸ್ಟಿ ಹಾಗೂ ಹಿಂದುಳಿದ ಮಹಿಳೆಯರಿಗೆ ಮೀಸಲು ನೀಡಬೇಕು ಎಂದು ಪಕ್ಷಗಳು ಒತ್ತಾಯಿಸಿದವು.
ಇಂದು ವಿಶೇಷ ಅಧಿವೇಶನ ಹಳೇ ಸಂಸತ್ ಭವನದಲ್ಲಿ ನಡೆದಿದೆ. ಇದು ವಿದಾಯದ ಅಧಿವೇಶನವಾಗಿತ್ತು. ನಾಳೆಯಿಂದ ಕಲಾಪಗಳು ಹೊಸ ಸಂಸತ್ ಭವನದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19 ರಿಂದ ಸಂಸತ್ತಿನ ಕಾರ್ಯಕಲಾಪ ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ ಹೊಸ ಸಂಸತ್ ಭವನಕ್ಕೆ ಸ್ಥಳಾಂತರವಾಗುತ್ತಿದೆ. ಹೀಗಾದಲ್ಲಿ ಹಳೆಯ ಸಂಸತ್ ಭವನ ಇತಿಹಾಸದ ಒಂದು ಸ್ತಂಭವಾಗಿ, ಸ್ಮಾರಕವಾಗಿ ಉಳಿಯಲಿದೆ.
ಜಿ20 ಯಶಸ್ಸು ಭಾರತದದ್ದು, ವ್ಯಕ್ತಿ ಅಥವಾ ಪಕ್ಷಗಳದ್ದಲ್ಲ; ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಟಾಪ್ 10 ಮಾತುಗಳು!
ಸಾಮಾನ್ಯವಾಗಿ ವರ್ಷಕ್ಕೆ 3 ಸಂಸತ್ ಅಧಿವೇಶನಗಳು ನಡೆಯುತ್ತವೆ. ಜನವರಿಯಲ್ಲಿ ಬಜೆಟ್, ಜುಲೈ- ಆಗಸ್ಟ್‌ನಲ್ಲಿ ಮುಂಗಾರು, ವರ್ಷಾಂತ್ಯಕ್ಕೆ ಚಳಿಗಾಲದ ಅಧಿವೇಶನ ನಡೆಯುತ್ತವೆ. ಒಂದರಿಂದ ಮತ್ತೊಂದು ಅಧಿವೇಶನಕ್ಕೆ ಆರು ತಿಂಗಳಿಗಿಂತ ಅಧಿಕ ಅಂತರವಿರಬಾರದು ಎಂಬ ನಿಯಮವಿದೆ.