Asianet Suvarna News Asianet Suvarna News

ಜಿ20 ಯಶಸ್ಸು ಭಾರತದದ್ದು, ವ್ಯಕ್ತಿ ಅಥವಾ ಪಕ್ಷಗಳದ್ದಲ್ಲ; ಸಂಸತ್ತಿನಲ್ಲಿ ಪ್ರಧಾನಿ ಮೋದಿಯ ಟಾಪ್‌ 10 ಮಾತುಗಳು!

ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನವಾದ ಸೋಮವಾರ ಲೋಕಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಈಗಿರುವ ಸಂಸತ್ತಿನ ನೆನಪುಗಳ ಬಗ್ಗೆ ಮಾತನಾಡಿದರು, ಸದನದಲ್ಲಿ ಮಾಡಿರುವ ನಿರ್ಣಯಗಳು, 75 ವರ್ಷಗಳ ಸಂಸದೀಯ ಪ್ರಯಾಣದ ನೆನಪನ್ನು ಮೋದಿ ಸ್ಮರಿಸಿದರು.
 

Top Prime Minister Narendra Modi quotes in Parliament G20s success Indias not individuals or partys san
Author
First Published Sep 18, 2023, 12:32 PM IST | Last Updated Sep 18, 2023, 12:32 PM IST

ನವದೆಹಲಿ (ಸೆ.18): ಸಂಸತ್ತಿನ ವಿಶೇಷ ಅಧಿವೇಶನದ ಮೊದಲ ದಿನವಾದ ಸೋಮವಾರ ಲೋಕಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಅವರು ಚಂದ್ರನ ಮೇಲೆ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್ ಮತ್ತು 18 ನೇ G20 ಶೃಂಗಸಭೆಯ ಯಶಸ್ವಿ ಆತಿಥ್ಯದ ಬಗ್ಗೆ ಮಾತನಾಡಿದರು. ಅದರೊಂದಿಗೆ ಹೊಸ ಸಂಸತ್‌ ಭವನಕ್ಕೆ ಶಿಫ್ಟ್‌ ಆಗುವ ಮುನ್ನಹಳೆಯ ಸಂಸತ್ ಭವನದ ನೆನಪುಗಳ ಬಗ್ಗೆ ಅವರು ಮಾತನಾಡಿದರು.

ಸಂಸತ್‌ನ ವಿಶೇಷ ಅಧಿವೇಶನದ ಭಾಷಣದಲ್ಲಿ ಪ್ರಧಾನಿ ಮೋದಿ ಮಾತು
- ಜಿ 20 ಶೃಂಗಸಭೆಯ ಯಶಸ್ಸು ಇಡೀ ದೇಶದದ್ದು, ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದಲ್ಲ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. "ಇಂದು, ನೀವು ಜಿ20 ಯಶಸ್ಸನ್ನು ಸರ್ವಾನುಮತದಿಂದ ಶ್ಲಾಘಿಸಿದ್ದೀರಿ... ನಾನು ನಿಮಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಜಿ20 ಯಶಸ್ಸು ದೇಶದ 140 ಕೋಟಿ ನಾಗರಿಕರದ್ದು. ಇದು ಭಾರತದ ಯಶಸ್ಸು, ಒಬ್ಬ ವ್ಯಕ್ತಿ ಅಥವಾ ಪಕ್ಷದಲ್ಲ... ಇದು ನಮ್ಮೆಲ್ಲರ ಸಂಭ್ರಮದ ವಿಚಾರ...’’ ಎಂದರು.

- ನಾನು ಸಂಸದನಾಗಿ ಮೊದಲ ಬಾರಿಗೆ ಈ ಕಟ್ಟಡವನ್ನು ಪ್ರವೇಶಿಸಿದಾಗ, ನಾನು ಸಹಜವಾಗಿಯೇ ಸಂಸತ್ ಭವನದ ಹೊಸ್ತಿಲಲ್ಲಿ ತಲೆಬಾಗಿದ್ದೆ. ಈ ಪ್ರಜಾಪ್ರಭುತ್ವದ ಮಂದಿರದ ಮೇಲೆ ಭಕ್ತಿಯಿಂದ ಹೆಜ್ಜೆ ಹಾಕಿದ್ದೆ. ಆ ಕ್ಷಣ ನನಗೆ ಭಾವನೆಗಳಿಂದ ತುಂಬಿತ್ತು. ಅದನ್ನೀಗ ಊಹಿಸಲು ಸಾಧ್ಯವಿಲ್ಲ, ಆದರೆ ಭಾರತೀಯ ಪ್ರಜಾಪ್ರಭುತ್ವದ ಶಕ್ತಿ, ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ವಾಸ ಮಾಡ್ತಿದ್ದ ನನ್ನಂಥವನನ್ನು ಸಂಸತ್ತಿಗೆ ತಲುಪುವಂತೆ ಮಾಡಿದೆ. ದೇಶ ನನ್ನನ್ನು ಇಷ್ಟೊಂದು ಗೌರವಿಸುತ್ತದೆ ಎಂದು ನಾನು ಊಹಿಸಿರಲಿಲ್ಲ.

- ಈ ಮನೆಗೆ ಬೀಳ್ಕೊಡುವುದು ಅತ್ಯಂತ ಭಾವನಾತ್ಮಕ ಕ್ಷಣ, ಕುಟುಂಬವು ಹಳೆಯ ಮನೆಯನ್ನು ತೊರೆದು ಹೊಸ ಮನೆಗೆ ಹೋದರೂ, ನಂತರ ಹಲವಾರು ನೆನಪುಗಳು ಅದನ್ನು ಕೆಲವು ಕ್ಷಣಗಳಿಗೆ ಅಲ್ಲಾಡಿಸುತ್ತವೆ. ನಾವು ಈ ಮನೆಯಿಂದ ಹೊರಡುವಾಗ, ನಮ್ಮ ಮನಸ್ಸು ಮತ್ತು ಮೆದುಳು ಕೂಡ ಆ ಭಾವನೆಗಳು ಮತ್ತು ಅನೇಕ ನೆನಪುಗಳಿಂದ ತುಂಬಿರುತ್ತದೆ. ಆಚರಣೆಗಳು, ಉತ್ಸಾಹ, ಹುಳಿ ಮತ್ತು ಸಿಹಿ ಕ್ಷಣಗಳು, ಜಗಳಗಳು ಈ ನೆನಪುಗಳೊಂದಿಗೆ ಸಂಬಂಧ ಹೊಂದಿವೆ

- ‘ಸ್ವಾತಂತ್ರ್ಯಕ್ಕೆ ಮುನ್ನ ಹಳೆಯ ಸಂಸತ್ತು ಸಾಮ್ರಾಜ್ಯಶಾಹಿ ವಿಧಾನ ಪರಿಷತ್ತಿನ ಸ್ಥಾನವಾಗಿತ್ತು. ಸ್ವಾತಂತ್ರ್ಯದ ನಂತರ ಅದಕ್ಕೆ ‘ಸಂಸದ್ ಭವನ’ ಎಂಬ ಗುರುತಿತ್ತು. ಆದರೆ ಈ ಕಟ್ಟಡವನ್ನು ಕಟ್ಟುವುದು ವಿದೇಶಿಯರ ನಿರ್ಧಾರ ಎಂಬುದು ನಿಜ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಿರ್ಧಾರ ಅವರದ್ದಾದರೂ, ಅದನ್ನು ನಿರ್ಮಿಸಲು ಬಳಸಲಾದ ಬೆವರು, ಶ್ರಮ ಮತ್ತು ಹಣ ನನ್ನ ದೇಶವಾಸಿಗಳದ್ದು ಎಂದು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

'ಇಲ್ಲಿ ಸಂಸತ್ ಭವನದ ಗೇಟ್‌ನಲ್ಲಿ ಬರೆಯಲಾಗಿದೆ, ಜನರಿಗೆ ಬಾಗಿಲು ತೆರೆಯಿರಿ ಮತ್ತು ಅವರು ತಮ್ಮ ಹಕ್ಕುಗಳನ್ನು ಹೇಗೆ ಪಡೆಯುತ್ತಾರೆ ಎಂಬುದನ್ನು ನೋಡಿ. ನಾವೆಲ್ಲರೂ ಮತ್ತು ನಮ್ಮ ಹಿಂದೆ ಬಂದವರು ಇದಕ್ಕೆ ಸಾಕ್ಷಿಯಾಗಿದ್ದೇವೆ. ಕಾಲಕ್ಕೆ ತಕ್ಕಂತೆ ಸಂಸತ್ತಿನ ರಚನೆಯೂ ಬದಲಾಯಿತು. ಸಮಾಜದ ಪ್ರತಿಯೊಂದು ವರ್ಗವನ್ನು ಪ್ರತಿನಿಧಿಸುವ ವೈವಿಧ್ಯತೆಯಿಂದ ಕೂಡಿದೆ. ಈ ಕಟ್ಟಡದಲ್ಲಿ ಗೋಚರಿಸುತ್ತದೆ. ಸಮಾಜದ ಎಲ್ಲ ವರ್ಗದ ಜನರು ಇಲ್ಲಿ ಕೊಡುಗೆ ನೀಡಿದ್ದಾರೆ.

'ಆರಂಭದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಕಡಿಮೆ ಇತ್ತು. ಕ್ರಮೇಣ ಅವರ ಸಂಖ್ಯೆ ಹೆಚ್ಚಾಯಿತು. ಆರಂಭವಾದಾಗಿನಿಂದ ಉಭಯ ಸದನಗಳಿಗೆ 7500ಕ್ಕೂ ಹೆಚ್ಚು ಪ್ರತಿನಿಧಿಗಳು ಬಂದಿದ್ದಾರೆ. ಈ ಅವಧಿಯಲ್ಲಿ ಸುಮಾರು 600 ಮಹಿಳಾ ಸಂಸದರು ಬಂದಿದ್ದರು. ಇಂದರ್‌ಜಿತ್ ಗುಪ್ತಾ ಅವರು 43 ವರ್ಷಗಳ ಕಾಲ ಈ ಸದನದ ಸಾಕ್ಷಿಯಾಗಿದ್ದರು. 93 ನೇ ವಯಸ್ಸಿನಲ್ಲಿ ಶಫೀಕರ್ ರೆಹಮಾನ್ ಈ ಸದನಕ್ಕೆ ಬಂದಿದ್ದರು ಎಂದು ನೆನಪಿಸಿಕೊಂಡರು.

- ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಭಾರತದ ಮಾಜಿ ಪ್ರಧಾನಿಗಳ ಕೊಡುಗೆಗಳನ್ನು ಶ್ಲಾಘಿಸಿದರು. ನೆಹರೂ ಅವರಿಂದ ಹಿಡಿದು ವಾಜಪೇಯಿಯವರವರೆಗೆ ಈ ಸಂಸತ್ತು ಹಲವಾರು ನಾಯಕರು ಭಾರತದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಸ್ತುತಪಡಿಸುವುದನ್ನು ನೋಡಿದೆ ಎಂದು ಅವರು ಲೋಕಸಭೆಯಲ್ಲಿ ಹೇಳಿದರು.

-ಪ್ರಜಾಪ್ರಭುತ್ವದ ಮನೆಯ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ದಾಳಿ ನಮ್ಮ ಆತ್ಮದ ಮೇಲೆಯೇ ಹೊರತು ಕಟ್ಟಡದ ಮೇಲೆ ಅಲ್ಲ. ಆ ಘಟನೆಯನ್ನು ಈ ದೇಶ ಮರೆಯಲು ಸಾಧ್ಯವೇ ಇಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ನಮ್ಮನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

- ಇಂದು ನಾವು ಈ ಸದನದಿಂದ ಹೊರಡುತ್ತಿರುವಾಗ, ಸಂಸತ್ತಿನ ವರದಿಗಳನ್ನು ಮಾಡಿದ ಪತ್ರಕರ್ತ ಸ್ನೇಹಿತರನ್ನು ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ. ತಮ್ಮ ಇಡೀ ಜೀವನವನ್ನು ಸಂಸತ್ತಿಗೆ ವರದಿ ಮಾಡಿದ ಕೆಲವರು ಇದ್ದಾರೆ. ಮೊದಲು ಈ ತಂತ್ರಜ್ಞಾನ ಇರಲಿಲ್ಲ, ಆಗ ಆ ಜನ ಮಾತ್ರ ಅಲ್ಲಿದ್ದರು. ಒಳಗಿನ ಸುದ್ದಿಗಳನ್ನು ಮಾತ್ರಲ್ಲ ಹೊರಗಿನ ಸುದ್ದಿಗಳನ್ನೂ ಹೇಳುತ್ತಿದ್ದದ್ದು ಅವರ ಶಕ್ತಿ.

ಸಂಸತ್‌ ಅಧಿವೇಶನಕ್ಕೂ ಮುನ್ನ ವಿಪಕ್ಷಗಳಿಗೆ ಮೋದಿ ಟಾಂಗ್‌, 'ಎದೆ ಬಡಿದುಕೊಂಡು ಅಳೋಕೆ ಸಾಕಷ್ಟು ಸಮಯವಿದೆ'

- ಎಲ್ಲ ನಾಯಕರ ಕೊಡುಗೆಯನ್ನು ಸ್ಮರಿಸಿದರು. ರಾಷ್ಟ್ರಪತಿಗಳಾದ ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿ ಕೋವಿಂದ್ ಮತ್ತು ದ್ರೌಪದಿ ಮುರ್ಮು ಮತ್ತು ಪ್ರಧಾನಿಗಳಾದ ನೆಹರು-ಶಾಸ್ತ್ರಿಯಿಂದ ಚಂದ್ರಶೇಖರ್-ಅಟಲ್-ಮನಮೋಹನ್. ಜೊತೆಗೆ ಸರ್ದಾರ್ ಪಟೇಲ್, ಜೆಪಿ, ಲೋಹಿಯಾ, ಅಡ್ವಾಣಿಯಂತಹ ದಿಗ್ಗಜರನ್ನು ನೆನಪಿಸಿಕೊಂಡರು. ಸ್ಪೀಕರ್‌ಗಳಾದ ಮಾವ್ಲಂಕರ್ ಅವರಿಂದ ಹಿಡಿದು ಸುಮಿತ್ರಾ ಹಾಗೂ ಓಂ ಬಿರ್ಲಾ ಅವರ ಬಗ್ಗೆ ಮಾತನಾಡಿದರು.

Parliament Special Session: ಲೋಕಸಭೆಯಲ್ಲಿ ಮೋದಿ ಭಾಷಣ, 4 ಮಸೂದೆ ಮಂಡಿಸಲಿರುವ ಸರ್ಕಾರ
 

Latest Videos
Follow Us:
Download App:
  • android
  • ios