Asianet Suvarna News Asianet Suvarna News

ಉಗ್ರ ದಾಳಿ ತಪ್ಪಿಸಲು ಕಾಶ್ಮೀರದಲ್ಲಿ 300 ಸ್ಪೆಷಲ್ ಕಮಾಂಡೋ ನಿಯೋಜಿಸಿದ ಭಾರತ!

ಹಮಾಸ್ ಉಗ್ರರು ನಡೆಸಿದ ದಿಢೀರ್ ದಾಳಿಯಿಂದ ಭಾರತ ಈಗಾಗಲೇ ಎಚ್ಚೆತ್ತುಕೊಂಡಿದೆ. ಇದರ ಬೆನ್ನಲ್ಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ಕಾಶ್ಮೀರದಲ್ಲಿನ ಉಗ್ರರ ಹೆಡೆಮುರಿ ಕಟ್ಟಲು 300 ಸ್ಪೆಷಲ್ ಟ್ರೈನ್ಡ್ ಕಮಾಂಡೋಗಳನ್ನು ನಿಯೋಜನೆ ಮಾಡಿದೆ.
 

Special Operation Commandos Deployed in Jammu and Kashmir to eliminate Terror ckm
Author
First Published Oct 28, 2023, 9:06 PM IST

ಕಾಶ್ಮೀರ(ಅ.28) ಇಸ್ರೇಲ್ ಮೇಲೆ ಹಮಾಸ್ ಉಗ್ರರು ಏಕಾಏಕಿ ಎಲ್ಲಾ ಮಾರ್ಗದ ಮೂಲಕ ದಾಳಿ ನಡೆಸಿ ಭೀಕರ ನರಮೇಧ ನಡೆಸಿದ್ದರು. ಈ ದಾಳಿ ಬಳಿಕ ಭಾರತ ಹಲವು ನೀತಿಗಳಲ್ಲಿ ಬದಲಾವಣೆ ಮಾಡಿದೆ. ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗಡಿ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದೆ. ಇದೀಗ ಕಾಶ್ಮೀರದಲ್ಲಿನ ಉಗ್ರರ ಉಪಟಳ ಸಂಪೂರ್ಣ ಹತ್ತಿಕ್ಕಲು ಕೇಂದ್ರ ಸರ್ಕಾರ ವಿಶೇಷ ತರಬೇತಿ ಪಡೆದಿರುವ 300 ಕಮಾಂಡೋಗಳನ್ನು ನಿಯೋಜಿಸಿದೆ.

ಸ್ಪೆಷಲ್ ಆಪರೇಶನ್ ಗ್ರೂಪ್ ಕಮಾಂಡೋಗಳನ್ನು 43 ಸೂಕ್ಷ್ಮ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜನೆ ಮಾಡಲಿದೆ. ಈ ಕಮಾಂಡೋಗಳಿಗೆ ಉಗ್ರರನ್ನು ಭೇಟೆಯಾಡಲು ಸಂಪೂರ್ಣ ಅಧಿಕಾರ ನೀಡಿದೆ. ಇಷ್ಟು ದಿನ ಕೆಲ ಪೊಲೀಸ್ ಠಾಣ ವ್ಯಾಪ್ತಿಯಲ್ಲೇ ಜಮ್ಮ ಮತ್ತು ಕಾಶ್ಮೀರ ಪೊಲೀಸರು ಉಗ್ರರ ವಿರುದ್ದ ಹೋರಾಟಕ್ಕಿಳಿಯುತ್ತಿದ್ದರು. ಭಾರತೀಯ ಸೇನೆಯೂ ಸಾಥ್ ನೀಡುತ್ತಿತ್ತು. ಇದೀಗ ಈ ಸ್ಪೆಷಲ್ ಕಮಾಂಡೋಗಳು ಉಗ್ರರ ಹತ್ಯೆಗೆ ಹೋರಾಟ ಶುರುಮಾಡಲಿದೆ.

ಪಾಕ್‌ ದಾಳಿಯಲ್ಲಿ ಕರ್ನಾಟಕದ ಯೋಧನಿಗೆ ತೀವ್ರ ಗಾಯ: ಸತತ 7 ತಾಸು ಅಪ್ರಚೋದಿತ ದಾಳಿ ನಡೆಸಿದ ಪಾಕ್‌ ಸೇನೆ

ಸ್ಪೆಷಲ್ ಆಪರೇಷನ್ ಗ್ರೂಪ್ ಕಮಾಂಡೋಗಳಿಗೆ ಬುಲೆಟ್‌ಫ್ರೂಫ್ ವಾಹನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲಾಗಿದೆ. ಜಮ್ಮ ಮತ್ತು ಕಾಶ್ಮೀರದಲ್ಲಿ ಸಂಪೂರ್ಮ ಶಾಂತಿ ನೆಲೆಸುವಂತೆ ಮಾಡುವುದೇ ಈ ಕಮಾಂಡೋಗಳ ಮೊದಲ ಗುರಿ. ಜಮ್ಮ ಮತ್ತು ಕಾಶ್ಮೀರದ ಹಲವು ಭಾಗದಲ್ಲಿ ಭಯೋತ್ಪಾದನಾ ಚಟುವಚಿಕೆಗಳುು ನಡೆಯುತ್ತಿದೆ. ಸದ್ದಿಲ್ಲದೆ ಉಗ್ರರು ಅಡಗುತಾಣದಲ್ಲಿ ಕಾರ್ಯಾಚರಣೆ ಆರಂಭಿಸಿ ಒಮ್ಮೆಲೆ ದಾಳಿ ಮಾಡುತ್ತಾರೆ. ಇದೀಗ ಈ ಕಮಾಂಡೋಗಳು ಭಯೋತ್ಪಾದರ ಎಲ್ಲಾ ಜಾಲವನ್ನು ಭೇದಿಸಿ ನಿರ್ನಾಮ ಮಾಡಲಿದೆ.

ಒಂದೆಡೆ ಪಾಕಿಸ್ತಾನ ಸೇನೆ ಸತತವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಈ ಮೂಲಕ ಗಡಿ ನಿಯಮ ಉಲ್ಲಂಘಿಸಿದೆ. ಅಪ್ರಚೋದಿತ ದಾಳಿಗೆ ಭಾರತ ತಕ್ಕ ತಿರುಗೇಟು ನೀಡಿದೆ. ಇದೇ ವೇಳೆ  ಗಡಿ ನಿಯಂತ್ರಣಾ ರೇಖೆ ಬಳಿ ಪಾಕ್‌ ಆಕ್ರಮಿತ ಕಾಶ್ಮೀರದಿಂದ ಕುಪ್ವಾರ ಬಳಿಯ ಮಚ್ಚಿಲ್‌ ಸಮೀಪ ಭಾರತಕ್ಕೆ ಅಕ್ರಮವಾಗಿ ಒಳನುಸುಳಲು ಯತ್ನಿಸಿದ ಐವರು ಲಷ್ಕರ್ ಎ ತೊಯ್ಬಾ ಉಗ್ರರರನ್ನು ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ. ಒಳನುಸುಳುವಿಕೆ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಹಾಗೂ ಸೇನೆಯ ಚಿನಾರ್‌ ಪಡೆ ಜಂಟಿಯಾಗಿ ಮಚ್ಚಿಲ್‌ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಐವರು ಹತರಾದರು ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಕೆನಡಾದ ಮತ್ತೊಂದು ಅಧಿಕಪ್ರಸಂಗ, ಭಾರತದಲ್ಲಿನ ಕೆನಡಾ ಪ್ರಜೆಗಳಿಗೆ ಪ್ರಯಾಣ ಸಲಹೆ ಕಳಿಸಿದ ಸರ್ಕಾರ!
 

Follow Us:
Download App:
  • android
  • ios