ಕೆನಡಾದ ಮತ್ತೊಂದು ಅಧಿಕಪ್ರಸಂಗ, ಭಾರತದಲ್ಲಿನ ಕೆನಡಾ ಪ್ರಜೆಗಳಿಗೆ ಪ್ರಯಾಣ ಸಲಹೆ ಕಳಿಸಿದ ಸರ್ಕಾರ!

ಭಾರತದ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಹಾಳು ಮಾಡಿಕೊಳ್ಳುವ ನಿಟ್ಟಿನಲ್ಲಿ ತನ್ನೆಲ್ಲಾ ಪ್ರಯತ್ನಗಳನ್ನು ಕೆನಡಾ ಮಾಡುತ್ತಿದೆ. ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಭಾರತವನ್ನು ದೂಷಣೆ ಮಾಡಿದ್ದ ಕೆನಡಾ ಈಗ, ಭಾರತದಲ್ಲಿನ ತನ್ನ ಪ್ರಜೆಗಳಿಗೆ ಟ್ರಾವೆಲ್‌ ಅಡ್ವೈಸರಿ ನೀಡುವ ಮೂಲಕ ಉದ್ಧಟತನ ತೋರಿದೆ.

Canada issues Travel Advisory for India over Threat Of Terrorist Attacks amid  Khalistan Row san

ನವದೆಹಲಿ (ಸೆ.19): ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಗೆ ಭಾರತವೇ ಕಾರಣ ಎಂದು ಕೆನಡಾದ ಸಂಸತ್ತಿನಲ್ಲಿ ಹೇಳಿದ್ದ ಜಸ್ಟೀನ್‌ ಟ್ರುಡೊ ಸರ್ಕಾರ ಮತ್ತೊಂದು ಉದ್ಧಟತನ ತೋರಿದೆ. ಭಾರತದಲ್ಲಿರುವ ತನ್ನೆಲ್ಲಾ ಪ್ರಜೆಗಳಿಗೆ ಪ್ರಯಾಣ ಸಲಹೆ ಕಳಿಸಿರುವ ಕೆನಡಾ ಸರ್ಕಾರ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಹಾಗೂ ಗುಜರಾತ್‌, ರಾಜಸ್ಥಾನ ಮತ್ತು ಪಂಜಾಬ್‌ನ ಗಡಿ ಭಾಗಕ್ಕೆ ಹೋಗಬೇಡಿ ಎಂದು ಎಚ್ಚರಿಸಿದೆ. ಆ ಮೂಲಕ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಭಯೋತ್ಪಾದಕರಿಂದ ಆತಂಕವಿದೆ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನವನ್ನು ಕೆನಡಾ ಸರ್ಕಾರ ಮಾಡಿದೆ. ಇದು ಭಾರತದ ಕಣ್ಣು ಮತ್ತಷ್ಟು ಕೆಂಪಗಾಗಿಸುವ ಸಾಧ್ಯತೆ ಇದ್ದು, ಕೆನಡಾ ಸರ್ಕಾರದ ಈ ಉದ್ಧಟತನಕ್ಕೆ ಭಾರತದ ವಿದೇಶಾಂಗ ಇಲಾಖೆ ಯಾವ ರೀತಿಯ ಉತ್ತರ ನೀಡಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. "ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಎಲ್ಲಾ ಪ್ರಯಾಣವನ್ನು ತಪ್ಪಿಸಿ. ಭಯೋತ್ಪಾದನೆ, ಉಗ್ರಗಾಮಿ ಚಟುವಟಿಕೆ,  ನಾಗರಿಕ ಅಶಾಂತಿ ಮತ್ತು ಅಪಹರಣದ ಬೆದರಿಕೆ ಇದೆ. ಈ ಸಲಹೆಯು ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಅಥವಾ ಅದರೊಳಗೆ ಪ್ರಯಾಣಿಸುವುದನ್ನು ಆದಷ್ಟು ತಡೆಹಿಡಿಯಬೇಕು' ಎಂದು ಕೆನಡಾ, ಭಾರತಕ್ಕೆ ತೆರಳುವ ತನ್ನ ಪ್ರಯಾಣಿಕರಿಗೆ ಈ ಸಲಹೆ ನೀಡಿದೆ.

ಖಲಿಸ್ತಾನಿ ನಾಯಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಸಾವಿಗೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟೀನ್‌ ಟ್ರುಡೊ ಅವರ ಹೇಳಿಕೆ ಕಿಡಿಕಿಯಾಗಿರುವ ಭಾರತ, ಇದೊಂದು ಬೇಜವಾಬ್ದಾರಿಯ ಹೇಳಿಕೆ ಎಂದು ಟೀಕೆ ಮಾಡಿತ್ತು. ಇದರ ಬೆನ್ನಲ್ಲಿಯೇ ಕೆನಡಾದಲ್ಲಿದ್ದ ಭಾರತದ ಪ್ರಮುಖ ಗುಪ್ತಚರ ಏಜೆಂಟ್‌ ಪವನ್‌ ಕುಮಾರ್‌ ಅವರನ್ನು ದೇಶದಿಂದ ಹೊರಕಳಿಸುವ ನಿರ್ಧಾರ ಮಾಡಿತ್ತು. ಇದಕ್ಕೆ ತಿರುಗೇಟು ಎನ್ನುವಂತೆ ಭಾರತ ಕೂಡ ಕೆನಡಾದ ಪ್ರಮುಖ ಗುಪ್ತಚರ ಅಧಿಕಾರಿಯನ್ನು ಐದು ದಿನಗಳ ಒಳಗಾಗಿ ದೇಶವನ್ನು ಖಾಲಿ ಮಾಡುವಂತೆ ಸೂಚಿಸಿದೆ.

ನಾವು ಭಾರತವನ್ನು ಕೆಣಕಲು ಪ್ರಯತ್ನಿಸುತ್ತಿಲ್ಲ ಎಂದ ಕೆನಡಾ ಪ್ರಧಾನಿ ಜಸ್ಟೀನ್‌ ಟ್ರುಡೊ

ಆದರೆ, ಪರಿಸ್ಥಿತಿ ತನ್ನ ಕೈಮೀರುವ ಎಲ್ಲಾ ಲಕ್ಷಣಗಳನ್ನು ಕಂಡ ಕೆನಡಾದ ಪ್ರಧಾನಿ, ಮಂಗಳವಾರದ ಸಂಜೆಯ ವೇಳೆಗೆ ನಾವು ಈ ವಿಚಾರವನ್ನು ಹೇಳುವ ಮೂಲಕ ಭಾರತವಮ್ನು ಪ್ರಚೋದಿಸುತ್ತಿಲ್ಲ. ಆದರೆ, ನವದೆಹಲಿ ಈ ವಿಚಾರವನ್ನು ಸೂಕ್ತವಾಗಿ ತನಿಖೆ ಮಾಡಬೇಕು ಎಂದು ಬಯಸುತ್ತೇವೆ ಎಂದು ತಿಳಿಸಿತ್ತು. ಇದರ ನಡುವೆ ಭಾರತದಲ್ಲಿರುವ ಕೆನಡಾ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಭಾರತೀಯ ಸಿಬ್ಬಂದಿಗಳನ್ನು ಮಧ್ಯಾಹ್ನದ 2 ಗಂಟೆಯ ವೇಳೆಗೆ ಸ್ಥಳವನ್ನು ತೊರೆಯುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಖಲಿಸ್ತಾನಿಗಳ ಹೆಡೆಮುರಿ ಕಟ್ಟಿದ ಸರ್ಕಾರ, ಕೆನಡಾದ ನಡುರಸ್ತೆಯಲ್ಲಿಯೇ ಹೆಣವಾದ ಹರ್ದೀಪ್‌ ಸಿಂಗ್‌ ನಿಜ್ಜಾರ್‌!

Latest Videos
Follow Us:
Download App:
  • android
  • ios