ಪಾಕ್ ದಾಳಿಯಲ್ಲಿ ಕರ್ನಾಟಕದ ಯೋಧನಿಗೆ ತೀವ್ರ ಗಾಯ: ಸತತ 7 ತಾಸು ಅಪ್ರಚೋದಿತ ದಾಳಿ ನಡೆಸಿದ ಪಾಕ್ ಸೇನೆ
ರಾತ್ರಿ 10.40ರ ವೇಳೆಗೆ ಪಾಕ್ ಪಡೆಗಳು ಮಷಿನ್ ಗನ್ ಬಳಸಿ ಭಾರತದ ಪಡೆಗಳತ್ತ ಸತತವಾಗಿ ದಾಳಿ ನಡೆಸಿವೆ. ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೂಡಾ ತಿರುಗೇಟು ನೀಡಿದ ಪರಿಣಾಮ ರಾತ್ರಿ 2.45ರ ವೇಳೆಗೆ ಪಾಕ್ ಪಡೆಗಳು ತಮ್ಮ ದಾಳಿಯನ್ನು ಸ್ಥಗಿತಗೊಳಿಸಿದವು.
ನವದೆಹಲಿ (ಅಕ್ಟೋಬರ್ 28, 2023): ಬಹಳ ದಿನಗಳ ಬಳಿಕ ಮತ್ತೆ ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯ ಬಳಿ ಕ್ಯಾತೆ ತೆಗೆದಿರುವ ಪಾಕಿಸ್ತಾನ ಸೇನಾ ಪಡೆಗಳು, ಗುರುವಾರ ರಾತ್ರಿ ಸತತ 7 ಗಂಟೆಗಳ ಕಾಲ ಶೆಲ್ ಮತ್ತು ಗುಂಡಿನ ದಾಳಿ ನಡೆಸಿವೆ. ಈ ದಾಳಿಯಲ್ಲಿ ಕರ್ನಾಟಕ ಮೂಲದ ಯೋಧ ಬಸವರಾಜ್ ಸೇರಿದಂತೆ ಇಬ್ಬರು ಬಿಎಸ್‌ಎಫ್ ಯೋಧರು ಮತ್ತು ರಜನಿ ದೇವಿ ಎಂಬ ಓರ್ವ ಮಹಿಳೆಗೆ ಗಾಯಗಳಾಗಿವೆ.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ, ‘ಗುರುವಾರ ರಾತ್ರಿ 9.15ರ ವೇಳೆಗೆ ಪಾಕ್ ರೇಂಜರ್ಸ್‌ಗಳು ಭಾರತದ ಅರ್ನಿರ್ಯಾ ಪ್ರದೇಶಕ್ಕೆ ಹೊಂದಿಕೊಂಡ ಅಂತಾರಾಷ್ಟ್ರೀಯ ಗಡಿ ಪ್ರದೇಶದ ಸೇನಾ ಪೋಸ್ಟ್‌ಗಳನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಿದರು. ಈ ವೇಳೆ ಕೆಲವು ಶೆಲ್‌ಗಳು ಜನವಸತಿ ಪ್ರದೇಶಗಳಿಗೂ ತಲುಪಿ ರಜನಿ ದೇವಿ ಎಂಬ ಮಹಿಳೆ ಗಾಯಗೊಂಡಿದ್ದಾಳೆ.
ಇದನ್ನು ಓದಿ: ವಿದ್ಯುತ್ ಬಿಲ್ ಪಾವತಿ ಮಾಡಲ್ಲ ಅಂತ ಬೀದಿಗಿಳಿದ ಪಾಕ್ ಆಕ್ರಮಿತ ಕಾಶ್ಮೀರ ನಿವಾಸಿಗಳು: ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
ಇನ್ನು ರಾತ್ರಿ 10.40ರ ವೇಳೆಗೆ ಪಾಕ್ ಪಡೆಗಳು ಮಷಿನ್ ಗನ್ ಬಳಸಿ ಭಾರತದ ಪಡೆಗಳತ್ತ ಸತತವಾಗಿ ದಾಳಿ ನಡೆಸಿವೆ. ಈ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಕೂಡಾ ತಿರುಗೇಟು ನೀಡಿದ ಪರಿಣಾಮ ರಾತ್ರಿ 2.45ರ ವೇಳೆಗೆ ಪಾಕ್ ಪಡೆಗಳು ತಮ್ಮ ದಾಳಿಯನ್ನು ಸ್ಥಗಿತಗೊಳಿಸಿದವು. ಆದರೆ ಈ ದಾಳಿಯ ವೇಳೆ ಬಸವರಾಜ್ ಎಂಬ ಯೋಧನ ಕೈಗೆ ಗಾಯಗಳಾಗಿವೆ. ಜೊತೆಗೆ ಶೇರ್‌ಸಿಂಗ್ ಎಂಬ ಇನ್ನೊಬ್ಬ ಯೋಧ ಕೂಡಾ ಗಾಯಗೊಂಡಿದ್ದಾನೆ. ಆದರೆ ಮೂವರಿಗೂ ಮಾರಣಾಂತಿಕ ಗಾಯಗಳಾಗಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಡ್ರೋನ್ ಮೂಲಕ ಉಗ್ರರನ್ನು ಸಾಗಿಸಲು ಲಷ್ಕರ್ ಪ್ರಯತ್ನ: ಪಂಜಾಬ್‌ನಲ್ಲಿ ಉಗ್ರನ ಇಳಿಸಿರೋ ದೃಶ್ಯ ಸೆರೆ!