Asianet Suvarna News Asianet Suvarna News

ಲವಕುಶರನ್ನು ಮದ್ವೆಯಾದ ಅವಳಿ ಸಹೋದರಿಯರು..!

ಇಲ್ಲೊಂದು ಕಡೆ ಅವಳಿ ಸಹೋದರಿಯರನ್ನು ಮತ್ತೊಂದು ಕುಟುಂಬದ ಅವಳಿ ಸಹೋದರರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ವಿಶೇಷ ಮದುವೆ ನಡೆದಿದೆ.

Special Marriage in West Bengal, tween sister marry tween brother in East Burdwan akb
Author
First Published Dec 8, 2022, 12:06 PM IST

ಪಶ್ಚಿಮ ಬಂಗಾಳ: ಅವಳಿಗಳಾಗಿ ಹುಟ್ಟಿದವರಿಗೆ ಮದುವೆ ಮಾಡಿಸುವುದು ಬಲು ಕಷ್ಟದ ಕೆಲಸ ಏಕೆಂದರೆ. ದೇಹ ಬೇರಾದರೂ ಅವರ ಮನಸ್ಸುಗಳು ಒಂದೇ. ಹಾಕುವ ಬಟ್ಟೆ ಚಪ್ಪಲಿಯಿಂದ ಹಿಡಿದು ತಿನ್ನುವ ಆಹಾರದ, ನಡೆ ನುಡಿ ಕೂಡ ಒಂದೇ ರೀತಿ ಇರುತ್ತದೆ ಎಂಬುದು ಅನೇಕರ ಅಭಿಪ್ರಾಯ. (ಬಹುಶ: ಅವರಲ್ಲೂ ವಿಭಿನ್ನತೆ ಇರಬಹುದು). ಆದರೆ ಬಹುತೇಕರು ಅವಳಿಗಳು ಎಂದ ಕೂಡಲೇ ಇದೇ ರೀತಿ ಯೋಚನೆ ಮಾಡುತ್ತಾರೆ. ಇದೇ ಕಾರಣಕ್ಕೆ ಅವಳಿಗಳಾಗಿ ಹುಟ್ಟಿದವರಿಗೆ ಜೀವನ ಸಂಗಾತಿಯನ್ನು ಹುಡುಕುವುದು ಬಲು ಕಷ್ಟದ ಕೆಲಸ. ಅನೇಕ ಅವಳಿಗಳು ಅಥವಾ ಅವರ ಮನೆಯವರು ತಮ್ಮಂತೆ ಅವಳಿಗಳಿಗೆ ಹುಡುಕುವುದುಂಟು. ಕೆಲವರು ಅವಳಿಗಳು ಸಿಗದೇ ಹೋದಾಗ ಒಂದೇ ಮನೆಯಲ್ಲಿರುವ ಸಹೋದರ/ಸಹೋದರಿಯರ ಜೊತೆ ಅವಳಿಗಳ ಮದುವೆ ಮಾಡಿಸುತ್ತಾರೆ. ಕೆಲ ದಿನಗಳ ಹಿಂದಷ್ಟೇ ಅವಳಿ ಸಹೋದರರು ಒಬ್ಬರನ್ನೇ ಮದುವೆಯಾಗಿ ನಂತರ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಸಂಕಷ್ಟಕ್ಕೀಡಾದ ಘಟನೆ ಮುಂಬೈನಲ್ಲಿ ನಡೆದಿತ್ತು.

ಈ ಮಧ್ಯೆ ಇಲ್ಲೊಂದು ಕಡೆ ಅವಳಿ ಸಹೋದರಿಯರನ್ನು ಮತ್ತೊಂದು ಕುಟುಂಬದ ಅವಳಿ ಸಹೋದರರಿಗೆ ಕೊಟ್ಟು ಮದುವೆ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ವಿಶೇಷ ಮದುವೆ ನಡೆದಿದೆ. ಇಬ್ಬರು ಅವಳಿ ವರರೊಂದಿಗೆ ಇಬ್ಬರು ಅವಳಿ ವಧುಗಳ ಮದ್ವೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ಪೂರ್ವ ಬರ್ದಾವ್ ಪ್ರದೇಶದ ಕುರ್ಮುನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಅವಳಿ ಸಹೋದರಿಯರಾದ ಅರ್ಪಿತಾ (Arpita) ಹಾಗೂ ಪರಮಿತಾ (Paramita) ಅವರು ಅವಳಿ ಸಹೋದರರಾದ ಲವ ಹಾಗೂ ಕುಶ ಜೊತೆ ಮದುವೆಯಾಗಿದ್ದಾರೆ. ಬಾಲ್ಯದಿಂದಲೂ ಈ ಅವಳಿ ಸಹೋದರಿಯರು ಒಂದು ಕ್ಷಣವೂ ಒಬ್ಬರನ್ನೊಬ್ಬರು ಬಿಟ್ಟು ದೂರಾಗಿದ್ದೆ ಇಲ್ಲವಂತೆ, ಹೀಗಾಗಿಯೇ ಮದುವೆಯಾದರೆ ಅವಳಿಗಳನ್ನೇ ಮದುವೆಯಾಗುವುದು ಎಂದು ಅವರು ನಿರ್ಧರಿಸಿದ್ದರು. ಇಬ್ಬರು ಶಿಕ್ಷಣವನ್ನು ಜೊತೆ ಜೊತೆಯಾಗಿಯೇ ಪೂರೈಸಿದ್ದು, ಒಂದೇ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಈಗ ಅವಳಿ ಸಹೋದರರನ್ನು ಮದ್ವೆಯಾಗಿರುವುದರಿಂದ ತಮ್ಮ ಆಸೆ ಪೂರೈಸಿದೆ ಎಂದು ಅವರು ಹೇಳಿಕೊಂಡಿದ್ದಾರೆ. 

Special Marriage in West Bengal, tween sister marry tween brother in East Burdwan akb

ಈ ಅವಳಿ ಸಹೋದರಿಯರ ತಂದೆ ಗೌರ್‌ಚಂದ್ರ ಸಂತ್ರ (ourchandra Santra) ಅವರು ಸ್ಥಳೀಯ ಪಾರ್ಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆಯಾಗುವುದಾದರೆ ಅವಳಿಗಳನ್ನೇ ಎಂದು ಮಕ್ಕಳು ಹೇಳಿದ ಹಿನ್ನೆಲೆಯಲ್ಲಿ ಅವರು ಅಂತಹ ಅವಳಿ ವರರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಕುರ್ಮು ಗ್ರಾಮದಲ್ಲಿ (Kurmun village) ಲವ್ ಪಕ್ರೆ (Luv Pakre) ಹಾಗೂ ಕುಶ್ ಪಕ್ರೆ (Kush Pakre) ಸಿಕ್ಕಿದ್ದು, ಆ ಸಂದರ್ಭದಲ್ಲಿ ಲವ್ ಕುಶ್ ಅವರ ಕುಟುಂಬವೂ ಹುಡುಗಿಯರಿಗಾಗಿ ಹುಡುಕಾಟ ನಡೆಸುತ್ತಿತ್ತು. ಈ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ಮಾತುಕತೆ ನಡೆಸಿ ಮದುವೆ ನಿಗದಿ ಮಾಡಿವೆ. 

ಅವಳಿ ಸಹೋದರಿಯರನ್ನು ಮದುವೆಯಾಗಿದ್ದ ಯುವಕನ ವಿರುದ್ಧ ಕೇಸ್

ಇನ್ನು ಗೌರ್‌ಚಂದ್ರ ಅವರು ಕೆಲಸ ಮಾಡುವ ಸಂಸ್ಥೆಯಲ್ಲಿಯೇ ಈ ಲವ್ ಹಾಗೂ ಕುಶ್ ಕೆಲಸ ಮಾಡುತ್ತಿದ್ದಾರೆ. ಅವರು ಕೂಡ ತಮಗೆ ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಅರ್ಪಿತಾ ಪರ್ಮಿತಾ ಅವರ ಸಂಬಂಧ ಬರುತ್ತಿದ್ದಂತೆ ಅವು ಕೊಂಚವೂ ತಡ ಮಾಡದೇ ಮದುವೆಗೆ ಸಜ್ಜಾಗಿದ್ದಾರೆ. ಡಿಸೆಂಬರ್ 5 ರಂದು ಈ ವಿಶೇಷ ಮದುವೆ ನಡೆದಿದೆ. ಇನ್ನು ಮದುವೆಯಲ್ಲಿ ವರರು (twin grooms) ನಿಲ್ಲಿ ಬಣ್ಣದ ಕುರ್ತಾ ಧರಿಸಿದ್ದರೆ, ವಧುಗಳು ಒಂದೇ ರೀತಿಯ ಸೀರೆ ಹಾಗೂ ಆಭರಣವನ್ನು ಧರಿಸಿದ್ದರು.  
ಒಬ್ಬರೊಬ್ಬರನ್ನು ಬಿಟ್ಟಿರೋದು ಕಷ್ಟ ಅಂತೆ, ಒಬ್ಬನನ್ನೇ ಮದುವೆಯಾದ ಅವಳಿ..!

Follow Us:
Download App:
  • android
  • ios