ಹೊಸದಾಗಿ ಆಯ್ಕೆಯಾದ ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ (AI) ನಿರ್ಮಿತ ಡೀಪ್‌ಫೇಕ್‌ ವೀಡಿಯೊಗಳ ಬಳಕೆಯ ಮೇಲೆ ನಿಯಂತ್ರಣ ಹೇರಲು ಡಿಜಿಟಲ್‌ ಇಂಡಿಯಾ ಬಿಲ್‌ ಅನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿದೆ. 

ನವದೆಹಲಿ (ಜೂ.15): ಹೊಸದಾಗಿ ಚುನಾಯಿತರಾದ ನರೇಂದ್ರ ಮೋದಿ ಸರ್ಕಾರವು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಎಐ ನಿರ್ಮಿತ ಡೀಪ್‌ಫೇಕ್‌ ವಿಡಿಯೋಗಳು ಇತರ ಆನ್‌ಲೈಲ್‌ ಕಂಟೆಂಟ್‌ಗಳ ಅಪಾಯಗಳ ಮೇಲೆ ನಿಯಂತ್ರಣ ಹೇರಲು ಹೊಸ ಮಸೂದೆಯನ್ನು ತರಲು ಸಿದ್ಧತೆ ನಡೆಸಿದೆ. ಡಿಜಿಟಲ್ ಇಂಡಿಯಾ ಬಿಲ್ ಎಂದು ಹೆಸರಿಸಲಾದ ಈ ಮಸೂದೆಯು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಲು ಉತ್ತಮ ಮಾರ್ಗಗಳನ್ನು ಅನ್ವೇಷಿಸುತ್ತದೆ ಎಂದು ಮೂಲಗಳು ತಿಳಿಸಿವೆ, ಸಂಸತ್ತಿನಲ್ಲಿ ಮಸೂದೆಯನ್ನು ಪರಿಚಯಿಸುವ ಮೊದಲು ಸರ್ಕಾರವು ಸರ್ವ ಪಕ್ಷಗಳ ಒಮ್ಮತವನ್ನು ಪಡೆಯಲು ಪ್ರಯತ್ನಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಯೂಟ್ಯೂಬ್ ಸೇರಿದಂತೆ ವಿವಿಧ ಆನ್‌ಲೈನ್ ಮಾಧ್ಯಮಗಳಲ್ಲಿ ವೀಡಿಯೊಗಳನ್ನು ನಿಯಂತ್ರಿಸಲು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಕಾನೂನು ಕೂಡ ಇರುತ್ತದೆ.

ಯೂಟ್ಯೂಬ್ ಸೇರಿದಂತೆ ವಿವಿಧ ಆನ್‌ಲೈನ್ ಮಾಧ್ಯಮಗಳಲ್ಲಿ ವೀಡಿಯೊಗಳನ್ನು ನಿಯಂತ್ರಿಸಲು ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಸೂದೆ ಕೂಡ ಇರಲಿದೆ. 18ನೇ ಲೋಕಸಭೆಯ ಮೊದಲ ಅಧಿವೇಶನವಾಗಿರುವ ಮುಂಬರುವ ಸಂಸತ್ತಿನ ಅಧಿವೇಶನವು ಜೂನ್ 24 ರಂದು ಪ್ರಾರಂಭವಾಗಿ ಜುಲೈ 3 ರಂದು ಮುಕ್ತಾಯಗೊಳ್ಳಲಿದೆ. ನಂತರ, ಮಾನ್ಸೂನ್ ಅಧಿವೇಶನವು ಜುಲೈ 22 ರಂದು ಪ್ರಾರಂಭವಾಗಲಿದೆ ಮತ್ತು ಆಗಸ್ಟ್ 9 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ.

ಕಳೆದ ವರ್ಷದ ಆರಂಭದಲ್ಲಿ, ಆಗಿನ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಸೂದೆಯ ಬಗ್ಗೆ ಸುಳಿವು ನೀಡಿದ್ದರು, ಮುಂದಿನ ಸರ್ಕಾರವು ಅದನ್ನು ಜಾರಿಗೊಳಿಸಲು ಮತ್ತು ಕಾರ್ಯಗತಗೊಳಿಸಲು ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದರು.

ಬೆತ್ತಲಾದರೂ ಬರಲ್ಲ ಇಷ್ಟು ಡಿಮಾಂಡ್​! ಆಲಿಯಾ ಫುಲ್​ಡ್ರೆಸ್​ ಡೀಪ್​ಫೇಕ್​ ವಿಡಿಯೋಗೆ 2 ಕೋಟಿ ವೀಕ್ಷಣೆ

ದುರದೃಷ್ಟವಶಾತ್‌, ಚುನಾವಣೆಗೂ ಮುನ್ನ, ಲೋಕಸಭೆಯ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸೋದಿಲ್ಲ. ಏಕೆಂದರೆ ನಮಗೆ ಖಂಡಿತವಾಗಿಯೂ ಸಾಕಷ್ಟು ಸಮಾಲೋಚನೆ ಮತ್ತು ಚರ್ಚೆಯ ಅಗತ್ಯವಿದೆ. ಆದರೆ ಶಾಸನ ಯಾವುದು, ಏನು ಎಂಬುದರ ಕುರಿತು ನಾವು ಖಂಡಿತವಾಗಿಯೂ ಮಾರ್ಗಸೂಚಿಯನ್ನು ಹೊಂದಿದ್ದೇವೆ. ನಮ್ಮ ನೀತಿ ಗುರಿಗಳು ಮತ್ತು ಸುರಕ್ಷತೆ ಮತ್ತು ವಿಶ್ವಾಸಕ್ಕಾಗಿ ನೀತಿ ತತ್ವಗಳು ಏನು ಅನ್ನೋದನ್ನು ಅರ್ಥಮಾಡಿಕೊಳ್ಳಬೇಕಿದೆ ”ಎಂದು ಫೈನಾನ್ಷಿಯಲ್ ಎಕ್ಸ್‌ಪ್ರೆಸ್‌ನ ಡಿಜಿಫ್ರಾಡ್ ಮತ್ತು ಸುರಕ್ಷತಾ ಶೃಂಗಸಭೆ 2023 ರಲ್ಲಿ ಚಂದ್ರಶೇಖರ್ ಹೇಳಿದ್ದರು.

ಚುನಾವಣೆ ಮುಗಿದ ಬೆನ್ನಲ್ಲೇ ರಾಜಕೀಯ ನಾಯಕನ ಪೋಸ್ಟ್‌ ಹಂಚಿಕೊಂಡ ನಟಿ ಜ್ಯೋತಿ ರೈ!