ಭಾರತೀಯರಿಗೆ ಇದೊಂದು ಶುಭ ಸುದ್ದಿ, ಇದರಿಂದ ಉದ್ಯೋಗಗಳು ಹೆಚ್ಚಾಗಲಿದೆ.  ಕೇಂದ್ರ ಸರ್ಕಾರ ಯೋಜನೆಯೊಂದನ್ನು ಬಲ ಬರಲಿದೆ.. ಸ್ವದೇಶಿ ರೈಲು ನಿರ್ಮಾಣಕ್ಕೆ ಕೇಂದ್ರ ಚಿಂತನೆ ನಡೆಸಿದೆ. 

ನವದೆಹಲಿ (ಜ.23): ಮೇಕ್‌ ಇನ್‌ ಇಂಡಿಯಾಕ್ಕೆ ಬಲ ತುಂಬುವ ಸಲುವಾಗಿ ಭಾರತೀಯ ರೈಲ್ವೆ, ‘ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು’ಗಳನ್ನು ಸ್ವದೇಶೀಯವಾಗಿ ನಿರ್ಮಿಸಲು ಮುಂದಾಗಿದೆ.

16 ಬೋಗಿಗಳನ್ನು ಒಳಗೊಂಡ 44 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳ ನಿರ್ಮಾಣಕ್ಕೆ ಹೈದರಾಬಾದ್‌ ಮೂಲದ ಮೇಧಾ ಸೆರ್ವೊ ಡ್ರೈವ್ಸ್ ಪ್ರೈವೇಟ್‌ ಲಿಮಿಟೆಡ್‌ಗೆ 2,211 ಕೋಟಿ ರು.ಗಳ ಭಾರತೀಯ ರೈಲ್ವೆ ಶುಕ್ರವಾರ ಟೆಂಡರ್‌ ನೀಡಿದೆ. ಇದರಿಂದಾಗಿ ರೈಲು ನಿರ್ಮಾಣದಲ್ಲಿನ ವಿದೇಶೀ ಅವಲಂಬನೆ ತಪ್ಪಲಿದೆ.

ಇದು ಫ್ಲೈಟ್ ಅಲ್ಲ, ಮೋದಿ ಉದ್ಘಾಟಿಸಲಿರುವ ಭಾರತೀಯ ರೈಲು! ...

ಮೇಕ್‌ ಇಂಡಿಯಾ ಯೋಜನೆಯ ಅಡಿಯಲ್ಲಿ 44 ವಂದೇ ಭಾರತ್‌ ರೀತಿಯ ಹೈಸ್ಪೀಡ್‌ ರೈಲುಗಳ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ. ರೈಲಿನ ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಪೂರೈಕೆ ಸೇರಿದಂತೆ ಶೇ.75ಕ್ಕಿಂತ ಹೆಚ್ಚಿನ ಸ್ವದೇಶಿ ವಸ್ತುಗಳನ್ನು ಬಳಸಿ ರೈಲನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ 5 ವರ್ಷಗಳ ನಿರ್ವಹಣೆಯೂ ಸೇರಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಮೊದಲ 2 ಮಾದರಿಯ ರೈಲುಗಳನ್ನು ಕಂಪನಿ ಮುಂದಿನ 20 ತಿಂಗಳಿನಲ್ಲಿ ಪೂರೈಕೆ ಮಾಡಲಿದೆ. ಒಂದು ವೇಳೆ ಅವು ಯಶಸ್ವಿಯಾದರೆ ಪ್ರತಿ ತ್ರೈಮಾಸಿಕ್ಕೆ ಸರಾಸರಿ 6 ರೈಲುಗಳನ್ನು ಪೂರೈಕೆ ಮಾಡಲಿದೆ.