ಜಗತ್ತಿನಲ್ಲಿಯೇ ಭಾರತದ ರಕ್ಷಣಾ ವ್ಯವಸ್ಥೆಯನ್ನು ಅತ್ಯುತ್ತಮವಾದ ಬಲಿಷ್ಢ ವ್ಯವಸ್ಥೆಯಾಗಿ ರೂಪಿಸಲು ಸರ್ಕಾರ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ವಿಶ್ವದಲ್ಲಿಯೇ ಭಾರತ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸೋ ಬಲಿಷ್ಠ ರಾಷ್ಟ್ರವಾಗಿ ಮೂಡಿ ಬಂದು, ಮುಖ್ಯ ಶಸ್ತ್ರಾಸ್ತ್ರ ಉತ್ಪಾದಕ ರಾಷ್ಟ್ರವಾಗಿ ಬದಲಾಗುವ ದಿನಗಳು ದೂರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ಕಾರ್ಯಪ್ಪ ಮೈದಾನದಲ್ಲಿ ಪ್ರಧಾನಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜನ್ಮ ದಿನದ ಪುಣ್ಯ ಸ್ಮರಣೆಯಂದು ಅವರಿಗೆ ಗೌರವ ಸಲ್ಲಿಸಿ ನಂತರ ಎನ್‌ಸಿಸಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವೈರಸ್‌ನ ಸವಾಲಾಗಿರಲಿ, ಗಡಿಯಲ್ಲಿ ಎದುರಾಗೋ ಸವಾಲಾಗಿರಲಿ ಎಂಥಹಾ ಸಂದರ್ಭವನ್ನೂ ಎದುರಿಸೋಕೆ ಭಾರತ ಸಿದ್ಧವಾಗಿದೆ ಎಂದಿದ್ದಾರೆ.

ನಾಗ್ ಮಿಸೈಲ್ ಪರೀಕ್ಷೆ ಯಶಸ್ವಿ : ಇಲ್ಲಿವೆ ಫೋಟೋಸ್

ಲಸಿಕೆ ತಯಾರಿಯಲ್ಲಿ ನಾವು ಸಂಪೂರ್ಣವಾಗಿ ಸ್ವಾವಲಂಬಿಗಳಾಗಿದ್ದೇವೆ. ಅದೇ ವೇಗದಲ್ಲಿ ನಾವು ನಮ್ಮ ಶಸ್ತ್ರಾಸ್ತ್ರ ಪಡೆಯನ್ನು ಆಧುನೀಕರಣಗೊಳಿಸುತ್ತಿದ್ದೇವೆ. ಇಂದು ಭಾರತದಲ್ಲಿ ಆಧುನಿಕ ಶಸ್ತ್ರಾಸ್ತ್ರ ಮತ್ತು ಮಷಿನ್‌ಗಳು ಲಭ್ಯವಿದೆ ಎಂದಿದ್ದಾರೆ.

ನಿನ್ನೆಯಷ್ಟೇ ಫ್ರಾನ್ಸ್‌ನಿಂದ ಮೂರು ರಫೇಲ್‌ಗಳು ಭಾರತವನ್ನು ತಲುಪಿವೆ. ಯುಎಇ ಮಧ್ಯೆ ಇದಕ್ಕೆ ಏರ್ ಫ್ಯುಯೆಲ್ ತುಂಬಿಸುವ ಕೆಲಸ ಮಾಡಿದೆ. ಇದರಲ್ಲಿ ಸೌದಿ ಅರೆಬಿಯಾ ಮತ್ತು ಗ್ರೀಸ್ ಕೂಡಾ ನೆರವಾಗಿದೆ. ಇದು ಗಲ್ಫ್ ರಾಷ್ಟ್ರಗಳ ಜೊತೆ ಭಾರತದ ಬಲಿಷ್ಠ ಸಂಬಂಧವನ್ನು ತೋರಿಸುತ್ತದೆ ಎಂದಿದ್ದಾರೆ.

ಮೋದಿಗೆ ಈಗ 777 ಪ್ರೊಟೆಕ್ಷನ್; ಮಿಸೈಲ್ ದಾಳಿಯಾದ್ರೂ ಏನೂ ಆಗಲ್ಲ, ಹಾಗಿದೆ ವಿಮಾನದ ಫೀಚರ್ಸ್!

ಶಸ್ತ್ರಾಸ್ತ್ರ ಆಮದು ಮಾಡುವುದರಲ್ಲಿ ಇನ್ನೊಬ್ಬರನ್ನು ಅವಲಂಬಿಸುವುದನ್ನು ಕಡಿಮೆ ಮಾಡುವುದಕ್ಕಾಗಿ ಇದನ್ನು ರಾಷ್ಟ್ರದಲ್ಲಿಯೇ ತಯಾರಿಸಲು ಸರ್ಕಾರ ನಿರ್ಧರಿಸಿದೆ. 100ಕ್ಕೂ ಹೆಚ್ಚು ರಕ್ಷಣಾ ಸಂಬಂಧಿ ಯಂತ್ರೋಪಕರಣಗಳನ್ನು ಭಾರತದಲ್ಲಿಯೇ ತಯಾರಿಸಲು ನಿರ್ಧರಿಸಿದ್ದೇವೆ.

20 ತೇಜಸ್ ಫೈಟರ್ ಜೆಟ್‌ಗಳಿಗಾಗಿ ಏರ್‌ಫೋರ್ಸ್‌ನಿಂದ ಬಂದ ಬೇಡಿಕೆ ಯುದ್ಧಕ್ಕೆ ಸಂಬಂಧಿಸಿದಂತೆ ಕೃತಕ ಬುದ್ಧಿಮತ್ತೆಯಲ್ಲಿ ಇನ್ನಷ್ಟು ಗಮನಸ ಹರಿಸಲು ಪ್ರೋತ್ಸಾಹ ನೀಡಿದಂತಾಗಿದೆ. ಇದು ಭಾರತ ಬಲಿಷ್ಠವಾದ ಶಸ್ತ್ರಾಸ್ತ್ರ ಉತ್ಪಾದಕ ರಾಷ್ಟ್ರವಾಗಿ ಬೆಳೆಯುವಂತೆ ಮಾಡಲಿದೆ ಎಂದಿದ್ದಾರೆ.

ಮಾನ, ಮರ್ಯಾದೆ ಮರೆತ ಬಿಜೆಪಿ ನಾಯಕ: ವೇದಿಕೆಯಲ್ಲಿ ಮಹಿಳೆ ಜೊತೆ ಅಶ್ಲೀಲ ವರ್ತನೆ!

ಭಾರತದ ಶೌರ್ಯ ಮತ್ತು ಸೇವಾ ಸಂಸ್ಕೃತಿ ಪ್ರೋತ್ಸಾಹಿಸಲ್ಪಡುವಲ್ಲಿ ಎನ್‌ಸಿಸಿ ಕೆಡೆಟ್‌ಗಳು ಇರುತ್ತಾರೆ. ಹೀಗೆಯೇ ಪರಿಸರ ಮತ್ತು ನೀರಿನ ಸಂರಕ್ಷಣೆಯ ಕುರಿತ ಪ್ರಾಜೆಕ್ಟ್‌ಗಳಲ್ಲಿಯೂ ಎನ್‌ಸಿಸಿ ಭಾಗವಹಿಸುತ್ತದೆ ಎಂದಿದ್ದಾರೆ. ನಕ್ಸಲಿಸಂ ಮತ್ತು ಮಾವೋಯಿಸಂ ಬಗ್ಗೆ ಮಾತನಾಡಿ, ಈಗ ನಕ್ಸಲಿಸಂ ದೇಶದ ಅತ್ಯಂತ ಕಡಿಮೆ ಭಾಗಕ್ಕೆ ಸೀಮಿತವಾಗಿದೆ. ಇದರಿಂದ ಪ್ರಭಾವಿತರಾಗಿದ್ದ ಯುವಜನರು ಹಿಂಸೆಯ ದಾರಿ ಬಿಟ್ಟು ಮುನ್ನೆಲೆಗೆ ಬಂದು ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ.

ದೇಶಾದ್ಯಂತ 1 ಲಕ್ಷ ಕೆಡೆಟ್‌ಗಳು ಆರ್ಮಿ, ವಾಯುಸೇನೆ, ನೇವಿಯಿಂದ ತರಬೇತಿ ಪಡೆಯುತ್ತಿದ್ದಾರೆ. ಅದರಲ್ಲಿ ಮೂರನೇ ಒಂದು ಭಾಗದಷ್ಟು ಹೆಣ್ಮಕ್ಕಳೇ ಇದ್ದಾರೆ. ತರಬೇತಿಗೆ ಬೇಕಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಮೊದಲು ಒಂದು ಸಿಮುಲೇಟರ್ ನೀಡುತ್ತಿದ್ದಲ್ಲಿ ಈಗ 98ನ್ನು ನೀಡಲಾಗುತ್ತಿದೆ. ಮೈಕ್ರೋ ಸಿಮುಲೇಟರ್ಸ್ 5ರಿಂದ 44ಕ್ಕೆ ಹೆಚ್ಚಾಗಿದೆ ಎಂದಿದ್ದಾರೆ.