ಮಾನ, ಮರ್ಯಾದೆ ಮರೆತ ಬಿಜೆಪಿ ನಾಯಕ: ವೇದಿಕೆಯಲ್ಲಿ ಮಹಿಳೆ ಜೊತೆ ಅಶ್ಲೀಲ ವರ್ತನೆ!
ರಾಜಕೀಯ ಹಾಗೂ ಗ್ಲಾಮರ್ ಜಗತ್ತಿನ ನಡುವಿನ ನಂಟು ಬಹಳ ಆಳವಾಗಿರುತ್ತದೆ. ರಾಜಕೀಯ ಪಕ್ಷದ ನಾಯಕರೆಂದರೆ ಸಮಾಜದಲ್ಲೂ ಒಳ್ಳೆಯ ಹೆಸರಿರುತ್ತದೆ. ಇನ್ನು ಬಿಜೆಪಿ ಪಕ್ಷ ಸಾಮಾನ್ಯವಾಗಿ ಸಂಸ್ಕೃತಿ ಬಗ್ಗೆ ಮಾತನಾಡುತ್ತದೆ. ಆದರೀಗ ಅದೇ ಪಕ್ಷದ ನಾಯಕನ ಅಶ್ಲೀಲ ವರ್ತನೆಯ ವಿಡಿಯೋ ಒಂದು ವೈರಲ್ ಆಗಿದ್ದು, ಪಕ್ಷಕ್ಕೆ ತೀವ್ರ ಮುಜುಗರವುಂಟು ಮಾಡಿದೆ. ಇದನ್ನು ನೋಡಿದ ಬಹುತೇಕ ಮಂದಿ ಪಕ್ಷದ ವಿರುದ್ಧ ಕಿಡಿ ಕಾರಲಾರಂಭಿಸಿದ್ದಾರೆ. ಬಿಜೆಪಿಯ ಗ್ರಾಮೀಣ ಮಂಡಲ ಅಧ್ಯಕ್ಷ ಕೈಲಾಶ್ ಗುರ್ಜರ್ ಮಹಿಳೆಯೊಬ್ಬಳೊಂದಿಗೆ ವೇದಿಕೆಯಲ್ಲೇ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ
ಲಭ್ಯವಾದ ಮಾಹಿತಿ ಅನ್ವಯ ಈ ಘಟನೆ ಜನವರಿ 23ರಂದು ನಡೆದಿದೆ. ಅಂದು ನಡೆದ ಕಾರ್ಯಕ್ರಮವೊಂದರಲ್ಲಿ ಕೈಲಾಶ್ ಗುರ್ಜರ್ ಭಾಗವಹಿಸಿದ್ದರು.
ಚಿತ್ತೋಡ್‌ಗಢದಲ್ಲಿ ಮದುವೆ ಕಾರ್ಯಕ್ರಮವೊಂದರ ವಿಡಿಯೋ ಇದು ಎನ್ನಲಾಗಿದೆ. ಇಲ್ಲಿ ಕೈಲಾಶ್ ಗುರ್ಜರ್ ಮಹಿಳೆಯ ಜೊತೆ ಅಶ್ಲೀಲವಾಗಿ ಡಾನ್ಸ್ ಮಾಡಿದ್ದಾರೆ.
ಇನ್ನು ಇಲ್ಲಿ ಈ ನಾಯಕನೊಂದಿಗೆ ಡಾನ್ಸ್ ಮಾಡಿದ ಮಹಿಳೆ ಈರ್ವ ಪ್ರೊಫೆಷನಲ್ ಡಾನ್ಸರ್ ಎನ್ನಲಾಗಿದೆ.
ಇನ್ನು ಈ ವಿಡಿಯೋ ಕುರಿತಾಗಿ ಕೈಲಾಶ್ ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದು ತಮ್ಮ ಕುಟುಂಬದಲ್ಲಿ ನಡೆದ ವಿವಾಹ ಕಾರ್ಯಕ್ರಮ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯಾರೋ ತಮಗಾಗದವರು ರಾಜಕೀಯ ದ್ವೇಷದಿಂದ ಈ ವಿಡಿಯೋ ವೈರಲ್ ಮಾಡಿದ್ದಾರೆ. ಈ ಮೂಲಕ ತನ್ನ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸಿದ್ದಾರೆ ಎಂದು ದೂರಿದ್ದಾರೆ.