ಗುಜರಾತ್‌ ಮೂಲದ ಝೈಡಸ್‌ ಕ್ಯಾಡಿಲಾ ಮಕ್ಕಳಿಗಾಗಿ ಕೋವಿಡ್‌ ಲಸಿಕೆ ಅಭಿವೃದ್ಧಿ ಶೀಘ್ರದಲ್ಲಿಯೇ 12-18 ವಯೋಮಾನದ ಮಕ್ಕಳಿಗೆ ‘ಝೈಕೋವ್‌-ಡಿ’ ಲಸಿಕೆ  ಕೇಂದ್ರ ಸರ್ಕಾರದಿಂದ ದೆಹಲಿ ಹೈಕೋರ್ಟಿಗೆ ಮಾಹಿತಿ 

ನವದೆಹಲಿ (ಜು.17): ಗುಜರಾತ್‌ ಮೂಲದ ಝೈಡಸ್‌ ಕ್ಯಾಡಿಲಾ ಮಕ್ಕಳಿಗಾಗಿ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲಿಯೇ 12-18 ವಯೋಮಾನದ ಮಕ್ಕಳಿಗೆ ‘ಝೈಕೋವ್‌-ಡಿ’ ಲಸಿಕೆ ಲಭ್ಯವಾಗಬಹುದು ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟಿಗೆ ಶುಕ್ರವಾರ ತಿಳಿಸಿದೆ.

39 ಕೋಟಿ ಮೈಲಿಗಲ್ಲು ದಾಟಿದ ಭಾರತದ ಕೋವಿಡ್ ಲಸಿಕಾ ಅಭಿಯಾನ!

‘ಕ್ಯಾಡಿಲಾ 12-18 ವರ್ಷದ ಮಕ್ಕಳ ಮೇಲಿನ ಲಸಿಕೆ ಪ್ರಯೋಗವನ್ನು ಪೂರ್ಣಗೊಳಿಸಿದೆ. ಆದರೆ ಬಳಕೆಗೆ ಡಿಸಿಜಿಐ ಅನುಮತಿ ಮಾತ್ರ ಬೇಕಿದೆ’ ಎಂದು ತಿಳಿಸಿದೆ. ಮೇ.12ರಂದು ಭಾರತೀಯ ಔಷಧ ಮಹಾನಿರ್ದೇಶನಾಲಯ 2-18 ವರ್ಷದ ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಿತ್ತು. 

ಮುಂದಿನ ತಿಂಗಳು ಲಸಿಕೆಗೆ ರಾಜ್ಯದಲ್ಲಿ ತೀವ್ರ ಅಭಾವ?

ಜು.1ರಿಂದ ಝೈಡಸ್‌ ಕ್ಯಾಡಿಲಾ ತುರ್ತು ಬಳಕೆಗೆ ಅನುಮತಿ ಕೇಳಿತ್ತು. ಕೆಲವೇ ದಿನಗಳಲ್ಲಿ ಡಿಸಿಜಿಐ ಅನುಮೋದನೆ ನೀಡಬಹುದು. ಇದರಿಂದಾಗಿ ಭಾರತದಲ್ಲಿ ಕೋವಿಡ್‌ ವಿರುದ್ಧದ 5ನೇ ಲಸಿಕೆಯೂ ಲಭ್ಯವಾದಂತಾಗುತ್ತದೆ. ಅನುಮೋದನೆ ದೊರೆತರೆ ಆಗಸ್ಟ್‌-ಸೆಪ್ಟೆಂಬರ್‌ ವೇಳೆಗೆ ಲಸಿಕೆ ಪೂರೈಕೆಯಾಗುವ ಸಾಧ್ಯತೆ ಇದೆ.