Asianet Suvarna News Asianet Suvarna News

39 ಕೋಟಿ ಮೈಲಿಗಲ್ಲು ದಾಟಿದ ಭಾರತದ ಕೋವಿಡ್ ಲಸಿಕಾ ಅಭಿಯಾನ!

  • ಕೊರೋನಾ ವೈರಸ್ ನಿಯಂತ್ರಣಕ್ಕೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ
  • 39 ಕೋಟಿ ದಾಟಿದ ಭಾರತದ ಲಸಿಕಾ ಡೋಸ್ ಸಂಖ್ಯೆ
  • ಕಳೆದ 24 ಗಂಟೆಲ್ಲಿ 34 ಲಕ್ಷ ಲಸಿಕೆ ಡೋಸ್ ವಿತರಣೆ
India administered over 39 crore doses of Covid vaccine Health Ministry report ckm
Author
Bengaluru, First Published Jul 15, 2021, 8:32 PM IST

ನವದೆಹಲಿ(ಜು.15): ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದ ಒಂದು ಹಂತದ ಯಶಸ್ಸು ಸಾಧಿಸಿದೆ. ಆದರೆ ಆತಂಕ, ಕೊರೋನಾ ಅಲೆಗಳ ಭೀತಿ ಇನ್ನೂ ಮುಗಿದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಜೂನ್ 21 ರಿಂದ ಹೊಸ ಲಸಿಕಾ ನೀತಿ ಜಾರಿಗೊಳಿಸಿದೆ. ಈ ಮೂಲಕ ದೇಶದ ಮೂಲೆ ಮೂಲೆಗೂ ಲಸಿಕೆ ಪೂರೈಕೆ ಜೊತೆಗೆ ವಿತರಣೆ ಮಾಡುತ್ತಿದೆ. ಇದರ ಪರಿಣಾಮ ಭಾರತದಲ್ಲಿ ಕೋವಿಡ್ -19 ಲಸಿಕಾ ವ್ಯಾಪ್ತಿ 39 ಕೋಟಿ ಮೈಲಿಗಲ್ಲು ದಾಟಿದೆ. 

ಇಂಡೋನೇಷ್ಯಾ ಏಷ್ಯಾದ ಕೋವಿಡ್ ಹಾಟ್‌ಸ್ಪಾಟ್‌!

ಇಂದು ಬೆಳಗ್ಗೆ ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ ಇದುವರೆಗೆ ದೇಶದಲ್ಲಿ 39,13,40,491 ಲಸಿಕಾ ಡೋಸ್ ನೀಡಲಾಗಿದೆ.  ಕಳೆದ 24 ಗಂಟೆಗಳ ಅವಧಿಯಲ್ಲಿ 34,97,058  ಡೋಸ್ ಲಸಿಕೆಗಳನ್ನು ನೀಡಲಾಗಿದೆ.  

ಹೆಚ್ಚಿನ ಲಸಿಕೆಗಳ ಲಭ್ಯತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಲಭ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತಿದ್ದು ಅವು ಉತ್ತಮವಾಗಿ ಯೋಜನೆಯನ್ನು ಸಕ್ರಿಯಗೊಳಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಲಸಿಕೆ ಅಭಿಯಾನವನ್ನು ಹೆಚ್ಚಿಸಲಾಗಿದೆ.

ಕೋವಿಡ್‌ ನಿಯಮ ಉಲ್ಲಂಘನೆಗೆ ಅಧಿಕಾರಿಗಳ ಹೊಣೆ ಮಾಡಿ: ಕೇಂದ್ರ

ದೇಶದಲ್ಲಿ ಸಾಂಕ್ರಾಮಿಕ ಆರಂಭವಾದ ದಿನದಿಂದ ಒಟ್ಟು 3,01,43,850  ಸೋಂಕಿತ ಜನರು ಕೋವಿಡ್ -19ರಿಂದ ಗುಣಮುಖರಾಗಿದ್ದರೆ, ಕಳೆದ 24 ಗಂಟೆಗಳ ಅವಧಿಯಲ್ಲಿ 39,130 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆಯ ಪ್ರಮಾಣ ಶೇ.97.28 ಆಗಿದೆ. ಇದು ಸುಸ್ಥಿರ ಚೇತರಿಕೆಯ ಪ್ರವೃತ್ತಿ ತೋರಿದೆ.   

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,806 ಹೊಸ ದೈನಿಕ ಪ್ರಕರಣಗಳು ವರದಿಯಾಗಿವೆ. ಸತತ 18ನೇ ದಿನವೂ 50 ಸಾವಿರಕ್ಕಿಂತಲೂ ಕಡಿಮೆ ಹೊಸ ದೈನಿಕ ಪ್ರಕರಣ ವರದಿಯಾಗಿದೆ. ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸಂಘಟಿತ ಪ್ರಯತ್ನದ ಫಲವಾಗಿದೆ.

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 4,32,041 ಆಗಿದ್ದು, ಈಗ ಸಕ್ರಿಯ ಪ್ರಕರಣಗಳು ಒಟ್ಟು ದೃಢಪಟ್ಟ ಪ್ರಕರಣಗಳ ಶೇ.1.39 ಮಾತ್ರ ಆಗಿದೆ. ದೇಶದಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ, ಒಟ್ಟು 19,43,488 ಪರೀಕ್ಷೆಗಳನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ನಡೆಸಲಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ ಈವರೆಗೆ 43.80 ಕೋಟಿ ಪರೀಕ್ಷೆ (43,80,11,958) ನಡೆಸಲಾಗಿದೆ

ಒಂದು ಕಡೆ ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ಹೆಚ್ಚಿಸಲಾಗಿದ್ದು, ಸಾಪ್ತಾಹಿಕ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ನಿರಂತರ ಕುಸಿತ ಕಾಣುತ್ತಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ ಶೇ.2.21ರಷ್ಟಿದ್ದರೆ, ದೈನಂದಿನ ಪಾಸಿಟಿವಿಟಿ ದರವು ಇಂದು ಶೇ.2.15ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 24 ದಿನಗಳಿಂದ ಶೇ.3ಕ್ಕಿಂತ ಕಡಿಮೆಯಿದೆ ಮತ್ತು ಈಗ ಸತತ 38 ದಿನಗಳವರೆಗೆ ಶೇ. 5 ಕ್ಕಿಂತಲೂ ಕಡಿಮೆಯಾಗಿದೆ.

Follow Us:
Download App:
  • android
  • ios