Asianet Suvarna News Asianet Suvarna News

ಆಕ್ರೋಶ ಶಮನಕ್ಕೆ ಸೋನಿಯಾ ಪ್ಲಾನ್‌; 3 ಸಮಿತಿ ರಚನೆ: ಬಂಡೆದ್ದವರಿಗೂ ಸ್ಥಾನ!

ಆಕ್ರೋಶ ಶಮನಕ್ಕೆ ಸೋನಿಯಾ ಪ್ಲಾನ್‌; 3 ಸಮಿತಿ ರಚನೆ: ಬಂಡೆದ್ದ 5 ಜನರಿಗೂ ಸ್ಥಾನ| ಆರ್ಥಿಕತೆ, ವಿದೇಶಾಂಗ, ಭದ್ರತೆ ಕುರಿತಾದ ಚರ್ಚೆಗಾಗಿ ಕಾಂಗ್ರೆಸ್‌ ಸಮಿತಿ

Sonia Gandhi sets up panel on economic foreign affairs and national security Manmohan Singh part of all three pod
Author
Bangalore, First Published Nov 21, 2020, 3:25 PM IST

ನವದೆಹಲಿ(ನ.21): ಬಿಹಾರ ಮತ್ತು ಇತರ ಉಪಚುನಾವಣೆಗಳಲ್ಲಿ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಸಿಡಿದೆದ್ದಿರುವ ಬಂಡಾಯ ನಾಯಕರ ಅಸಮಾಧಾನ ಭುಗಿಲೆದ್ದಿರುವ ಹೊತ್ತಿನಲ್ಲೇ ರಾಷ್ಟ್ರೀಯ ಮಹತ್ವದ ಮೂರು ವಿಷಯಗಳ ಕುರಿತಂತೆ ಪಕ್ಷದೊಳಗೆ 3 ಆಂತರಿಕ ಸಮಿತಿ ರನೆ ಮಾಡಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ದೆಹಲಿಯಲ್ಲಿ ಮಾಲಿನ್ಯ ಹಿನ್ನೆಲೆ: ರಾಹುಲ್‌ ಜೊತೆ ಸೋನಿಯಾ ಗೋವಾಕ್ಕೆ

ರಾಷ್ಟ್ರೀಯ ಭದ್ರತೆ, ವಿದೇಶಾಂಗ ವ್ಯವಹಾರ ಮತ್ತು ಆರ್ಥಿಕತೆಯ ವಿಚಾರಗಳಲ್ಲಿ ಪಕ್ಷದ ನಿಲುವು ಏನಾಗಿರಬೇಕು ಎಂಬ ಬಗ್ಗೆ ಪರಿಶೀಲನೆ ಮತ್ತು ಚರ್ಚೆಗಾಗಿ 3 ಪ್ರತ್ಯೇಕ ಸಮಿತಿ ರಚಿಸಲಾಗಿದೆ. ಮೂರಕ್ಕೂ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅಧ್ಯಕ್ಷರಾಗಿರಲಿದ್ದಾರೆ. ವಿಶೇಷವೆಂದರೆ ಇತ್ತೀಚೆಗೆ ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಪಿ.ಚಿದಂಬರಂ, ಆನಂದ ಶರ್ಮಾ, ಶಶಿ ತರೂರ್‌, ಗುಲಾಂ ನಬಿ ಆಜಾದ್‌ ಮತ್ತು ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಯಿಲಿ ಅವರಿಗೆ ಸದಸ್ಯರಾಗಿ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ ಬಂಡಾಯಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ಆರ್ಥಿಕತೆ: ಮನಮೋಹನ್‌ ಸಿಂಗ್‌, ಮಾಜಿ ಸಚಿವರಾದ ಪಿ.ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ, ಜೈರಾಮ್‌ ರಮೇಶ್‌ ಮತ್ತು ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ್‌ ಸಿಂಗ್‌

'ಆರ್ಥಿಕ ಹಿಂಜರಿತದ ಕಡೆ ಭಾರತ' ರಾಹುಲ್ ಹೇಳಿದ ಕತೆ!

ವಿದೇಶಾಂಗ ವ್ಯವಹಾರ: ಮನಮೋಹನ್‌ ಸಿಂಗ್‌, ಮಾಜಿ ಸಚಿವರಾದ ಆನಂದ್‌ ಶರ್ಮಾ, ಶಶಿ ತರೂರ್‌, ಸಲ್ಮಾನ್‌ ಖುರ್ಷಿದ್‌ ಮತ್ತು ಒಡಿಶಾ ಸಂಸದ ಸಪ್ತಗಿರಿ ಶಂಕರ ಉಲಕಾ.

ರಾಷ್ಟ್ರೀಯ ಭದ್ರತೆ: ಮನಮೋಹನ್‌ ಸಿಂಗ್‌, ರಾಜ್ಯಸಭೆ ವಿಪಕ್ಷ ನಾಯಕ ಗುಲಾಮ್‌ ನಬಿ ಆಜಾದ್‌, ಮಾಜಿ ಸಚಿವ ವೀರಪ್ಪ ಮೊಯ್ಲಿ, ಸಂಸದ ವಿನ್ಸೆಂಟ್‌ ಎಚ್‌. ಪಾಲಾ, ಪಾಂಡೀಚೇರಿ ಮಾಜಿ ಸಿಎಂ ವಿ.ವೈಥಿಲಿಂಗಮ್‌.

Follow Us:
Download App:
  • android
  • ios