ನವದೆಹಲಿ( ನ. 18) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮಾಡಿದ್ದಾರೆ. ಈ  ಸಾರಿ ಆರ್ಥಿಕ ವಿಚಾರ ಇಟ್ಟುಕೊಂಡು ಟೀಕಾ ಪ್ರಹಾರ ಮಾಡಿದ್ದಾರೆ.

ಭಾರತದ ಅರ್ಥವ್ಯವಸ್ಥೆ ಇತಿಹಾಸದಲ್ಲಿ ಮೊದಲು ಎಂಬಂತೆ ಆರ್ಥಿಕ ಹಿಂಜರಿತದ ಕಡೆ ಸಾಗುತ್ತಿದೆ ಎಂಬ ವರದಿಗಳು ಬಂದ ನಂತರ ರಾಹುಲ್ ಟೀಕಾ ಪ್ರಹಾರ ನಡೆಸಿದ್ದಾರೆ.  ಮಾಧ್ಯಮಗಳ ವರದಿಯನ್ನು ಸಾಕ್ಷಿ ರೀತಿ ನೀಡಿದ್ದಾರೆ.

'ರಾಹುಲ್ ಭವಿಷ್ಯಕ್ಕಾಗಿ ಸಿಂಗ್‌ಗೆ ಪಟ್ಟಕಟ್ಟಿದ್ದ ಸೋನಿಯಾ'

ನಿರಂತರವಾಗಿ ಎರಡನೇ ತ್ರೈಮಾಸಿಕದಲ್ಲಿಯೂ ಭಾರತದ ಅರ್ಥವ್ಯವಸ್ಥೆ ಕುಸಿತ ಕಂಡಿದೆ.  ಆರ್ಥಿಕ ತಜ್ಞರು ಸೇರಿದಂತೆ ಮೈಕಲ್ ಪಾತ್ರಾ ಆರ್ಥಿಕ ಕುಸಿತದ ಎಚ್ಚರಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಹಲವು ಕ್ರಮಗಳನ್ನು ಟೀಕಿಸುತ್ತಲೇ ಬಂದಿದ್ದಾರೆ.  ನೋಟ್ ಬ್ಯಾನ್, ಜಿಎಸ್‌ಟಿಯಂಥ ನಿರ್ಧಾರಗಳು ದೇಶವನ್ನು ಅಧೋಗತಿಗೆ ದೂಡಿದವು ಎಂಬುದು ಅವರ ಪ್ರಮುಖ ಆರೋಪ