ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಇಟಲಿಯಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

ನವದೆಹಲಿ (ಆ. 31): ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೊ ಶನಿವಾರ ಇಟಲಿಯ ತಮ್ಮ ಮನೆಯಲ್ಲಿ ನಿಧನರಾದರು. ಅವರ ಅಂತಿಮ ಸಂಸ್ಕಾರವನ್ನು ಮಂಗಳವಾರ ನೆರವೇರಿಸಲಾಯಿತು ಎಂದು ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. 'ಸೋನಿಯಾ ಗಾಂಧಿಯವರ ತಾಯಿ, ಪಾವೊಲಾ ಮೈನೋ ಅವರು 27ನೇ ಆಗಸ್ಟ್ 2022 ರಂದು ಶನಿವಾರ ಇಟಲಿಯಲ್ಲಿರುವ ಅವರ ಮನೆಯಲ್ಲಿ ನಿಧನರಾದರು. ಮಂಗಳವಾರ ಅವರ ಅಂತ್ಯಕ್ರಿಯೆ ನಡೆಯಿತು," ಎಂದು ರಮೇಶ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಸೋನಿಯಾ ಗಾಂಧಿ ಅವರ ತಾಯಿ 90ರ ಹರೆಯದಲ್ಲಿದ್ದರು. ಕಾಂಗ್ರೆಸ್ ಮುಖ್ಯಸ್ಥರು ಆಗಸ್ಟ್ 23 ರಂದು ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಭೇಟಿ ಮಾಡಲು ಇಟಲಿಗೆ ತೆರಳಿದ್ದರು. ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಈಗಾಗಲೇ ಇಟಲಿಯಲ್ಲಿದ್ದು, ಅವರ ಹುಟ್ಟೂರಿಗೆ ಭೇಟಿ ನೀಡಿದ್ದಾರೆ. ಸೋನಿಯಾ ಗಾಂಧಿಯವರ ತಾಯಿಯ ನಿಧನದ ಸುದ್ದಿ ತಿಳಿಯುತ್ತಿದ್ದ ಬೆನ್ನಲ್ಲಿಯೇ, ಕಾಂಗ್ರೆಸ್‌ ಪಕ್ಷದ ನಾಯಕರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಸೋನಿಯಾ ಗಾಂಧಿ ಅವರ ತಾಯಿ ನಿಧನಕ್ಕ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖದ ಸಮಯದಲ್ಲಿ ಸೋನಿಯಾ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.ಸೋನಿಯಾ ಗಾಂಧಿ ಅವರ ತಾಯಿ ನಿಧನಕ್ಕ ನನ್ನ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ದುಃಖದ ಸಮಯದಲ್ಲಿ ಸೋನಿಯಾ ಕುಟುಂಬದ ಜೊತೆ ನಿಲ್ಲುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…

ಕಳೆದ ಕೆಲವು ವರ್ಷಗಳಲ್ಲಿ ರಾಹುಲ್ ಮತ್ತು ಪ್ರಿಯಾಂಕಾ ಹಲವಾರು ಬಾರಿ ತಮ್ಮ ಅಜ್ಜಿಯನ್ನು ಭೇಟಿ ಮಾಡಿದ್ದರು. 2020 ರಲ್ಲಿ, ರಾಹುಲ್ ಗಾಂಧಿ ಅವರ ಆಗಾಗ್ಗೆ ವಿದೇಶಿ ಪ್ರವಾಸಗಳ ಬಗ್ಗೆ ಕೆಲವು ಟೀಕೆಗಳನ್ನು ಎದುರಿಸಿದಾಗ, ಅವರು ಅನಾರೋಗ್ಯದಿಂದ ಬಳಲುತ್ತಿರುವ ಸಂಬಂಧಿಯನ್ನು ಭೇಟಿ ಮಾಡಲು ಇಟಲಿಗೆ ಖಾಸಗಿ ಭೇಟಿಯಲ್ಲಿದ್ದರು ಎಂದು ಪಕ್ಷ ಹೇಳಿತ್ತು.

Scroll to load tweet…