ಗುಜರಾತ್ ಗಲಭೆ ಮಾಸ್ಟರ್‌ಮೈಂಡ್ ಸೋನಿಯಾ ಗಾಂಧಿ, ಬಿಜೆಪಿಯಿಂದ ಶಾಕಿಂಗ್ ಆರೋಪ!
2002ರ ಗುಜರಾತ್ ಗಲಭೆಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಲಾದ ತೀಸ್ತಾ ಸೆಟಲ್ವಾಡ್ ಬಗ್ಗೆ ಬಹಿರಂಗವಾದ ನಂತರ ಬಿಜೆಪಿ ಆಕ್ರಮಣಕಾರಿಯಾಗಿದೆ. ಬಿಜೆಪಿ ವಕ್ತಾರರು ಕಾಂಗ್ರೆಸ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಅಹಮದಾಬಾದ್(ಜು.16): 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯಲ್ಲಿ ಕಾಂಗ್ರೆಸ್ ಸಿಕ್ಕಾಕೊಂಡಿದೆ. ಗಲಭೆಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಲಾದ ತೀಸ್ತಾ ಸೆಟಲ್ವಾಡ್ ಬಗ್ಗೆ ಬಹಿರಂಗವಾದ ನಂತರ ಬಿಜೆಪಿ ಆಕ್ರಮಣಕಾರಿಯಾಗಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಶನಿವಾರ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತೀಸ್ತಾ ಸೆಟಲ್ವಾಡ್, ಮಾಜಿ ಡಿಜಿಪಿ ಆರ್.ಬಿ.ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಗುಜರಾತಿನ ಮೋದಿ ಸರ್ಕಾರವನ್ನು ಸಿಲುಕಿಸಿ ಸರ್ಕಾರವನ್ನು ಬೀಳಿಸುವ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ಶುಕ್ರವಾರ ಸೆಷನ್ಸ್ ನ್ಯಾಯಾಲಯದಲ್ಲಿ ಎಸ್‌ಐಟಿ ತಿಳಿಸಿತ್ತು. ಇವರ ಹಿಂದೆ ದಿವಂಗತ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಕೈವಾಡ ಇರುವುದು ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. ಆದರೆ, ಚುನಾವಣೆ ಕಾರಣಕ್ಕೆ ಈ ಆರೋಪಗಳನ್ನು ಮಾಡುವ ಮೂಲಕ ಪ್ರತಿಪಕ್ಷಗಳ ಪ್ರತಿಷ್ಠೆಗೆ ಧಕ್ಕೆ ತರಲಾಗುತ್ತಿದೆ ಎಂದು ಅಹ್ಮದ್ ಪಟೇಲ್ ಪುತ್ರಿ ಮುಮ್ತಾಜ್ ಪಟೇಲ್ ಹೇಳಿದ್ದಾರೆ.
ಗುಜರಾತ್ ಗಲಭೆಯ ಮಾಸ್ಟರ್ ಮೈಂಡ್ ಸೋನಿಯಾ ಗಾಂಧಿ ಎಂದ ಬಿಜೆಪಿ
ಈ ಬಗ್ಗೆ ಮಾತನಾಡಿದ ಸಂಬಿತ್ ಪಾತ್ರ ಕೆಲವರು ಪಿತೂರಿಯಡಿ ಈ ವಿಷಯವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸುಳ್ಳುಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ ಹೀಗಿರುವಾಗ ಈ ಜನರ ಮೇಲೂ ಕಾನೂನು ಬಿಗಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಈ ಕುರಿತು ಹೇಳಿತ್ತು. 2002ರ ಗುಜರಾತ್ ಗಲಭೆಯಲ್ಲಿ ಷಡ್ಯಂತ್ರದ ಅಡಿಯಲ್ಲಿ ನರೇಂದ್ರ ಮೋದಿಯವರನ್ನು ಅವಮಾನಿಸಲು ಕಾಂಗ್ರೆಸ್ ಯತ್ನಿಸಿದ ರೀತಿ ಹಾಗೂ ಈ ಬಗೆಗಿನ ಸತ್ಯ ಪದರ ಪದರವಾಗಿ ಹೊರಬರುತ್ತಿದೆ. ಅಂದಿನ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸುವ ಸಂಚು ನಡೆಸಲಾಗಿತ್ತು. ಇದರಲ್ಲಿ ಅಮಾಯಕರನ್ನು ಸಿಲುಕಿಸುತ್ತಿದ್ದಾರೆ, ಇದರಲ್ಲಿ ನರೇಂದ್ರ ಮೋದಿಯವರ ಹೆಸರಿದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ರಚನೆಯಾಗಿರುವ ಎಸ್‌ಐಟಿ ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸಿದೆ. ತೀಸ್ತಾ ಸೆಟಲ್ವಾಡ್ ಮತ್ತು ಅವರ ಸಹಚರರು ಮಾನವೀಯತೆಯ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಈ ಅಫಿಡವಿಟ್ ಹೇಳುತ್ತದೆ. ರಾಜಕೀಯ ಉದ್ದೇಶದಿಂದ ಕೆಲಸ ಮಾಡುತ್ತಿದ್ದರು. ಅವರಿಗೆ 2 ಗುರಿ ಇತ್ತು. ಇಂದು ಅಫಿಡವಿಟ್‌ನಲ್ಲಿ ಸೋನಿಯಾ ಗಾಂಧಿಯವರ ಮಾಜಿ ಮುಖ್ಯ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್, ಷಡ್ಯಂತ್ರದ ಮಾಸ್ಟರ್ ಮೈಂಡ್ ಎಂದು ಮುನ್ನೆಲೆಗೆ ಬಂದಿದೆ. ಗುಜರಾತ್ ಮತ್ತು ನರೇಂದ್ರ ಮೋದಿಯವರ ಚಿತ್ರಣವನ್ನು ಅವಮಾನಿಸಲು ಸೋನಿಯಾ ಗಾಂಧಿ ಸಂಚು ರೂಪಿಸಿದ್ದಾರೆ ಎಂದೂ ಪಾತ್ರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಪ್ರಚಾರಕ್ಕೆ ಹಣ ಹಂಚಿಕೆ
ಇದಾದ ನಂತರ ಎಷ್ಟು ಕೋಟಿ ರೂಪಾಯಿ ಹಂಚಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಸಂಬಿತ್ ಪಾತ್ರ ಆರೋಪಿಸಿದರು. ಸೋನಿಯಾ ಗಾಂಧಿ ಅವರು ತೀಸ್ತಾ ಸೆಟಲ್ವಾಡ್ ಅವರನ್ನು ನರೇಂದ್ರ ಮೋದಿ ಅವರನ್ನು ಅವಮಾನಿಸಲು ಮತ್ತು ಮಾನಹಾನಿ ಮಾಡಲು ಬಳಸಿಕೊಂಡರು ಮತ್ತು ರಾಹುಲ್ ಗಾಂಧಿಯನ್ನು ಪ್ರಚಾರ ಮಾಡಲು ಮಾತ್ರ ಬಳಸಿಕೊಂಡರು. ಮಾಧ್ಯಮಗಳ ಬಂದ ಅಫಿಡವಿಟ್ ಪ್ರಕಾರ ಈ ಕೆಲಸಕ್ಕೆ ಹಣ ನೀಡಲಾಗಿದೆ. ಸೋನಿಯಾ ಗಾಂಧಿ ಅವರು ತೀಸ್ತಾ ಸೆಟಲ್ವಾಡ್ ಅವರಿಗೆ ಮೊದಲ ಕಂತಾಗಿ 30 ಲಕ್ಷ ರೂ. ನಿಡಿದರು. ಅಹ್ಮದ್ ಪಟೇಲ್ ನಮ್ಮೊಂದಿಗೆ ಇಲ್ಲ, ಆದರೆ ಅವರು ಇದಕ್ಕೆಲ್ಲಾ ಸಾಕ್ಷಿಯಾಗಿದ್ದರು. ಈ 30 ಲಕ್ಷಗಳನ್ನು ಆ ಕಾಲದಲ್ಲಿ ಮೊದಲ ಕಂತಾಗಿ ಮಾತ್ರ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಇದನ್ನೂ ತಿಳಿದುಕೊಳ್ಳಿ
ಅಹಮದಾಬಾದ್ ಸೆಷನ್ಸ್ ಕೋರ್ಟ್‌ನಲ್ಲಿ ಎಸ್‌ಐಟಿ ತನ್ನ ಅಫಿಡವಿಟ್‌ನಲ್ಲಿ ಗುಜರಾತ್ ಸರ್ಕಾರದ ಮಾನಹಾನಿ ಮಾಡಲು ತೀಸ್ತಾ 2002 ರಲ್ಲಿ ಕಾಂಗ್ರೆಸ್‌ನಿಂದ ಹಣ ಪಡೆದಿದೆ ಎಂದು ಉಲ್ಲೇಖಿಸಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಕ್ಷಣದ ಸಲಹೆಗಾರ ಅಹ್ಮದ್ ಪಟೇಲ್ ಅವರ ಆದೇಶದ ಮೇರೆಗೆ ಸೆಟಲ್ವಾಡ್ ಅವರಿಗೆ ಒಮ್ಮೆ 5 ಲಕ್ಷ ಮತ್ತು ನಂತರ ಎರಡನೇ ಬಾರಿಗೆ 25 ಲಕ್ಷ ರೂಪಾಯಿ ನೀಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.