ಚೆನ್ನೈ, (ಆ.24) : ನಮ್ಮ ತಂದೆಯ ಆರೋಗ್ಯ ಸದ್ಯ ಸ್ಥಿರವಾಗಿದೆ. ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸದ್ಯ ಅವರಿಗೆ ಐಸಿಯುನಲ್ಲಿ‌ ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ಜನಪ್ರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಪುತ್ರ ಚರಣ್  ಸ್ಪಷ್ಟಪಡಿಸಿದ್ದಾರೆ.

ನಾನು ಅವರನ್ನು ನೋಡಲು ತೆರಳಿದ್ದೆ, ಅವರನ್ನು ನನ್ನನ್ನು ನೋಡಿ ಗುರುತು ಹಿಡಿದರು. ಕೆಲ ಹೊತ್ತು ಮಾತನಾಡಿದೆ. ಅನೇಕರು ಆರೊಗ್ಯ ಚೇತರಿಕೆಗೆ ಪ್ರಾರ್ಥನೆ ಮಾಡಿದ್ರಿ. ಆಸ್ಪತ್ರೆಗೆ ಪ್ರಸಾದ ಕಳುಹಿಸಿದ್ದನ್ನು ಕೇಳಿ ತಂದೆಯವರು ಖುಷಿ ಪಟ್ಟರು ಎಂದು ಹೇಳಿದರು.

ಎಸ್‌ಪಿಬಿ ಆರೋಗ್ಯದ ಬಗ್ಗೆ ವದಂತಿ ಹಬ್ಬಿಸಬೇಡಿ, ನಂಬಲೂಬೇಡಿ: ಪುತ್ರ ಚರಣ್

ಕೊರೋನಾ ಸೋಂಕಿನ ಹಿನ್ನೆಲೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ ಪಿ ಬಾಲಸುಬ್ರಮಣ್ಯಂ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಎಂಜಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಎಸ್ ಪಿ ಬಾಲಸುಬ್ರಮಣ್ಯಂಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.  ಸೋಮವಾರ ಸಂಜೆ  ಅವರ ಆರೋಗ್ಯದ ಕುರಿತು ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ವೆಂಟಿಲೇಟೆರ್ ಮತ್ತು ಎಕ್ಮೋ ಮೆಷಿನ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ . ಜೊತೆಗೆ ನುರಿತ ತಜ್ಞರ ತಂಡ ಎಸ್ ಪಿ ಬಿ ಅವರ ಮೇಲೆ ತೀವ್ರ ನಿಗಾ ವಹಿಸಿದೆ ಎಂದು ತಿಳಿಸಿದೆ.