Asianet Suvarna News Asianet Suvarna News

10ನೇ ತರಗತಿ ಪಾಸಾಗದಿದ್ದರೆ ಮನೆಯಿಂದ ಹೊರ ಹಾಕುವೆ ಎಂದ ತಂದೆಯ ಕೊಲೆ

  • ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಬಾಲಕ
  • ಕೊಲೆ ಮಾಡಿ ಬೆರಳಚ್ಚು ಸಿಗಬಾರದೆಂದು ಕೈ ಸುಟ್ಟುಕೊಂಡ ಬಾಲಕ
  • ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮನೆಯಿಂದ ಹೊರ ಹಾಕುವೆ ಎಂದಿದ್ದ ಅಪ್ಪ
Son kills Father in Madhya Pradesh father told him that Clear class 10 exams or will throw you out akb
Author
Bangalore, First Published Apr 7, 2022, 9:38 AM IST

ಭೋಪಾಲ್(ಏ.7): 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗದಿದ್ದರೆ ಮನೆಯಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿದ ತಂದೆಯನ್ನು 15 ವರ್ಷದ ಮಗನೇ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕ ತಂದೆಯನ್ನು ಕೊಲೆ ಮಾಡಿ ನಂತರ ತನ್ನ ಮನೆಯ ನೆರೆಹೊರೆಯವರು ತನ್ನ ತಂದೆಯನ್ನು ಕೊಂದಿದ್ದಾರೆ ಎಂದು ಹದಿಹರೆಯದ ಹುಡುಗ ಗುನಾ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಕೊಲೆ ನಡೆದಾಗ ಮನೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು ಎಂಬುದು ತನಿಖೆ ವೇಳೆ ಪೊಲೀಸರಿಗೆ ತಿಳಿದಿದೆ. 

ಮಧ್ಯಪ್ರದೇಶದ ಗುನಾ (Guna) ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕನ ತಂದೆ ಅಂಗಡಿಯೊಂದನ್ನು ನಡೆಸುತ್ತಿದ್ದರು. ಮಗ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು, ಪರೀಕ್ಷೆ ಚೆನ್ನಾಗಿ ಬರೆಯದಿದ್ದರೆ ಮನೆಯಿಂದ ಹೊರಗೆಸೆಯುವುದಾಗಿ ತಂದೆ ಈತನಿಗೆ ಬೆದರಿಸಿದ್ದರು. ಘಟನೆಯ ಬಳಿ ತಂದೆಯ ಕೊಲೆ ಮಾಡಿದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಗುನಾ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ (Rajeev Mishra) ತಿಳಿಸಿದ್ದಾರೆ. ಈತ ತನ್ನ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ಬೆರಳಚ್ಚಿನ (fingerprints) ಗುರುತು ತಿಳಿಯಬಾರದು ಎಂಬ ಕಾರಣಕ್ಕೆ ತನ್ನ ಕೈಗಳನ್ನು ಸುಟ್ಟುಕೊಂಡಿದ್ದಾನೆ. ಅಲ್ಲದೇ ನೆರೆಮನೆಯವರು ತನ್ನ ತಂದೆಯನ್ನು ಕೊಂದರು ಎಂದು ಕತೆ ಕಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ತಿಗಾಗಿ ಬೈಕ್‌ಗೆ ಕಾರು ಗುದ್ದಿಸಿ ತಂದೆಯನ್ನೇ ಕೊಂದ ಪಾಪಿ ಮಗ..!

ಬಾಲಕನ ತಂದೆ 46 ವರ್ಷ ಪ್ರಾಯದವರಾಗಿದ್ದು, ಮೆಡಿಕಲ್ ಶಾಪ್  ಹೊಂದಿದ್ದರು. ಶನಿವಾರ ತಡರಾತ್ರಿ ಇವರು ಶವವಾಗಿ ಪತ್ತೆಯಾಗಿದ್ದರು. ತನ್ನ ತಂದೆಯನ್ನು ನೆರೆಮನೆಯವರು ಕೊಂದಿದ್ದಾರೆ. ನೆರೆಮನೆಯವರು ತನ್ನ ತಂದೆಯೊಂದಿಗೆ ಚರಂಡಿಯ ಬಗ್ಗೆ ಜಗಳವಾಡಿದರು ಮತ್ತು ಘೋರ ಪರಿಣಾಮ ಎದುರಿಸಬೇಕಾಗಬಹುದು ಎಂದು ಬೆದರಿಕೆ ಹಾಕಿದರು ಎಂದು ಬಾಲಕ ಹೇಳಿದ್ದ.

ಬಾಲಕನ ಮಾತು ಕೇಳಿ ಪೊಲೀಸರು ನೆರೆಹೊರೆಯವರನ್ನು ಬಂಧಿಸಿದ್ದರು. ಆದರೆ ತನಿಖೆಯಲ್ಲಿ, ಅಪರಾಧ ಸಂಭವಿಸಿದಾಗ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದರಿಂದ ಕುಟುಂಬದ ಸದಸ್ಯರೇ ಕೊಲೆ ಮಾಡಿದ್ದಾರೆ ಎಂಬುದು ಪೊಲೀಸರಿಗೆ ಖಚಿತವಾಗಿದೆ. ನಂತರ ಕುಟುಂಬ ಸದಸ್ಯರನ್ನು ವಿಚಾರಿಸಿದ ಬಳಿಕ ಪೊಲೀಸರು ಬಾಲಕನ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದಾರೆ ಏಕೆಂದರೆ ಆತನ ತನ್ ತಂದೆಯ ಮೃತದೇಹವನ್ನು ಮೊದಲಿಗೆ ನೋಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬಾಲಕನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಿಶ್ರಾ ಹೇಳಿದ್ದಾರೆ.

ಮಗನ ಕೊಲೆಗೆ ಅಪ್ಪನೇ ಸುಪಾರಿ ಕೊಟ್ಟ : ಪುತ್ರ ದ್ವೇಷಕ್ಕೆ ಕಾರಣವೇ ಇದು!

10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ಮನೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ ತಂದೆಯನ್ನು ಕೊಂದಿರುವುದಾಗಿ ಬಾಲಕ ಹೇಳಿದ್ದಾನೆ. ಪರೀಕ್ಷೆಯಲ್ಲಿ ಫೇಲ್ ಆಗುವ ಭಯ ಅವನಿಗಿತ್ತು. ಹೀಗಾಗಿ ಆತ ತಂದೆ ಮಲಗಿದ್ದ ಮೇಲೆ ತಂದೆಯ ಮೇಲೆ ಕೊಡಲಿಯಿಂದ ದಾಳಿ ಮಾಡಿದ. ನಂತರ  ತನ್ನ ಬೆರಳುಗಳನ್ನು ಮೇಣದಬತ್ತಿಯಿಂದ ಸುಟ್ಟು ಹಾಕಿಕೊಂಡ. ಇದರಿಂದಾಗಿ ಕೊಡಲಿಯ ಮೇಲಿನ ಬೆರಳಚ್ಚು ಅವನ ಕೈ ಬೆರಳಚ್ಚಿಗೆ ಹೋಲಿಕೆಯಾಗುವುದಿಲ್ಲ ಎಂಬುದು ಆತನ ಯೋಚನೆಯಾಗಿತ್ತು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಮುಂದೆ ಮಾಡಿದ ಯಾವುದೇ ವ್ಯಕ್ತಿಯ ತಪ್ಪೊಪ್ಪಿಗೆ ಹೇಳಿಕೆಯು ಇತರ ಪುರಾವೆಗಳಿಲ್ಲದೇ ಇದ್ದಲ್ಲಿ ನ್ಯಾಯಾಲಯದ ಮುಂದೆ ಸಾಕ್ಷಿಯಾಗಿ ಸ್ವೀಕಾರಾರ್ಹವಾಗುವುದಿಲ್ಲ. ನ್ಯಾಯಾಧೀಶರ ಮುಂದೆ ಆರೋಪಿ  ತಪ್ಪೊಪ್ಪಿಕೊಂಡಲಿ ಮಾತ್ರ ಸಾಕ್ಷ್ಯವಾಗಿ ಒಪ್ಪಿಕೊಳ್ಳಬಹುದು. ಬಾಲಕನ ತಾಯಿ ಮತ್ತು ಇಬ್ಬರು ಸಹೋದರಿಯರು ಕೂಡ ಘಟನೆ ನಡೆಯುವ ವೇಳೆ ಮನೆಯಲ್ಲಿದ್ದರು ಆದರೆ ಹುಡುಗ ತನ್ನ ತಂದೆಯನ್ನು ಕೊಂದಿರುವುದು ತಮಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ. ಹೀಗಾಗಿ ಇತರ ಕುಟುಂಬ ಸದಸ್ಯರು ಕೂಡ ಈ ಪಿತೂರಿಯಲ್ಲಿ ಪಾತ್ರ ವಹಿಸಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios