ನನ್ನ ಕೆಲಸವನ್ನೊಬ್ಬರು ಗುರುತಿಸಿದರು: ಗುಲಾಂ ನಬಿ ಅಜಾದ್
- ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಗುಲಾಂ ನಬಿ ಅಜಾದ್
- ಜಮ್ಮುಕಾಶ್ಲೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಅಜಾದ್
- ಪ್ರಶಸ್ತಿ ಪ್ರದಾನ ಮಾಡಿದ ರಾಮನಾಥ್ ಕೋವಿಂದ್
ನವದೆಹಲಿ(ಮಾ.22): ಒಬ್ಬರ ಕೆಲಸವನ್ನು ಸಂಸ್ಥೆ ಅಥವಾ ದೇಶ ಗುರುತಿಸಿದಾಗ ಖುಷಿ ಎನಿಸುವುದು ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ (Ghulam Nabi Azad) ಹೇಳಿದ್ದಾರೆ. ನವದೆಹಲಿಯಲ್ಲಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಅವರಿಂದ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದರು.
ನನ್ನ ಬದುಕಿನ ವಿಭಿನ್ನ ಹಂತಗಳಲ್ಲಿ ಏಳುಬೀಳುಗಳ ಮಧ್ಯೆಯೂ ಒಬ್ಬರು ನನ್ನ ಕೆಲಸವನ್ನು ಗುರುತಿಸಿದ್ದು ನನಗೆ ಖುಷಿ ನೀಡಿದೆ. ನಾನು ಯಾವಾಗಲೂ ಜನರಿಗಾಗಿ ಕೆಲಸ ಮಾಡಲು ಶ್ರಮಿಸುತ್ತೇನೆ. ನಾನು ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿ ಅಥವಾ ಜಮ್ಮು ಕಾಶ್ಮೀರದ (ಮಾಜಿ) ಮುಖ್ಯಮಂತ್ರಿಯಾಗಿದ್ದಾಗಲೂ ಜನರಿಗಾಗಿ ಯಾವಾಗಲೂ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮತ್ತು ದೇಶದ ಜನರು ನೀಡಿದ ಪ್ರಶಸ್ತಿಯಿಂದ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.
ಸೋನಿಯಾ ಗಾಂಧಿ-ಗುಲಾಂ ನಬಿ ಅಜಾದ್ ಭೇಟಿ ಅಂತ್ಯ, ನಾಯಕತ್ವದ ಬಗ್ಗೆ ಪ್ರಶ್ನೆಯಿಲ್ಲ ಎಂದ ಆಜಾದ್!
ನಾಯಕತ್ವದ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್‌ನಲ್ಲಿ ಮಂಥನದ ನಡುವೆ ಗಣರಾಜ್ಯೋತ್ಸವದ ಮುನ್ನಾದಿನದಂದು ಪ್ರಶಸ್ತಿಗೆ ಪಟ್ಟಿ ಮಾಡಲಾದ ಇಬ್ಬರು ವಿರೋಧ ಪಕ್ಷದ ನಾಯಕರಲ್ಲಿ ಈ ಗುಲಾಂ ನಬಿ ಅಜಾದ್ ಕೂಡ ಒಬ್ಬರು. ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಕಾಂಗ್ರೆಸ್‌ನ ಒಂದು ವರ್ಗದ ನಾಯಕರಿಂದ ಟೀಕೆಗೂ ಒಳಗಾಗಿದ್ದರು.
ಹಿರಿಯ ಸಿಪಿಎಂ ನಾಯಕ ಮತ್ತು ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ (Buddhadeb Bhattachar) ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದ್ದನ್ನು ಉಲ್ಲೇಖಿಸಿ, ಗುಲಾಂ ನಬಿ ಆಜಾದ್ ಅವರ ಪಕ್ಷದ ಸಹೋದ್ಯೋಗಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ 'ಮಾಡಿದ್ದು ಸರಿ. ಅವರು ಆಜಾದ್ ಆಗಲು ಬಯಸುತ್ತಾರೆ ಗುಲಾಮ್ ಅಲ್ಲ ಎಂದು ಬರೆಯುತ್ತಾ ಗುಲಾಂ ನಬಿ ಅಜಾದ್ ಕಾಲೆಳೆದಿದ್ದರು.
ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ, ಗುಲಾಂ ನಬಿ ಆಜಾದ್ ರಾಜಕೀಯಕ್ಕೆ ಗುಡ್‌ಬೈ?
ಇದೇ ವೇಲೆ ಗುಲಾಂ ನಬಿ ಆಜಾದ್ ಅವರು ತಮ್ಮನ್ನು ಟೀಕಿಸಿದವರ ವಿರುದ್ಧ ವಾಗ್ದಾಳಿ ನಡೆಸಿದರು. ಕೆಲವರು ಯಾವಾಗಲೂ ಅಂತಹ ಪ್ರಶಸ್ತಿಗಳನ್ನು ಏಕೆ ನೀಡುತ್ತಾರೆ ಮತ್ತು ಯಾರಿಗೆ ನೀಡಲಾಗುತ್ತದೆ ಎಂದು ನೋಡಲು ಪ್ರಯತ್ನಿಸುತ್ತಾರೆ. ಆದರೆ ಈ ಪ್ರಶಸ್ತಿ ಪಡೆದವರ ಸಾಧನೆಯನ್ನು ಗುರುತಿಸುವುದಿಲ್ಲ. ಈ ಪ್ರಶಸ್ತಿ ರಾಷ್ಟ್ರವು ನನಗೆ ನೀಡಿದೆ ಎಂದರು.
ಎರಡು ವರ್ಷಗಳ ಹಿಂದೆ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi)ಅವರಿಗೆ ಪತ್ರ ಬರೆದಿದ್ದ ಗುಲಾಂ ನಬಿ ಆಜಾದ್ ಮತ್ತು ಉಳಿದ ನಾಯಕರು, ಕಾಂಗ್ರೆಸ್‌ನಲ್ಲಿನ ನಾಯಕತ್ವದ ಸಮಸ್ಯೆ ಬಗ್ಗೆ ತಿಳಿಸಿದ್ದರು. ಆದರೆ ಆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅತ್ಯಂತ ಕಳಪೆ ಪ್ರದರ್ಶನವನ್ನು ದಾಖಲಿಸಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಈ ವಿಷಯ ಮತ್ತೆ ಭುಗಿಲೆದ್ದಿದೆ.
ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ಮೂರನೇ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ಪ್ರಸ್ತುತ ಆಜಾದ್ ಪಡೆದಿದ್ದಾರೆ. ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳು ಮತ್ತು ಚಟುವಟಿಕೆಗಳ ಕ್ಷೇತ್ರಗಳಲ್ಲಿ ನೀಡಲಾಗುತ್ತದೆ. ಈ ವರ್ಷದ ಪಟ್ಟಿಯು ನಾಲ್ಕು ಪದ್ಮವಿಭೂಷಣ, 17 ಪದ್ಮಭೂಷಣ ಮತ್ತು 107 ಪದ್ಮಶ್ರೀ ಪ್ರಶಸ್ತಿಗಳನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ 34 ಮಹಿಳೆಯರು ಮತ್ತು 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ.