ಬರೋಬರಿ 13 ಅಡಿ ಉದ್ದದ ನಾಗರಹಾವು ಸೆರೆ ಹಿಡಿದ ಉರಗಪ್ರೇಮಿ

  • ಬರೋಬರಿ  13 ಅಡಿ ಉದ್ದದ ನಾಗರಹಾವು ಸೆರೆ
  • ತಾಳೆ ಎಣ್ಣೆ ಗಿಡದ ತೋಟದಲ್ಲಿ ಕಾಣಿಸಿಕೊಂಡ ಹಾವು
  • ರಕ್ಷಿಸಿ ಕಾಡಿಗೆ ಬಿಟ್ಟ ಉರಗಪ್ರೇಮಿ ವೆಂಕಟೇಶ್
snake catcher rescues 13 foot king cobra in Andhra pradesh akb

ವಿಶಾಖಪಟ್ಟಣ: ಭಾರೀ ಗಾತ್ರದ ವಿಷಕಾರಿ ನಾಗರಹಾವೊಂದನ್ನು ಉರಗಪ್ರೇಮಿಯೊಬ್ಬರು ರಕ್ಷಿಸಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ವಂಟ್ಲಮಾಮಿಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ರಕ್ಷಿಸಲ್ಪಟ್ಟ ನಾಗರಹಾವು ಬರೋಬರಿ 13 ಅಡಿ ಉದ್ದವಿತ್ತು ಎಂದು ಆಂಧ್ರಪ್ರದೇಶ ಡಿಡಿ ನ್ಯೂಸ್ ವರದಿ ಮಾಡಿದೆ. ಮೇ 8 ರಂದು ರೈತರೊಬ್ಬರ ತಾಳೆ ಎಣ್ಣೆ ಗಿಡದ ತೋಟದಲ್ಲಿ ಹಾವು ಕಂಡುಬಂದಿದೆ.

ಘಾಟ್‌ ರಸ್ತೆ ಸಮೀಪದ ಸೈದ್ದರಾವ್‌ (Saidarao) ಎಂಬ ರೈತರ ತೋಟದಲ್ಲಿ ಈ ಭಾರಿ ಗಾತ್ರದ ಹಾವು ಪತ್ತೆಯಾಗಿತ್ತು. ಕೂಡಲೇ ರೈತ ಸೈದರಾವ್ ಅವರು ಪೂರ್ವ ಘಟ್ಟಗಳ ವೈಲ್ಡ್‌ಲೈಫ್ ಸೊಸೈಟಿಯ (Wildlife Society) ಸದಸ್ಯ ಹಾವು ಹಿಡಿಯುವ ವೆಂಕಟೇಶ್‌ (Venkatesh) ಅವರಿಗೆ ದೂರವಾಣಿ ಮೂಲಕ ಹಾವು ಇರುವ ಬಗ್ಗೆ ಮಾಹಿತಿ ನೀಡಿದರು. ಸ್ವಲ್ಪ ಸಮಯದ ನಂತರ, ವೆಂಕಟೇಶ್ ರೈತರ ತೋಟವನ್ನು ತಲುಪಿ ಭಾರಿ ಚಾಣಾಕ್ಷತನದಿಂದ ನಾಗರಹಾವನ್ನು ಹಿಡಿದರು. ನಂತರ ಅದನ್ನು ಗೋಣಿ ಚೀಲದಲ್ಲಿ ಹಾಕಿ ವಂಟ್ಲಮಾಮಿಡಿ ಅರಣ್ಯ ಪ್ರದೇಶದಲ್ಲಿ (Vantlamamidi forest area) ಬಿಡಲಾಯಿತು ಎಂದು ಸುದ್ದಿ ವಾಹಿನಿ ಟ್ವೀಟ್ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ವಿಷಪೂರಿತ ಹಾವುಗಳು ಮತ್ತು ಮನುಷ್ಯರ ನಡುವಿನ ಸಂಘರ್ಷದಲ್ಲಿ ಏರಿಕೆ ಕಂಡು ಬಂದಿದೆ. ಜನವಸತಿ ಪ್ರದೇಶಗಳಲ್ಲಿ ಹಾವುಗಳು ಹೆಚ್ಚು ಹೆಚ್ಚು ಕಾಣಿಸುತ್ತಿವೆ. ಜುಲೈ 2020 ರಲ್ಲಿ, ತಮಿಳುನಾಡಿನ (Tamil Nadu) ಅರಣ್ಯ ಇಲಾಖೆಯು ಕೊಯಮತ್ತೂರಿನ (Coimbatore) ನರಸೀಪುರಂ ಗ್ರಾಮದಲ್ಲಿ (Narasipuram village) 15 ಅಡಿ ಉದ್ದದ ನಾಗರಹಾವನ್ನು ಹಿಡಿದಿತ್ತು. ಬಳಿಕ ಹಾವನ್ನು ಸಿರುವಣಿ ಅರಣ್ಯ ಪ್ರದೇಶದಲ್ಲಿ (Siruvani forest area)ಬಿಡಲಾಯಿತು.

ಮನೆಯೊಳಗಿದ್ದ ಮಣ್ಣಿನ ಮಡಕೆಯಲ್ಲಿ ನೂರಾರು ಹಾವುಗಳು, ದೃಶ್ಯ ಕಂಡು ಬೆಚ್ಚಿ ಬಿದ್ದ ಗ್ರಾಮಸ್ಥರು!

ಭಾರತದಲ್ಲಿ ನಾಗರಹಾವುಗಳು ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳು (Western Ghats), ಪಶ್ಚಿಮ ಬಂಗಾಳ (West Bengal) ಮತ್ತು ತೇರಾಯ್ ಪ್ರದೇಶದಲ್ಲಿ (Terai region) ಕಂಡುಬರುತ್ತವೆ. ಜೂನ್ 2021 ರಲ್ಲಿ ಹಿಮಾಚಲ ಪ್ರದೇಶದಲ್ಲಿ (Himachal Pradesh)  ರಾಜ ನಾಗರಹಾವು ಕಾಣಿಸಿಕೊಂಡಾಗ, ರಾಜ್ಯದಲ್ಲಿ ಮೊದಲ ಬಾರಿಗೆ ನಾಗರಹಾವು ಕಾಣಿಸಿಕೊಂಡಿದೆ  ಎಂದು ಅರಣ್ಯ ಇಲಾಖೆ  ದಾಖಲಿಸಿತ್ತು. 2010 ರಿಂದ ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ಸ್ ರೆಡ್ ಲಿಸ್ಟ್‌ನಲ್ಲಿರುವ ನಾಗರಹಾವು ವಿಶ್ವದ ಅತಿ ಉದ್ದದ ವಿಷಕಾರಿ ಹಾವು ಆಗಿದೆ. ಇದು 18.5 ಅಡಿ ಉದ್ದದವರೆಗೆ ಬೆಳೆಯುತ್ತದೆ.

4 ರಿಂದ 5 ಹಾವುಗಳು ಸುರುಳಿ ಸುತ್ತಿಕೊಂಡ ವಿಡಿಯೋ ವೈರಲ್ 

ಬಿಲದೊಳಗೆ ಹಾವು ಅದೆಷ್ಟು ವರ್ಷವಾದರೂ ಇರಬಲ್ಲದು. ಆದರೆ ಮುಚ್ಚಿದ ಗಾಜಿನ ಜಾರಿನೊಳಗೆ ಆಹಾರ, ಗಾಳಿ ಯಾವುದೂ ಇಲ್ಲದೆ ಇರಲು ಸಾಧ್ಯವೇ? ಸಾಧ್ಯ ಅನ್ನೋದು ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ವಿಷಪೂರಿತ ಹಾವನ್ನು ಗಾಜಿನ ಜಾರಿನಲ್ಲಿ ಭದ್ರವಾಗಿ ಮುಚ್ಚಿ ಇಡಲಾಗಿತ್ತು. ಒಂದು ವರ್ಷದ ಬಳಿಕ ತೆರೆದಾಗ ಆಘಾತ ಎದುರಾಗಿದೆ. ಕಾರಣ ಮುಚ್ಚಳ ತೆರೆಯುತ್ತಿದ್ದಂತೆ ಹಾವು ಆತನ ಕೈಗೆ ಕಚ್ಚಿದ ಘಟನೆ ನಡೆದಿದೆ. ಚೀನಾದ ಹೇಲಿಯಾಂಗ್‌ ಜಿಯಾಂಗ್‌ನಲ್ಲಿ ಈ ಘಟನೆ ನಡೆದಿದೆ. ತನ್ನ ಮಗನ ದೀರ್ಘಕಾಲದ ಅನಾರೋಗ್ಯದ ಚಿಕಿತ್ಸೆಗಾಗಿ ತಂದೆ ವಿಷಪೂರಿತ ಹಾವನ್ನು ಜಾರಿನೊಳಗೆ ಇಟ್ಟಿದ್ದರೆನ್ನಲಾಗಿದೆ. ಗಾಜಿನ ಜಾರಿನೊಳಗೆ ಮೆಡಿಸಿನಲ್ ವೈನ್ ಹಾಕಿ ಅದರೊಳಗೆ ಹಾವನ್ನು ಮುಳುಗಿಸಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗಿತ್ತು.

Latest Videos
Follow Us:
Download App:
  • android
  • ios