ಅಮೇಥಿ(ಫೆ.23): ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಯಲ್ಲಿ ನಿವೇಶನ ಖರೀದಿಸಿದ್ದಾರೆ. ಅಲ್ಲಿಯೇ ಅವರು ತಮ್ಮ ಮನೆಯನ್ನೂ ನಿರ್ಮಿಸಲಿದ್ದಾರೆ. ಅಮೇಥಿಯಲ್ಲಿಯೇ ಮನೆ ಮಾಡಿಕೊಂಡ ಅಲ್ಲಿನ ಮೂರನೇ ಸಂಸದೆಯಾಗಿದ್ದಾರೆ ಸ್ಮೃತಿ.

ಅಮೇಥಿಗೆ ಬಂದ ಸಚಿವೆ ನಿವೇಶನ ಖರೀದಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. 12.11 ಲಕ್ಷ ರೂಪಾಯಿ ಕೊಟ್ಟು 11 ಬಿಸ್ವ ಭೂಮಿ ಖರೀದಿಸಿದ್ದಾರೆ. ಪೂಲಮತಿ ದೇವಿ ಎಂಬಚವರಿಂದ ಈ ಭೂಮಿ ಖರೀದಿಸಲಾಗಿದೆ.

ಕೃಷಿ ಕಾಯ್ದೆ ವಿರುದ್ಧ ರಾಹುಲ್‌ ‘ಟ್ರ್ಯಾಕ್ಟರ್‌ ರ‍್ಯಾಲಿ’!

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿಯನ್ನು ಸೋಲಿಸಿ  ಅಮೇಥಿಯ ತಿಲೋಯ್ನಲ್ಲಿ ನೀಡಿದ್ದ ಮಾತಿನಂತೆ ಭೂಮಿ ಖರೀದಿ ಮಾಡಿದ್ದಾರೆ.

ಅಮೇಥಿ ಮತ್ತು ರಾಯ್ ಬರೇಲಿಯ ಪ್ರತಿ ಗ್ರಾಮದ ಜನರನ್ನು ಭೂಮಿಪೂಜೆಗೆ ಆಹ್ವಾನಿಸುವುದಾಗಿ ಸ್ಮೃತಿ ಹೇಳಿದ್ದಾರೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಅಯೋಧ್ಯೆ ಅಭಿವೃದ್ಧಿಗೆ ಬಜೆಟ್‌ನಲ್ಲಿ 640 ಕೋಟಿ!

ಜನರು ಯಾವಾಗಲೂ ಸಂಸದರು ನಮಗೆ ಸಿಗುತ್ತಾರಾ ಎಂಬ ನಿರೀಕ್ಷೆಯಲ್ಲಿರುತ್ತಾರೆ. ಕನಿಷ್ಠ ನಾನು ಜನರ ಈ ನಿರೀಕ್ಷೆ ಪೂರ್ತಿಗೊಳಿಸಿದ ಖುಷಿ ನನ್ನಲ್ಲಿದೆ ಎಂದಿದ್ದಾರೆ.